ಟೊಮೆಟೊ ಬೆಳ್ಳುಳ್ಳಿ ಚಟ್ನಿ
ದೊಡ್ಡ ಬೆಳ್ಳುಳ್ಳಿ ಎಸಳುಗಳು ೩-೪, ಟೊಮೆಟೊ ೨-೩, ಒಣ ಕೆಂಪು ಮೆಣಸಿನ ಕಾಯಿ - ೨, ಶುಂಠಿ ತುಂಡು ಸಣ್ಣದು, ಕೆಂಪು ಮೆಣಸಿನ ಹುಡಿ ೧ ಚಮಚ, ಹಸಿರು ಮೆಣಸಿನಕಾಯಿ ೪-೫, ಜೀರಿಗೆ ೧ ಚಮಚ, ಸಾಸಿವೆ ೧ ಚಮಚ, ಉದ್ದಿನಬೇಳೆ ೧ ಚಮಚ, ರುಚಿಗೆ ಉಪ್ಪು, ಸ್ವಲ್ಪ ಕರಿಬೇವಿನ ಸೊಪ್ಪು, ಎಣ್ಣೆ ಅಥವಾ ತುಪ್ಪ.
ಮೊದಲು ಟೊಮೆಟೊ, ಬೆಳ್ಳುಳ್ಳಿ, ಶುಂಠಿ, ಹಸಿರು ಮೆಣಸಿನಕಾಯಿ, ಒಣ ಮೆಣಸಿನಕಾಯಿಯನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ನಂತೆ ಮಾಡಿಕೊಳ್ಳಬೇಕು. ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಹಾಕಿ ಅದರಲ್ಲಿ ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಹಾಕಿ ಹುರಿಯಬೇಕು. ಸಾಸಿವೆ ಸಿಡಿಯುತ್ತಿದ್ದಂತೆ ಅದಕ್ಕೆ ಕರಿಬೇವು ಹಾಕಿ ಬಾಡಿಸಿ. ನಂತರ ರುಬ್ಬಿಟ್ಟ ಪೇಸ್ಟನ್ನು ಬೆರೆಸಿ ರುಚಿಗೆ ಬೇಕಾದಷ್ಟು ಉಪ್ಪನ್ನು ಹಾಕಿ. ೩-೪ ನಿಮಿಷಗಳ ತನಕ ಬೇಯಿಸಿದರೆ ನಿಮ್ಮ ಮಸಾಲಾ ಟೊಮೆಟೊ ಬೆಳ್ಳುಳ್ಳಿ ಚಟ್ನಿ ತಯಾರು.
ಈ ಚಟ್ನಿಯು ಕೇವಲ ಅರ್ಧ ಗಂಟೆಯಲ್ಲಿ ತಯಾರಾಗುತ್ತದೆ. ಫ್ರಿಡ್ಜ್ ನಲ್ಲಿ ಇರಿಸಿದರೆ ಒಂದು ವಾರದವರೆಗೆ ಕೆಡದೆ ಉಳಿಯುತ್ತದೆ. ಅನ್ನದೊಂದಿಗೆ ತಿಂದರೆ ಬಹಳ ಚೆನ್ನಾಗಿರುತ್ತದೆ. ಒಮ್ಮೆ ಟ್ರೈ ಮಾಡಿ.