ಟ್ರಾಫಿಕ್ ಜಾಮ್ ರಹಿತ ಬೆಂಗಳೂರು !!!!!

ಟ್ರಾಫಿಕ್ ಜಾಮ್ ರಹಿತ ಬೆಂಗಳೂರು !!!!!

ಬರಹ

ಗೆಳೆಯ ಗೆಳತಿಯರೆ,

ಕಾರ್! ಕಾರ್!! ಕಾರ್!!! ಕಾರ್!!!! .... ಎಲ್ನೋಡಿ ಕಾರ್ !!!!!!!

ಇದೇನಪ್ಪ "ಟ್ರಾಫಿಕ್ ಜಾಮ್ ಮುಕ್ತ ಬೆಂಗಳೂರು" ಅಂತ ಯೋಚನೆ ಮಾಡ್ತಿದೀರ? ನಾವಾದರು ಬೆಂಗಳೂರು ತ್ರಾಫಿಕ್ ಜಾಮ್ ಗಳ ನಿರ್ಮೂಲನೆ ಬಗ್ಗೆ ಯೋಚಿಸಬೇಕು: ಯಾಕಂದ್ರೆ ನಮ್ಮ ಸರ್ಕಾರವಾಗಲಿ, ಮಹಾನಗರ ಪಾಲಿಕೆಯಾಗಲಿ ಇದರ ಬಗ್ಗೆ ಹೆಚ್ಹು ಗಮನ ಕೊಡುತ್ತಿಲ್ಲ ಅದಕ್ಕೆ ......

- ಆಫೀಸಿಗೆ ತಡವಾಗಿ ಹೋದಾಗ
- ಪರೀಕ್ಷೆಗೆ ತಡವಾಗಿ ಹೋದಾಗ
- ರಸ್ತೆಯಲ್ಲಿ ಆಂಬುಲೆನ್ಸ್ ಟ್ರಾಫೀಕಿನಲ್ಲಿ ಸಿಕ್ಕಿ ಹಾಕಿಕೊಂಡಿರುವುದನ್ನು ನೋಡಿದಾಗ
- ವಿಮಾನ, ಬಸ್, ರೈಲನ್ನು ತಡವಾಗಿ ತಪ್ಪಿಸಿಕೊಂಡಾಗ
- ಮದುವೆಯ ಮುಹೂರ್ತವನ್ನು ತಪ್ಪಿಸಿಕೊಂಡಾಗ
- ಟ್ರಾಫಿಕ್ ಜಾಮಿನಿಂದ ಗಲಿ ಬಿಲಿಗೊಂಡು, ಯಾರೊ ನಮ್ಮ ಗಾಡಿಗೆ ಡಿಕ್ಕಿ ಹೊಡೆದಾಗ
- ಇನ್ನು ಅನೇಕ ಸಂದರ್ಭಗಳಲ್ಲಿ ನಾವು ನಮ್ಮ ಟ್ರಾಫಿಕ್ ವ್ಯವಸ್ತೆಯನ್ನು ಬೈಯುತ್ತೇವೆ. ಹೇಗಪ್ಪ ಇದನ್ನು ತಡೆಯೋದು ಅಂತ ಯೋಚನೆ ಮಾಡಿರುತ್ತೇವೆ. ನಾನೂ ಪ್ರತಿದಿನ ಇದರ ಬಗ್ಗೆ ಯೋಚಿಸುತ್ತ ಇರುತ್ತೇನೆ, ಸ್ನೇಹಿತರೊಂದಿಗೆ ಚರ್ಚಿಸಿದ್ದೇನೆ. ಇಂದು ನಿಮ್ಮ ಮುಂದೆ ನನ್ನ ಅಭಿಪ್ರಾಯಗಳನ್ನು ಪ್ರಸ್ತಾಪಿಸುತ್ತಿದ್ದೇನೆ.

ನಮ್ಮ ನಗರದ ಟ್ರಾಫಿಕನ್ನು ಹೆಚ್ಹಾಗದಂತೆ, ವಾಹನಗಳ ಸಂಚಲನವನ್ನು ಸರಾಗವನ್ನಾಗಿ ಮಾಡಲು ಈ ಕೆಳಗಿನ ಉಪಾಯಗಳನ್ನು ಅನುಸರಿಸಬಹುದಲ್ಲವೆ?

