ಟೆಕ್ ಸಂಪದ - ಕನ್ನಡದಲ್ಲಿ ತಂತ್ರಜ್ಞಾನದ ಮಜಲು

ಟೆಕ್ ಸಂಪದ - ಕನ್ನಡದಲ್ಲಿ ತಂತ್ರಜ್ಞಾನದ ಮಜಲು

ಬರಹ

ನಾವು ಸಂಪಾದಿಸಿದ ಜ್ಞಾನವನ್ನ ಇತರರೊಂದಿಗೆ ಹಂಚಿಕೊಳ್ಳಲಿಕ್ಕೆ ನನ್ನ ಮಾತೃಭಾಷೆಗಿಂತ ಸುಲಭವಾದ ಮಾಧ್ಯಮ ನಮಗೆ ದೊರೆಯಲಿಕ್ಕಿಲ್ಲ. ಅದರಲ್ಲೂ ವಿಜ್ಞಾನ/ತಂತ್ರಜ್ಞಾನದ ವಿಷಯಗಳನ್ನ ಹಂಚಿಕೊಳ್ಳುವಾಗ, ಉದಾಹರಣೆಗಳನ್ನು ನೀಡುವಾಗ ಮಾತೃಭಾಷೆನಮ್ಮ ಕೆಲಸವನ್ನ ಸುಲಭಗೊಳಿಸುತ್ತದೆ. ಪ್ರತಿನಿತ್ಯದ ಬಳಕೆಯಲ್ಲಿರುವ ಭಾಷೆ ಜನರ ಮನಸ್ಸಿನಲ್ಲಿ ಹಾಸುಹೊಕ್ಕಾಗಿರುವುದರಿಂದ ಅವರಿಗೆ ತಮ್ಮ ಭಾಷೆಯಲ್ಲಿ ದೊರೆಯುವ ಸುದ್ದಿ ಹೊಸ ವಿಷಯವನ್ನ ಸುಲಭವಾಗಿ ಅರಗಿಸಿಕೊಳ್ಳಲಿಕ್ಕೆ ಸಹಾಯ ಮಾಡುತ್ತದೆ.

ಕನ್ನಡಿಗರು ತಂತ್ರಜ್ಞಾನದ ಮಟ್ಟಿಗೆ ಜಾಣರಾಗ್ಬೇಕು, ತಮ್ಮ ಸರ್ಕಾರ, ಶಾಲಾ ಕಾಲೇಜುಗಳು, ಕನ್ನಡಿಗರ ಮನೆಯಲ್ಲಿ ಉಪಯೋಗಿಸಲ್ಪಡುವ ತಂತ್ರಾಂಶಗಳು ಕನ್ನಡಲ್ಲಿರಬೇಕು, ಯುನಿಕೋಡ್ ಮುಂತಾದ ಮುಂದುವರೆದ ತಂತ್ರಜ್ಞಾನವನ್ನ ಕಂಪ್ಯೂಟರೀಕರಣದಲ್ಲಿ ಅಳವಡಿಸಿಕೊಂಡು ನಾಗಾಲೋಟದಿಂದ ಜಿಗಿಯುತ್ತಿರುವ ತಂತ್ರಜ್ಞಾನ ಜಗತ್ತಿನೊಂದಿಗೆ ಹೆಜ್ಜೆಯಿಡಬೇಕು ಎಂದು ಅರುಹಿದ, ಇದರ ಬಗ್ಗೆ ಅನೇಕ ಕನಸುಗಳನ್ನು ಕಂಡ, ಜನರ ಭಾಷೆಯಲ್ಲಿ ತಂತ್ರಜ್ಞಾನವನ್ನ ತಮ್ಮ ಪುಸ್ತಕಗಳ ಮೂಲಕ ತಿಳಿಸಿಕೊಟ್ಟ ಡಾ|| ಪೂರ್ಣಚಂದ್ರ ತೇಜಸ್ವಿ,, ತಮ್ಮ ವೈಜ್ಞಾನಿಕ ಲೇಖನಗಳಿಂದ ಚಿಕ್ಕವಯಸ್ಸಿನಿಂದಲೂ ನಮ್ಮೆಲ್ಲರ ಸ್ಪೂರ್ತಿ ಮತ್ತು ಮನೆಮಾತಾಗಿರುವ, ಈಗಲೂ ಅವರ ಲೇಖನಗಳಿಗೆ ಕಾತುರದಿಂದ ಕಾಯುವಂತೆ ಮಾಡುತ್ತಿರುವ ನಾಗೇಶ್ ಹೆಗ್ಡೆಯವರು ಹಾಗು ಕನ್ನಡದ ಇನ್ನು ಅನೇಕ ಲೇಖಕರ "ಕನ್ನಡದಲ್ಲಿ ತಂತ್ರಜ್ಞಾನ" ಎಂಬ ಕನಸನ್ನು ನನಸಾಗಿಸಲು, ಅವರ ಕನಸಿನ ಬೀಜವನ್ನು ಮುಂದಿನ ಜನಾಂಗಕ್ಕೂ ಬಿತ್ತಲು ಮಾಡಲು ಸಂಪದದ ತಂತ್ರಜ್ಞರ ತಂಡ "ಟೆಕ್ ಸಂಪದ" ವನ್ನ ಸಂಪದಿಗರ ಮುಂದಿಟ್ಟಿದೆ. ಜನಸಾಮಾನ್ಯನಿಗೆ ತಂತ್ರಜ್ಞಾನವನ್ನು ತಲುಪಿಸುವ ಮಜಲು "ಟೆಕ್ ಸಂಪದ". ಇದನ್ನು ಸಂಪದಿಗರ ಮುಂದಿಡಲೇಬೇಕು ಅಂತ ಪಟ್ಟುಹಿಡಿದು ಕುಂತದ್ದು ನಮ್ಮ ಮುರಳಿ. ಅದಕ್ಕೆ ಜೀವ ತುಂಬಿದ್ದು ನಮ್ಮೆಲರ ಹೆಚ್.ಪಿ.ಎನ್. 

