ಟೆಕ್-ಕನ್ನಡ ಎಂಬ ಹೊಸ ತಾಣ

ಟೆಕ್-ಕನ್ನಡ ಎಂಬ ಹೊಸ ತಾಣ

ಬರಹ

 

ಕನ್ನಡ ಭಾಷೆಯಲ್ಲಿ ಜನರಿಗೆ ಸರಳವಾಗಿ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಲು ಹಾಗೂ ಲೇಖನಗಳನ್ನು ಬರೆಯಲು ಟೆಕ್-ಕನ್ನಡ (http://techkannada.blogspot.com) ಎಂಬ ತಾಣವನ್ನು ಪ್ರಾರಂಭಿಸಿದ್ದೇವೆ. ಇದರಲ್ಲಿ ವಿಜ್ಞಾನ-ತಂತ್ರಜ್ಞಾನದ ಬಗೆಗಿನ ಲೇಖನಗಳನ್ನು ಪ್ರಕಟಿಸುವ ಉದ್ದೇಶವಿದೆ. ಹಾಗೂ ಅಂತರ್ಜಾಲದಲ್ಲಿ ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲಿ ಮಾಹಿತಿ ನೀಡುವ ತಾಣಗಳ ಲಿಂಕ್‌ನ್ನು ಟೆಕ್-ಕನ್ನಡದಲ್ಲಿ ನೀಡಲಾಗುವುದು. ನೀವೂ ಕೂಡ ಈ ತಾಣದಲ್ಲಿ ಲೇಖನಗಳನ್ನು ಬರೆಯಬಹುದು. ಅದಕ್ಕಾಗಿ techkannada(at)gmail(dot)com ಗೆ ಒಂದು ಇ-ಅಂಚೆ ಕಳುಹಿಸಿಕೊಡಿ. ನಂತರ ನಿಮ್ಮನ್ನು ಲೇಖಕರನ್ನಾಗಿ  ಸೇರಿಸಿಕೊಳ್ಳಲಾಗುವುದು. (ನೂರು ಜನರಿಗೆ authorಗಳಾಗುವ ಅವಕಾಶವಿದೆ. ಎಲ್ಲರಿಗೂ ಅವಕಾಶ ನೀಡುವ ಉದ್ದೇಶದಿಂದ ಹೆಚ್ಚು ಕ್ರಿಯಾಶೀಲರಾಗಿರುವವರನ್ನು ಉಳಿಸಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗೆ techkannada[at]gmail[dot]com ಸಂಪರ್ಕಿಸಿ.) ಅಥವಾ ನೀವು ಅನುಮತಿ ನೀಡಿದರೆ ನಿಮ್ಮ ಲೇಖನಗಳನ್ನು ನಿಮ್ಮ ಹೆಸರಿನ ಜೊತೆ ಟೆಕ್-ಕನ್ನಡದಲ್ಲಿ ಪ್ರಕಟಿಸಲಾಗುವುದು. ಲೇಖನಗಳನ್ನು ಮೇಲಿನ ಇ-ಅಂಚೆ ವಿಳಾಸಕ್ಕೆ ಕಳುಹಿಸಬಹುದು. (ಲೇಖಕರಿಗಾಗಿ ಸೂಚನೆಗಳನ್ನು ಇಲ್ಲಿ ಓದಬಹುದು). ಹಾಗೂ ಈ ತಾಣವನ್ನು ನಿರ್ವಹಿಸುವಲ್ಲಿ ಆಸಕ್ತಿ ಹೊಂದಿದ್ದರೆ ಅಂತಹವರನ್ನು Adminಗಳಾಗಿ ಸೇರಿಸಲಾಗುವುದು. ನೀವು Adminಗಳಾಗಲು ಬಯಸಿದಲ್ಲಿ ಅದನ್ನು ನಿಮ್ಮ ಇ-ಅಂಚೆಯಲ್ಲಿ ಸ್ಪಷ್ಟವಾಗಿ ತಿಳಿಸಬೇಕು. ಹಾಗೂ ಟೆಕ್-ಕನ್ನಡೇತರ Adminಗಳು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ನಿಯಮಗಳನ್ನು ಇಲ್ಲಿ ಓದಿಕೊಳ್ಳಬೇಕು.

