ಟ್ರಾನ್ಸ್​ಜೆಂಡರ್​ ಮೊದಲ ಬ್ಯಾಂಡ್​ !

ಟ್ರಾನ್ಸ್​ಜೆಂಡರ್​ ಮೊದಲ ಬ್ಯಾಂಡ್​ !

ಟ್ರಾನ್ಸ್ ಜೆಂಡರ್ ಬ್ಯಾಂಡ್​.ದೇಶದ ಮೊದಲ ಮ್ಯೂಸಿಕ್ ಬ್ಯಾಂಡ್.6 ಜನ ಅಲ್ಪಸಂಖ್ಯಾತರ ಮೊದಲ ಬ್ಯಾಂಡ್​.ಸೋನು ನಿಗಮ್ ಲಾಂಚ್ ಮಾಡಿದರು ಬ್ಯಾಂಡ್.200 ಜನರ ಆಡಿಷನ್ ನಲ್ಲಿ  6 ಜನರ ಆಯ್ಕೆ.ಯಶ್​ ರಾಜ್ ಯುಥ್ ವಿಂಗ್ ಮಾಡಿರೋ ಬ್ಯಾಂಡ್​.
-----
ನಮ್ಮ ನಡುವೆ ಇರ್ತಾರೆ. ನಮ್ಮವರಲ್ಲ. ನಮ್ಮಂತೇನು ಅಲ್ಲ. ಅವರ ಇರುವಿಕೆ ಬೇರೆ. ರೀತಿ ನೀತಿನೂ ಬೇರೆ. ಅವರನ್ನ ನಾವು ಮಂಗಳಮುಖಿಯರು ಅನ್ನುತ್ತೇವೆ. ಅದನ್ನ ಒಪ್ಪಿಕೊಳ್ಳದ ಅವರು, ತಮ್ಮನ್ನ ಲೈಂಗಿಕ ಅಲ್ಪಸಂಖ್ಯಾತರು ಅಂತ ಕರೆದುಕೊಳ್ತಾರೆ. ಈಗ ಇವರ ಬಗ್ಗೆ ಇಷ್ಟು ಹೇಳಲು ಕಾರಣವೂ ಇದೆ. ಅದೇನೂ ? ಬನ್ನಿ ಓದೋಣ.

ನಮ್ಮವರಲ್ಲದವರ ನಮ್ಮವರ ಹಾಡು. ನಮ್ಮ ನಡುವೆ ಇದ್ದರೂ, ನಮ್ಮಂಥೆ ಇರದವ್ರು. ಅವರನ್ನ ನಾವು ಮುಂಗಳ ಮುಖಿ ಅಂತಲೇ ಕರೆಯೋದು. ಅಂತಹ ಆ ಸಮುದಾಯದ 200 ಜನರಲ್ಲಿ ಕೇವಲ 6 ಜನರನ್ನ ಈಗ ಆಯ್ಕೆ ಮಾಡಿಕೊಂಡು, ಭಾರತದ ಮೊದಲ ಮ್ಯೂಸಿಕ್ ಬ್ಯಾಂಡ್ ಕಟ್ಟಲಾಗಿದೆ. ಅದರ ಹೆಸರೇ 6 ಪ್ಯಾಕ್ ಬ್ಯಾಂಡ್..

ಹೆಸರಾಂತ ಯಶ್ ರಾಜ್ ಫಿಲ್ಮ್ಸ್​ನ ಯುಥ್ ವಿಂಗ್ ಈ ಬ್ಯಾಂಡ್ ಆರಂಭಿಸಿದೆ. ಸೋನು ನಿಗಮ್ ಈ ಬ್ಯಾಂಡ್​ ಗೆ ತಮ್ಮದೇ ರೀತಿಯಲ್ಲಿ ಬೆಂಬಲ ಸೂಚಿಸುತ್ತಿದ್ದಾರೆ. ಬ್ಯಾಂಡ್ ನಿಂದ ಹೊರ ಬತ್ತಿರೋ 6 ಹಾಡುಗಳಲ್ಲಿ, ಒಂದಕ್ಕೆ ಸೋನು ಧ್ವನಿಯಾಗಿದ್ದಾರೆ.

ಮಂಗಳ ಮುಖಿಯರ ಈ ಬ್ಯಾಂಡ್​ಗೆ ನಟಿ ಅನುಷ್ಕಾ ಶರ್ಮಾ ಕೂಡ ಸರ್ಪೋಟ್​ ಮಾಡಿದ್ದಾರೆ. ವೀಡಿಯೋ ಸಾಂಗ್​ ನ ಆರಂಭದಲ್ಲಿ ಬರೋ ಸಾಲುಗಳನ್ನ, ಟ್ರಾನ್ಸ್ ಜೆಂಡರ್​ ಗಳ ಬಗ್ಗೆ ಸಮಾಜ ಹೊಂದಿರೋ ಅಭಿಪ್ರಾಯವನ್ನ, ಅನುಷ್ಕಾ ಶರ್ಮಾ ಹಿನ್ನೆಲೆಯಾಗಿ ಹೇಳ್ತಾ ಹೋಗ್ತಾರೆ.

ಅಲ್ಪ ಸಂಖ್ಯಾತರ ಈ ಬ್ಯಾಂಡ್ ಹಾಡುಗಳನ್ನ ಮಾಡುತ್ತಲೇ, ಸಮಾನತೆಯ ಸಾರೋ ಕೆಲಸವನ್ನೂ ಮಾಡುತ್ತದೆ,. ಎಲ್ಲರಂತೆ ನಮ್ಮನ್ನೂ ಸ್ವೀಕರಿಸಿ ಅಂತಲೂ ಸಾರಿ ಸಾರಿ ಹೇಳೋ ಕೆಲಸವೂ ಮಾಡಲಿದೆ ಈ ಬ್ಯಾಂಡ್​.
-ರೇವನ್