*ಟೋಮೆಟೋ ಹಣ್ಣು*(ಕುಸುಮ ಷಟ್ಪದಿ)

*ಟೋಮೆಟೋ ಹಣ್ಣು*(ಕುಸುಮ ಷಟ್ಪದಿ)

ಕವನ

ದೆಸೆಯನ್ನು ತೋರಿಸಿದೆ

ಹಸನಾದ ಹಣ್ಣಿಂದು

ನಸುನಗೆಯ ಕೆಂಪಿನಲಿ ಟೊಮೆಟೋವದು|

ಹಸಿರಾದ ತರುವಲ್ಲಿ

ಬಸವಳಿದು ಕಾಯುತಿದೆ

ಲಸತಿಕೆಯ ತೋರುತ್ತ ನಲಿಯುತ್ತಲಿ||

 

ಕಾಯಾಗಿ ಚಟ್ನಿಯಲಿ

ಮಾಯೆಯನು ತೋರುವದು

ವಾಯಿದೆಯು ಮುಗಿದಾಗ ಕೊಳೆಯುತ್ತಲಿ|

ಫಾಯಿದೆಯು ರೈತನಿಗೆ

ಕಾಯುತಲಿ ಹಣ್ಣನ್ನು

ಜಾಯಿಯಂತೆಯೆ ತಾನು ಕೊನೆವರೆಗೆ||

 

ಇಳುವರಿಯ ಕೊಡುತಿಹುದು

ಹುಳಿಯಾಗಿ ಸಿಹಿಯಾಗಿ

ಬೆಳೆಯಲ್ಲಿ ರೈತನಿಗೆ ವರ್ಷಪೂರ್ತಿ|

ಉಳಿದಿಹುದು ಹುಳಿಯಲ್ಲಿ

ಮಳೆಯಲ್ಲಿ ಚಳಿಯಲ್ಲಿ

ನಳನಳಿಸಿ ಹೊಳೆದಿಹುದು ಕೆಂಪಿನಲ್ಲಿ||

 

ಮೊಗದಲ್ಲಿ ಮೊಡವೆಯನು

ಹಗುರಾಗಿ ಕಳಿಸಿಸುವದು

ಜಗದಲ್ಲಿ ಪರಿಚಿತವು ಟೊಮೆಟೋವದು|

ದೃಗುಜಲವ ಸುರಿಸಿಲ್ಲ

ಸೊಗಸಲ್ಲಿ ಬಂದಿಹುದು

ನಗುನಗುವ ರುಚಿಯಾದ ಸಾಂಬಾರದು||

-*ಶಂಕರಾನಂದ ಹೆಬ್ಬಾಳ* 

 

ಚಿತ್ರ್