- ವಾಹನಗಳ ಮಾರಾಟದಲ್ಲಿ ತಕ್ಕ ಮಟ್ಟಿಗೆ ನಿರ್ಭಂದನೆಯಲ್ಲು ಜಾರಿಗಳಿಸುಹುದು: ಪ್ರತಿ ಮನೆಗೆ ೨-೩ ಕಾರುಗಳ ಅವಶ್ಯಕತೆ ಏನಿದೆ? ಪ್ರತಿ ಕುಟುಂಭಕ್ಕೆ ಒಂದು ಮಗು ಸಾಕು ಅನ್ನೋವಾಗ, ಪ್ರತಿ ಕುಟುಂಭಕ್ಕೆ ಒಂದೇ ಕಾರು ಅಂತ ಯೋಚಿಸ್ತಿಲ್ಲ ಯಾಕೆ?
- ನಗರ ಸಾರಿಗೆ ಯನ್ನು ಅಭಿವ್ರುದ್ದಿ ಗೊಳಿಸುಹುದು - ಹೆಚ್ಹು ಹೆಚ್ಹು ಬಸ್, ಮೆಟ್ರೊ ರೈಲು, ಮೋನೊರೈಲು ಗಳನ್ನು ಕಡಿಮೆ ಧರದಲ್ಲಿ ಜನತೆಗೆ ಅರ್ಪಿಸಿ, ಜನರನ್ನು ಆಕರ್ಷಿಸುಹುದು
- ನಗರದ ಎಲ್ಲ ಭಾಗಗಳಲ್ಲಿನ ಟ್ರಾಫಿಕ್ ಒತ್ತಡವನ್ನು ಪರಿಶೀಲಿಸಿ, ಅಗತ್ಯವಿದ್ದ ಕಡೆ ಈಗಲೆ ಹೆಚ್ಹು ಹೆಚ್ಹು ಮೇಲು ಸೇತುವೆ(ಫ್ಲೈ ಓವರ್), ಒಳ ಸೇತುವೆ(ಭೂ ಸುರಂಗ ಮಾರ್ಗ)ಗಳನ್ನು ನಿರ್ಮಿಸುಹುದು
- ಅತಿ ಟ್ರಾಫಿಕ್ ಇರುವ ಪ್ರದೇಶಗಳಲ್ಲಿ, ಪೀಕ್ ಸಮಯದಲ್ಲಿ ಬಾಡಿಗೆ (ಟೋಲ್ ರೋಡುಗಳು) ಪಡೆಯುವುದು: ಈಗೆ ಮಾಡಿದಲ್ಲಿ ಜನರು ಸಾರಿಗೆ ಬಸ್ ನ್ನು ಉಪಯೋಗಿಸುತ್ತಾರೆ, ಅಗತ್ಯಕ್ಕೆ ತಕ್ಕಂತೆ ಮಾತ್ರ ತಮ್ಮ ಸ್ವಂತ ವಾಹನಗಳನ್ನು ಉಪಯೋಗಿಸುತ್ತಾರೆ, ಒಂದೇ ಪ್ರದೇಶದಿಂದ ಒಂದೇ ಕಚೇರಿಗೆ ತೆರಳುವ ಉದ್ಯೋಗಿಗಳು ಗುಂಪು-ಗುಂಪಾಗಿ ಒಂದೇ ವಾಹನದಲ್ಲಿ ತೆರಳುತ್ತಾರೆ. (ಸಿಂಗಾಪುರ ಮತ್ತು ಇತರೆ ಕೆಲವು ದೇಶಗಳಲ್ಲಿ ಈ ಪದ್ದತಿ ಈಗಾಗಲೆ ಯಶಸ್ವಿಯಾಗಿದೆ)
- ಎಲ್ಲ ಶಾಲೆಗಳು ವಿಧ್ಯಾರ್ಥಿಗಳ ಪ್ರಯಾಣಕ್ಕೆ ಶಾಲಾ-ಬಸ್ ಗಳನ್ನು ಬಳಸಿದರೆ ಎಷ್ಟೊ ವಾಹನಗಳ ಸಂಖ್ಯೆ ಕಡಿಮೆಯಗುತ್ತದೆ (ಬೆಂಗಳೂರಿನಲ್ಲಿ ಕಾರು, ಆಟೊ, ಬೈಕಿನಲ್ಲಿ ಶಾಲೆಗಳಿಗೆ ಮಕ್ಕಳನ್ನು ಕರೆದೊಯ್ಯುತ್ತಾರೆ)
- ಸಾರಿಗೆ ವ್ಯವಸ್ತೆ ಹೊಂದಿರುವ ಖಾಸಗಿ ಕಂಪನಿಗಳು ಕೂಡ ಉದ್ಯೋಗಿಗಳಿಗೆ ಕಂಪನಿ ವಾಹನಗಳಲ್ಲಿ ಪ್ರಯಾಣಿಸುವಂತೆ ಉತ್ತೇಜಿಸಬೇಕು