ಟೆಕ್ ಸಂಪದ

techsampada

http://tech.sampada.net

 

ಟೆಕ್ ಸಂಪದದಲ್ಲಿ ನಿಮಗೆ ಕಾಣಬರುವ ವಿಭಾಗಳು ಇಂತಿವೆ. (ಲಾಗಿನ್ ಆಗಲು ಸಂಪದದ ಐಡಿ ಬಳಸಬಹುದು)

ಅಂಕಣ
'ಟೆಕ್ ಸಂಪದ' ಅಂಕಣ.
ಚಿತ್ರಪುಟ
ಚಿತ್ರಪುಟಗಳನ್ನು ಸೇರಿಸಲು ಈ ಆಯ್ಕೆ ಬಳಸಿ.
ಟೆಕ್ opening
      ಸಂಪದಿಗರಿಗೆ ಉದ್ಯೋಗ ಮಾಹಿತಿ ನೀಡಿ. 
ಟೆಕ್ Poll
'ಟೆಕ್ Poll' - ಜನಮತ ಸೇರಿಸಲು ಈ ಆಯ್ಕೆ ಕ್ಲಿಕ್ ಮಾಡಿ.
ಮಾಹಿತಿಪುಟ
ಮಾಹಿತಿ ಪುಟಗಳನ್ನು ಸೇರಿಸಲು ಈ ಆಯ್ಕೆ ಬಳಸಿ.
'ಟೆಕ್' ಕಾರ್ಯಕ್ರಮ
ತಂತ್ರಜ್ಞಾನ ಕುರಿತ ಕಾರ್ಯಕ್ರಮವೊಂದರ ವಿವರ ಸೇರಿಸಲು ಈ ಆಯ್ಕೆ ಬಳಸಿ.
'ಟೆಕ್' ಚರ್ಚೆ ವಿಷಯ
ತಂತ್ರಜ್ಞಾನ ಕುರಿತ ಚರ್ಚೆ ಪುಟವೊಂದನ್ನು ಸೇರಿಸಲು ಈ ಆಯ್ಕೆ ಬಳಸಿ.
'ಟೆಕ್' ಪುಸ್ತಕ ಪುಟ
'ಟೆಕ್ ಸಂಪದ' ಪುಸ್ತಕ ಪುಟ. (ಹೊಸ ಪುಟಗಳಿಗೆ ಮಾತ್ರ ಈ ಆಯ್ಕೆ ಬಳಸಿ. ಈಗಾಗಲೇ ಇರುವ ಪುಟವನ್ನು ಲಗತ್ತಿಸಲು ಅಯಾ ಪುಟದಲ್ಲಿ ಎಡಿಟ್ ಬಟನ್ ಕ್ಲಿಕ್ ಮಾಡಿ.)
'ಟೆಕ್' ಪ್ರಶ್ನೆ
ತಂತ್ರಜ್ಞಾನ ಕುರಿತ ನಿಮ್ಮ ಪ್ರಶ್ನೆ ಸೇರಿಸಿ.
'ಟೆಕ್' ಸುದ್ದಿ
ತಂತ್ರಜ್ಞಾನ ಕುರಿತ ಸುದ್ದಿ ಸೇರಿಸಲು ಈ ಆಯ್ಕೆ ಬಳಸಿ.

ಪ್ರಪಂಚದಾದ್ಯಂತ ಇಂದು ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಕೆಲಸಮಾಡುತ್ತಿರುವ ಕನ್ನಡಿಗರೆಲ್ಲರಿಗೆ ಕನ್ನಡದಲ್ಲಿ ತಮ್ಮ ಜ್ಞಾನವನ್ನ ಹಂಚಿಕೊಳ್ಳಲಿಕ್ಕೆ "ಟೆಕ್ ಸಂಪದ" ಒಂದು ವೇದಿಕೆಯಾಗಲಿ ಎಂದು ಹಾರೈಸುತ್ತ. 

ನಿಮ್ಮ,
ಓಂಶಿವಪ್ರಕಾಶ್