ಟಿವಿ ಪಲ್ಲವಿ ನೋಡುಗರ ಅನುಪಲ್ಲವಿ

ಟಿವಿ ಪಲ್ಲವಿ ನೋಡುಗರ ಅನುಪಲ್ಲವಿ

     4-5 ವರ್ಷದ ಹೆಣ್ಣು ಮಗುವನ್ನು ಹೇಗೆ ಸಾಯಿಸಬೇಕು, ಯಾವ ರೀತಿ ಯೋಜನೆಗಳನ್ನು ಹಾಕಬೇಕು, ಅವಳಿಗೆ ಹಾವು ಕಚ್ಚಿದರೆ ಒಳ್ಳೆಯ ಚಿಕಿತ್ಸೆ ಕೊಡದೆ ಸಾಯಿಸಬೇಕೆಂದು ಡಾಕ್ಟರರಿಗೆ ಲಂಚ ಕೊಡಬೇಕೇ? ಅಲಮೈರಾದಲ್ಲಿ ತುರುಕಿ ಬೀಗ ಹಾಕಿ ಉಸಿರುಗಟ್ಟಿಸಿ ಸಾಯಿಸಬೇಕೇ? ಕಣ್ಣಾಮುಚ್ಚೆ ಆಟ ಆಡುವ ನೆಪದಲ್ಲಿ ಮಗುವಿಗೆ ಕಣ್ಣಿಗೆ ಬಟ್ಟೆ ಕಟ್ಟಿ ನೀರಿನ ಸಂಪಿನೊಳಗೆ ಮುಳುಗಿಸಬೇಕೇ? ಮಹಡಿಯ ಮೇಲಿನಿಂದ ದೂಕಬೇಕೇ? ಮಗುವನ್ನು ಅಪಹರಿಸಿ ಕೊಲೆ ಮಾಡಲು ಸುಪಾರಿ ಕೊಡಬೇಕೆ?, , , , , ಇತ್ಯಾದಿ ಹಲವಾರು ಪ್ಲಾನುಗಳು ನಿಮಗೆ ಬೇಕೇ? ಸಾಯಿಸಿದರೂ ಅನುಮಾನ ಬರದಂತೆ ಹೇಗೆ ಸಾಯಿಸಬಹುದು? ಅದರಲ್ಲೂ ಮಗುವಿನ ಅಜ್ಜಿ, ಚಿಕ್ಕಪ್ಪ, ಅತ್ತೆ, ಹತ್ತಿರದ ಸಂಬಂಧಿಗಳು ಮಗುವನ್ನು ಸಾಯಿಸುವ ಯೋಚನೆಯಲ್ಲೇ ಸದಾ ಇರುವುದನ್ನು ಕಾಣಬೇಕೇ? ಹಾಗಾದರೆ ಸುವರ್ಣ ಚಾನೆಲ್ಲಿನಲ್ಲಿ ಪ್ರಸಾರವಾಗುತ್ತಿರುವ 'ಪಲ್ಲವಿ ಅನುಪಲ್ಲವಿ' ಧಾರಾವಾಹಿ ತಪ್ಪದೆ ನೋಡಿ. ನಿಮಗೂ ಇಂತಹ ಹಲವಾರು ಮನೆಹಾಳು ಐಡಿಯಾಗಳು ಬರಬಹುದು. ಈ ಧಾರಾವಾಹಿ ನಿಮಗೆ ಇಷ್ಟವಾದರೆ ಅದರ ಲೇಖಕರು, ಪಾತ್ರಧಾರಿಗಳು, ಚಾನೆಲ್ ಮಾಲಿಕರು, ಕಾರ್ಯಕ್ರಮ ನಿರ್ವಾಹಕರು, ಪ್ರಾಯೋಜಕರು,... ಎಲ್ಲರನ್ನೂ ಅಭಿನಂದಿಸಿರಿ. ಇದು ವಿಕೃತರ ಸೃಷ್ಟಿ ಎನ್ನಿಸಿದರೆ ಸಂಬಂಧಿಸಿದವರಿಗೆ ಧಿಕ್ಕಾರ-ಗಟ್ಟಿಧ್ವನಿಯ ಧಿಕ್ಕಾರ ಹೇಳಲು ಮರೆಯದಿರಿ.