- ಊರಿನಿಂದ - ಊರಿಗೆ ತೆರಳುವ ಬಸ್ಸು, ಟ್ರಕ್ಕು, ಲಾರಿಗಳು ನಗರ ಹೊರ ವರ್ತುಲ ರಸ್ತೆಯಲ್ಲೇ ತೆರಳುವಂತೆ ಕಾನೂನು ಮಾಡುಹುದು
- ಸಾವಿರಾರು ಕಂಪ್ಯೂಟರ್ ಕಂಪನಿಗಳಿರುವ ಬೆಂಗಳೂರಿನ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಅಗತ್ಯವಿದ್ದಾಗ ಮನೆಯಿಂದಲೆ ಕೆಲಸ ಮಾಡಲು ಉತ್ತೇಜಿಸುವುದು
- ಹೆಚ್ಹಿನ ಟ್ರಾಫಿಕ್ ಜಾಮುಗಳಿಗೆ ಮುಖ್ಯ ಕಾರಣ ಅಪಘಾತಗಳು: ಹೆಚ್ಹು ರಸ್ತೆ ಅಪಘಾತಗಳು ನಡೆಯುವ ಪ್ರದೇಶಗಳ ಬಳಿ ಅವಶ್ಯಕತೆಗೆ ತಕ್ಕಂತೆ ಹೆಚ್ಹಿನ ಸಿಬ್ಬಂದಿಗಳನ್ನು ನಿಯೋಜಿಸುವುದು
- ಟ್ರಾಫಿಕ್ ಡಿಟೆಕ್ಟರ್ (Traffic congestion detector) ಗಳ ಬಳಕೆ ಮಾಡಿ, ಟ್ರಾಫಿಕ್ಕನ್ನು ಸರಾಗಗೊಳಿಸುವುದು
- ರಾಜಕಾರಣಿಗಳನ್ನು, ಗಣ್ಯ ವ್ಯಕ್ತಿಗಳನ್ನು ಸಾಮನ್ಯ ಪ್ರಜೆಗಳೆಂದು ಪರಿಗಣಿಸುವುದು: ಅವರ ಹಿತಕ್ಕಾಗಿ ಟ್ರಾಫಿಕ್ ತಡೆಯುವ ಅಗತ್ಯವಿಲ್ಲ, ಅವರಿಗೂ ಜನತೆಯ ಸಮಸ್ಯೆಗಳ ಅನುಭವವಾಗಲಿ, ಅವಾಗದ್ರೂ ಎಚ್ಹೆತ್ತು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಬಹುದು

ಈ ಮೇಲಿನ ಅಂಶಗಳನ್ನು ತಕ್ಕಷ್ಟು ಮಟ್ಟಿಗೆ ಜಾರಿಗೆ ತಂದಲ್ಲಿ, ಗಣನೀಯವಾಗಿ ನಮ್ಮ ಬೆಂಗಳೂರಿನ ಸಂಚಾರ ವ್ಯವಸ್ಥೆಯನ್ನು ಸರಾಗಗೊಳಿಸಬಹು ಅಂತ ಭಾವಿಸುತ್ತೇನೆ.

ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ತಿಳಿಸಿ: ಸರ್ಕಾರಕ್ಕೆ ನಮ್ಮ ಸಹಕಾರವು ಅತ್ಯಗತ್ಯ ....... ಏನಂತೀರ?

ಜೈ ಕರ್ನಾಟಕ ...... ಸಿರಿಗನ್ನಡಮ್ ಗೆಲ್ಗೆ .....

ನಿಮ್ಮ ಪ್ರೀತಿಯ ...
- ಮಲ್ಲೇನಹಳ್ಳಿ ಚನ್ನಕೇಶವ ಗಿರೀಶ (ಮಚಗಿ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet