ಟೈನಿ ಯು.ಆರ್.ಎಲ್ : ಚಿಕ್ಕದಾಗಿದ್ದರೇನೆ ಚೊಕ್ಕ

ಟೈನಿ ಯು.ಆರ್.ಎಲ್ : ಚಿಕ್ಕದಾಗಿದ್ದರೇನೆ ಚೊಕ್ಕ

ಬರಹ

ಕ್ರೋಮ್ ಬಂತು ಅಂತ ಮೊದಲು ನೋಡಿದ್ದು  ಲಿನಕ್ಸ್ ನಲ್ಲಿ ಕೆಲಸ ಮಾಡಿದಾಗ. ಗೂಗಲ್ ನವರು ಎಂತ ಜಾಣರೆಂದರೆ, ಬ್ರೌಸರ್ ಹೆಸರು ಕಂಡು ಹಿಡಿದ ಡೌನ್ಲೋಡ್ ಲಿಂಕ್ ಕಾಣಿಸೋ ತರ ಮಾಡ್ತಾರೆ. 

ನಾವು ಅವರ ದಾರಿಗೆ ಹೊಗಬೇಕಲ್ಲ ಸುಲಭವಾಗಿ. ಐ.ಅರ್.ಸಿ ಚಾಟ್ ನಲ್ಲಿ ಇನ್ಯಾರ ಹತ್ತಿರಾನೋ ವಿಂಡೋಸ್ ನಲ್ಲಿ ತೋರಿಸಿದ ಡೌನ್ಲೋಡ್ ಯು.ಅರ್.ಎಲ್ ಪಡೆದು, ಅದನ್ನ ಲಿನಕ್ಸ್ ನಲ್ಲೇ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡ್ಲಿಕ್ಕೂ ಪ್ರಯತ್ನ ಪಟ್ಟೆ (ವೈನ್ ಮೂಲಕ). ಅದರ ಯು.ಆರ್.ಎಲ್ (ಕೊಂಡಿ)ಇಲ್ಲಿದೆ ನೋಡಿ.

-----

http://dl.google.com/tag/s/appguid%3D%7B8A69D345-D564-463C-........

-----

ಅಯೋ, ಇದನ್ನ ಚಿಕ್ಕದಾಗಿ ಮಾಡಿ ಇತರರೊಡನೇ ಬೇಗ ಹ್ಯಾಗೆ ಹಂಚಿ ಕೊಳ್ಳೋದು ಅಂತ ಪ್ರಶ್ನೆ ಬಂದಾಗ್ಲೇ ಗೊತ್ತಾದದ್ದು, ಟೈನಿಯು.ಆರ್.ಎಲ್ ಇದೆಯಲ್ಲ ಅಂತ. 

ಅದರ ವೆಬ್ ಸೈಟಿಗೆ ಹೋಗಿ, ಮೇಲಿನ ಕೊಂಡಿಯನ್ನ ನೀಡಿ ಚಿಕ್ಕ ಮತ್ತು ಚೊಕ್ಕ ಬದಲಿ ಕೊಂಡಿಯನ್ನ  ಪಡೆದೆ. ಅದು ಹೀಗಿದೆ :

 http://tinyurl.com/techfiz-chrome

ಈಗ ಅದನ್ನ ಇತರರೊಡನೆ ಹಂಚಿ ಕೊಳ್ಳೋದು ಸುಲಭ. ಮೈಲ್ ನಲ್ಲಿ, ಚಾಟ್ ನಲ್ಲಿ ದೊಡ್ಡ ಕೊಂಡಿಗಳನ್ನ ಟೈಪಿಸ ಬದಲಿಗೆ, ಟೈನಿ ಕೊಂಡಿ ಬಳಸಿ ;)