    ಇಂದು ದೇಶದಲ್ಲಿ ನಡೆಯುತ್ತಿರುವ ಕೊಲೆ, ಸುಲಿಗೆ, ಅತ್ಯಾಚಾರಗಳು, ಭ್ರಷ್ಠಾಚಾರದ ಹೆಚ್ಚಳಕ್ಕೆ ದೃಷ್ಯ ಮಾದ್ಯಮದ ಕಾಣಿಕೆ ಕಡಿಮೆಯೇನಲ್ಲ!

Comments

Submitted by Shobha Kaduvalli Thu, 01/03/2013 - 20:31

ಅಷ್ಟೇ ಅಲ್ಲ‌.......... ........ ವಿವಾಹ‌ ಬಾಹಿರ‌ ಸಂಬಧ ಮಾಡಲು ಟಿಪ್ಸ್ ಬೇಕೇ? ... ಒಬ್ಬಳು ಹೆಂಡತಿ ಇರುವಾಗಲೇ ಮಗ ಅಥವಾ ಮೊಮ್ಮಗನಿಗೆ ಇನ್ನೊಂದು ಮದುವೆ ಮಾಡಬೇಕೇ?...ತಂತ್ರ, ಕುತಂತ್ರಗಳನ್ನು ಕಲಿಯಬೇಕೇ?.... ಹಾಗಾದರೆ ತಪ್ಪದೇ ನೋಡಿ E TV ಚಾನೆಲ್ ನ ಧಾರಾವಾಹಿ "ಶುಭ ಮಂಗಳ" .
Submitted by partha1059 Fri, 01/04/2013 - 19:19

ಸ್ವಲ್ಪ ದಿನ ಕಾಯಿರಿ , ಇನ್ನು ಮೇಲೆ ನಗರಗಳಲ್ಲಿ ರೌಡಿಗಳು ಕೊಲೆಗೆ ಸ್ಕೆಚ್ ಹಾಕುವದರಿಂದ ಹಿಡಿದು ಕೊಲೆಮಾಡುವ ದೃಷ್ಯಗಳನ್ನು ಡೈರೆಕ್ಟ್ ಸ್ಟ್ರೀಮಿಂಗ್ ಮಾಡಿ ರೋಚಕವಾಗಿ ಆನ್ ಲೈನ್ ನಲ್ಲಿ ತೋರಿಸ್ತಾರೆ ಪೋಲಿಸ್ ರು ಕುಳಿತು ನೋಡ್ತಾರೆ
Submitted by kavinagaraj Sat, 01/05/2013 - 11:36

In reply to by partha1059

:(( ಕಾಯಬೇಕಾದ ಸ್ಥಿತಿಯಿಲ್ಲ, ಪಾರ್ಥರೇ. ಈಗಾಗಲೇ ಇದು ನಡೆಯುತ್ತಿದೆ. ಯಾರಿಗಾದರೂ ಚಪ್ಪಲಿಯಲ್ಲಿ ಹೊಡೆಯುವ/ಅವಮಾನಿಸುವ ಘಟನೆಗಳು/ದೃಷ್ಯಗಳು ಪೂರ್ವಯೋಜಿತವಾಗಿರುತ್ತವೆ.
Submitted by ಗಣೇಶ Sat, 01/05/2013 - 00:17

