ಟೊಮ್ಯಾಟೋ ಉಪ್ಪಿಟ್ಟು / TOMATO UPPITTU

ಟೊಮ್ಯಾಟೋ ಉಪ್ಪಿಟ್ಟು / TOMATO UPPITTU

ಬೇಕಿರುವ ಸಾಮಗ್ರಿ

6 ರಿಂದ 8 ಟೀ ಚಮಚ ಎಣ್ಣೆ, ಒಂದು ಲೋಟ ಹುರಿದ ಬನ್ಸಿ ರವೆ. 2 ಮಧ್ಯಮ ಗಾತ್ರದ ಈರುಳ್ಳಿ ಹೆಚ್ಚಿದ್ದು. 6 ಅಥವಾ 8 ಟೊಮ್ಯಾಟೋ ಹಣ್ಣು ಸಣ್ಣಗೆ ಹೆಚ್ಚಿದ್ದು 1 ಅಥವಾ 2 ಟೀ ಚಮಚ ಅಚ್ಚ ಕಾರದ ಪುಡಿ, 1 ಕಡ್ಡಿ ಕರಿಬೇವು. ರುಚಿಗೆ ಉಪ್ಪು ಸಾಸಿವೆ ಮತ್ತು ಜೀರಿಗೆ. ಮೂರು ಲೋಟ ನೀರು. ಅಲಂಕರಿಸಲು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು.

ತಯಾರಿಸುವ ವಿಧಾನ

ಮಾಡುವ ವಿಧಾನ - ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿಯಾದ ನಂತರ ಸಾಸಿವೆ ಜೀರಿಗೆ ಸಿಡಿಸಿ. ಕರಿಬೇವು ಈರುಳ್ಳಿಯನ್ನು ಮತ್ತು ಟೊಮ್ಯಾಟೋ ಹಾಕಿ ಚೆನ್ನಾಗಿ ಬಾಡಿಸಿ. ಚನ್ನಾಗಿ ಬೆಂದ ನಂತರ ಅಚ್ಚ ಕಾರದ ಪುಡಿ ಮತ್ತು ಉಪ್ಪು ಸೇರಿಸಿ ಮತ್ತಷ್ಟು ಬಾಡಿಸಿ ಈಗ ರವೆ ಹಾಕಿ ಚೆನ್ನಾಗಿ ಮಿಶ್ರಗೊಳಿಸಿ. ನಂತರ 3 ಲೋಟ ನೀರನ್ನು ಸೇರಿಸಿ 8 ರೊಂದ 10 ನಿಮಿಷ ಗಟ್ಟಿಯಾಗುವ ತನಕ ಆಡಿಸುತ್ತಲೇ ಇರಿ. ಈಗ ನಿಮ್ಮ ಟೊಮ್ಯಾಟೋ ಉಪ್ಪಿಟ್ಟು ಸವಿಯಲು ತಟ್ಟೆಗೆ ಹಾಕಿ ಕೊತ್ತಂಬರಿ ಸೊಪ್ಪು ಉದುರಿಸಿ. ಆಹಾ ಇಂಥ ಸವಿಯಾದ ಉಪ್ಪಿಟ್ಟು.