ಟೊರಾಂಟೋ ನಗರಕ್ಕೆ ವಿದಾಯ ಹೇಳಿ, ಭಾರವಾದ ಹೃದಯದಿಂದ ವಾಪಸ್ ಬಂದೆವು !
ಮೂರುತಿಂಗಳ ಟೊರಾಂಟೋನಗರದ ವಾಸ್ತವ್ಯದ ಬಳಿಕ ನಮ್ಮ ಮಗನಿಂದ ಬಿಲ್ಕೊಂಡು ಭಾರತಕ್ಕೆ ಮರಳಿದೆವು. ಒಟ್ಟು ೯೦ ದಿನಗಳಲ್ಲಿ ನಾವು ಹೆಚ್ಚುಕಡಿಮೆ ಟೊರಾಂಟೋನಗರದ ಮೂಲೆಮೂಲೆಗಳನ್ನೂ ಅಡ್ಡಾಡಿ ನೋಡಿ ಬಂದೆವು. ಎಲ್ಲಿಂದ ಎಲ್ಲಿಗೆ ಹೋದರು ಕೇವಲ ೩ ಕೆನಡಿಯನ್ ಡಾಲರ್ ಕ್ರಯ. ನಮ್ಮಂತಹ ಹಿರಿಯ ನಾಗರಿಕರಿಗೆ ೨ ಡಾಲರ್. ವಿಶ್ವ ವಿಖ್ಯಾತ ನಯಾಗರ ಜಲಪಾತದಿಂದ ಮ್ಯೂಸಿಯೆಮ್, ಸೈನ್ಸ್ ಸೆಂಟರ್, ಹೈಪಾರ್ಕ್, ಲೈಬ್ರರಿ, ನದಿಗಳು, ಸರೋವರಗಳು, ಮಾಲ್ ಗಳು, ವಿಶ್ವವಿದ್ಯಾಲಯ, ಸಿ.ಏನ್. ಟವರ್, ಒಂದೆ ಎರಡೇ ! ಬಿರುಸಿನಿಂದ ಸುಂದರ, ಸುವ್ಯವಸ್ಥಿತವಾಗಿ ಬೆಳೆಯುತ್ತಿರುವ ಜ್ವಲಂತ ನಗರ-ಟೊರಾಂಟೋನಗರ ! ಉತ್ತರ ಅಮೇರಿಕಾದ ಕೆಲವೇ ಅಚ್ಚುಕಟ್ಟಾದ ವ್ಯವಸ್ಥೆಯ ನಗರಗಳಲ್ಲಿ ಒಂದಾದದ್ದು !