ಪಲ್ಲವಿ ಅನುಪಲ್ಲವಿಗೆ ಧಿಕ್ಕಾರ..ಶುಭಮಂಗಳಕ್ಕೆ ಧಿಕ್ಕಾರ.. ಮಚ್ಚು ಲಾಂಗ್ ಸಿನೆಮಾಗಳಿಗೆ, ಹೆಣ್ಣನ್ನು ಕೆಟ್ಟದಾಗಿ ತೋರಿಸುವ ಧಾರವಾಹಿ/ಸಿನೆಮಾಗಳಿಗೆ ಧಿಕ್ಕಾರ. ಮೊದಲೆಲ್ಲಾ ಕೊಲೆಯಾಯಿತು ಎಂದು ಮಾರನೇ ದಿನ ಪತ್ರಿಕೆಗಳಲ್ಲಿ ಒಂದೆರಡು ಲೈನ್ ೨/೩ನೇ ಪುಟದಲ್ಲಿ ಬರುತ್ತಿದ್ದರೆ, ಈಗ ಕೊಲೆಯನ್ನು ಹೀಗಿರಬಹುದೆಂದು ಚಿತ್ರೀಕರಣ ಮಾಡಿ ರಾತ್ರಿ ಕ್ರೈಂ ವರದಿಯಲ್ಲಿ ತೋರಿಸಿಯಾಗುವುದು. ಮುಂದೆ ಪಾರ್ಥರು ಹೇಳಿದಂತೆ..
Submitted by venkatb83 Sat, 01/05/2013 - 16:23

In reply to by kavinagaraj

ಪಾಪ ಪಾಂಡು-ಸಿಲ್ಲಿ ಲಲ್ಲಿ ಯೇ ಕೊನೆಯ ಧಾರಾವಾಹಿಗಳು ನಾವ್ ನೋಡಿದ್ದು... ! ಧಾರಾವಾಹಿಗಳು ಬಿಡಿ -ಈಗೀಗ ಸುದ್ಧಿ ಮಾಧ್ಯಮಗಳ ಚಾನೆಲ್ಲುಗಳನ್ನು ನೋಡೋದೇ ಇಲ್ಲ.... ಸೋ ನಮಗೆ ಯಾವದೇ ಸಮಸ್ಯೆ ಇಲ್ಲ...!! ಆದರೂ ನಿಮ್ ಜೊತೆ ನಂದೂ ಒಂದು ಧಿಕ್ಕಾರ..!! ಸಕಾಲಿಕ ಬರಹ ಹಿರಿಯರೇ.. ಶುಭವಾಗಲಿ.. \|
Submitted by Shobha Kaduvalli Sat, 01/05/2013 - 20:12

In reply to by venkatb83

ಎಲ್ಲರೂ ಯಾವುದೇ ಸ‌oಕೋಚವಿಲ್ಲದೆ, ಮುಜುಗರವಿಲ್ಲದೆ ನೋಡಬಹುದಾದ‌oತಹ‌ ಧಾರಾವಾಹಿಎoದರೆ "ಮುಕ್ತ‌ ಮುಕ್ತ‌"" " ಕೆಲವೊoದು ಸನ್ನಿವೇಷಗಳನ್ನು ಹೊರತುಪಡಿಸಿದರೆ (ಸಿ.ಎಸ್.ಪಿ. ಆಫೀಸ್ ದ್ಱಷ್ಯಗಳು) ಮನೆಮ‌oದಿಎಲ್ಲಾ ಕುಳಿತು ನೋಡಬಹುದಾದ‌ ಧಾರಾವಾಹಿ, ಮುಕ್ತ‌ ಮುಕ್ತ‌. .
Submitted by ಗಣೇಶ Mon, 01/07/2013 - 00:15

In reply to by Shobha Kaduvalli

ಮನೆ ಮಂದಿ ಎಲ್ಲಾ ಕುಳಿತು ನೋಡಬಹುದಾದ ಧಾರಾವಾಹಿ-..ಮಾತು ಮಾತು ಮಾತು..ಕ್ಯಾಮರಾಮನ್ ಒಂದು ಆಂಗ್‌ಲ್ ಅಲ್ಲಿ ಕ್ಯಾಮರಾ ಇಟ್ಟು ಹೋದರಾಯಿತು......ಟಿ.ವಿ.ತುಂಬಾ ಒಬ್ಬರ ಮುಖ..:). ನನಗೆ ಇಷ್ಟವಾದ ಧಾರಾವಾಹಿಗಳು: ೧."ಒಗ್ಗರಣೆ ಡಬ್ಬಿ":) ೨. ಬೊಂಬಾಟ್ ಭೋಜನ.:)