ಇದರ ಮೊದಲ ಪ್ರಯತ್ನವಾಗಿ ಸದಸ್ಯರೊಬ್ಬರು ಸಂಪದದಲ್ಲಿ ಪ್ರಕಟಿಸಿರುವ ತಂತ್ರಜ್ಞಾನ ಸಂಬಂಧಿ ಲೇಖನಗಳನ್ನು ಅವರ ಅನುಮತಿಯೊಂದಿಗೆ ಟೆಕ್-ಕನ್ನಡದಲ್ಲಿ ಹಾಕಲಾಗಿದೆ ಹಾಗೂ ಕೆಲವು ಕನ್ನಡ ತಾಣಗಳಿಗೆ ಲಿಂಕ್ ನೀಡಲಾಗಿದೆ. ಇದರ ಯಶಸ್ಸಿಗೆ ನಿಮ್ಮೆಲ್ಲರ ಸಹಕಾರ ಅತಿ ಮುಖ್ಯ. ನೀವೂ ಈ ಪ್ರಯತ್ನದಲ್ಲಿ ಭಾಗವಹಿಸಿ ಹಾಗೂ ನಿಮ್ಮ ಸ್ನೇಹಿತರನ್ನೂ ಟೆಕ್-ಕನ್ನಡಕ್ಕೆ ಕರೆತನ್ನಿ. ಕನ್ನಡದಲ್ಲಿ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುವ ಇತರ ತಾಣಗಳು ನಿಮಗೆ ಗೊತ್ತಿದ್ದರೆ ಅದರ ವಿಳಾಸ (URL) ತಿಳಿಸಿ. ಆ ತಾಣಕ್ಕೆ ಟೆಕ್-ಕನ್ನಡದಲ್ಲಿ ಒಂದು ಲಿಂಕ್ ಕೊಡಲಾಗುವುದು. 



ಟೆಕ್-ಕನ್ನಡಕ್ಕೆ ನಿಮ್ಮಿಂದ ಈ ಸಹಾಯಗಳು ದೊರೆಯಬಹುದೇ:

  • ಈ ತಾಣಕ್ಕೆ ನಿರ್ವಾಹಕರಾಗಿ
  • ಈ ತಾಣಕ್ಕೆ  ಲೇಖಕರಾಗಿ
  • ಈ ತಾಣವನ್ನು ನಿಮ್ಮ  ಸ್ನೇಹಿತರಿಗೆ ತಿಳಿಸಿ
  • ಕನ್ನಡದ ಇತರ ತಾಂತ್ರಿಕ ತಾಣಗಳ ವಿಳಾಸ ನಮಗೆ ತಿಳಿಸಿ
  • ಈ ತಾಣವನ್ನು Follow ಮಾಡಬಹುದು



ಟೆಕ್‌-ಕನ್ನಡದ ಇನ್ನೊಂದು ವಿಳಾಸ: http://techkannada.co.nr

ಟೆಕ್-ಕನ್ನಡ ಇತರ ತಾಣಗಳಲ್ಲಿ:
ಸಂಪದದಲ್ಲಿ ಟೆಕ್-ಕನ್ನಡ ಪ್ರೊಫೈಲ್
ಟ್ವಿಟರ್‌ನಲ್ಲಿ
ಫೇಸ್‌‌ಬುಕ್‌‌ನಲ್ಲಿ
ಆರ್ಕುಟ್‌‌ನಲ್ಲಿ
 

ಧನ್ಯವಾದಗಳೊಂದಿಗೆ,
-ಟೆಕ್-ಕನ್ನಡ ಬಳಗ.

 

(ಈ ನಮ್ಮ ಪ್ರಯತ್ನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ತಿಳಿಸಿ)