ಟ್ರಾವಂಕೂರ್ ರಾಜರುಗಳು - ತಿರುವನಂತಪುರ - ಅನಂತಪದ್ಮನಾಭಸ್ವಾಮಿ ದೇವಾಲಯ ! ಭಾಗ - ೨

ಟ್ರಾವಂಕೂರ್ ರಾಜರುಗಳು - ತಿರುವನಂತಪುರ - ಅನಂತಪದ್ಮನಾಭಸ್ವಾಮಿ ದೇವಾಲಯ ! ಭಾಗ - ೨

ಬರಹ

ಮೊದಲನೆಯ ಭಾಗ ಇಲ್ಲಿದೆ ............

http://sampada.net/article/23762


ಮರುದಿನದ ಕಾರ್ಯಕ್ರಮ ಪದ್ಮನಾಭಸ್ವಾಮಿ ದೇವಾಲಯ....... ದೇವಸ್ತಾನಕ್ಕೆ ಬಂದಾಗ ಸುಮಾರು ಬೆಳಗ್ಗೆ ೧೦ ಗಂಟೆ ಸಮಯ. ಸುಡು ಸುಡು ಬಿಸಿಲು ನೆಲವನ್ನು ಕಾಸಿತ್ತು. ಈ ದೇವಾಲಯವನ್ನು ಟ್ರಾವಂಕೂರ್ ರಾಜರುಗಳು ತಮ್ಮ ಆಳ್ವಿಕೆಯ ಸಮಯದಲ್ಲಿ ಅಂದರೆ, ೯ ನೇ ಶತಕದಲ್ಲಿ ಕಟ್ಟಿಸಿ, ಅನಂತಪದ್ಮನಾಭನ ಭಕ್ತರಾಗಿದ್ದರು. ಇಂದಿಗೂ ಈ ವಂಶದ ಕಡೆಯ ರಾಜ ಪ್ರತಿದಿನವೂ ಮುಂಜಾವಿನಲ್ಲಿ ಪ್ರತ್ಯೇಕ ದ್ವಾರದಿಂದ ದೇವಸ್ತಾನವನ್ನು ಪ್ರವೇಶಿಸಿ, ಪೂಜಿಸಿ,  ದೇವರ ದರ್ಶನವನ್ನು ಪಡೆಯುತ್ತಾರಂತೆ. ಇದೂ ಕಲ್ಲಿನಿಂದ ಕಟ್ಟಿಸಿದ ದೇವಾಲಯ, ಪದ್ಮನಾಭನ ವಿಗ್ರಹ ಸುಮಾರು ೬ ಅಡಿಗಳಷ್ಟು ಅಗಲ ಇದ್ದು, ಇದನ್ನು ಮೂರು ಭಾಗಗಳಲ್ಲಿ ಮೂರು ಕಿಟಕಿಯಿಂದ ನೋಡಲು ಅನುಕೂಲ ಮಾಡಿದ್ದಾರೆ. ಅನಂತಪದ್ಮನಾಭ ಶೇಷಶಯನನಾಗಿ ಮಲಗಿದ್ದಾನೆ ( ಸರ್ಪದಮೇಲೆ). ನಾಭಿಯಲ್ಲಿ ದೊಡ್ಡ ಪದ್ಮ, ಪದ್ಮದೊಳಗೆ ಲಕ್ಷ್ಮಿ ನಿಂತಿರುವುದು. ಮೊದಲನೆ ಕಿಟಕಿಯಲ್ಲಿ, ತಲೆ ಮತ್ತು ಬಲಗೈ ದರ್ಶನ, ಮಧ್ಯದ ಕಿಟಕಿಯಲ್ಲಿ ನಾಭಿ, ಪದ್ಮ ಮತ್ತು ಲಕ್ಷ್ಮಿಯ ದರ್ಶನ. ಕೊನೆಯ ಕಿಟಕಿಯಲ್ಲಿ ಕಾಲು ಮತ್ತು ಪಾದ ದರ್ಶನ ದೊರಕುತ್ತದೆ. ದೇವಸ್ತಾನದ ಒಳಗೆ ಚಿತ್ರ ತೆಗೆಯಲು ಅನುಮತಿ ಇಲ್ಲ. ಹೊರಗಡೆಯಿಂದಷ್ಟೇ ಚಿತ್ರ ಲಭ್ಯ, ಕೆಳಗಿದೆ ಚಿತ್ರ.......

http://sampada.net/image/23862

ದೇವಸ್ತಾನದ ಒಳಗೆ ಹೋಗಲು ಸರಿಯಾದ ಉಡುಗೆಇದ್ದರೆ ಮಾತ್ರ ಸಾಧ್ಯ, ಪಂಚೆ, ಶಲ್ಯ ಗಂಡಸರಿಗಾದರೆ, ಸೀರೆ ಮತ್ತು ಮೇಲೊಂದು ದುಪ್ಪಟ (ಚೂಡಿದಾರ್ ದುಪ್ಪಟ ಆಗೊಲ್ಲ, ಶಲ್ಯ ಅಥವಾ ಸೀರೆಯ ಸೆರಗಿನಂತೆ ಮೇಲೆ ಹೊದ್ದು ಹೋಗಬೇಕು). ಚಿತ್ರದಲ್ಲಿ ನಾವೆಲ್ಲ ಹಾಕಿದಂತೆ. ಅಂತೂ ದೇವಸ್ತಾನದ ಒಳಗೆ ಹೋಗಲು ತುಂಬಾ ದುಡ್ಡು ಖರ್ಚು ಮಾಡಬೇಕಾಯಿತು. ಒಂದು ಶಲ್ಯಕ್ಕೆ ೨೫೦ ರೂಗಳಂತೆ ೬ ಶಲ್ಯ ಪಡೆದೆವು, ಒಳಗೆ ಎಣ್ಣೆಯ ದೀಪವನ್ನು  ಕೊಂಡು ನೀಲಾಂಜನಕ್ಕೆ ಹಾಕಿದೆವು. ದರ್ಶನಕ್ಕೂ ಟಿಕೆಟ್ ಜೊತೆಗೆ ಹೆಚ್ಚು ದುಡ್ಡು ಕೊಡಬೇಕಾಯಿತು. ಅದನ್ನೆಲ್ಲಾ ಬರೆದರೆ, ಅದೇ ಒಂದು ದೊಡ್ಡ ಕಥೆಯಾದೀತು. ಅಂತೂ ದೇವರದರ್ಶನ ಚೆನ್ನಾಗಿ ಆಯಿತು. ಹೊರಗೆ ಬಂದು ಪ್ರಸಾದ, ನವರತ್ನ ಮಾಲೆ, ಮತ್ತು ಅನಂತಪದ್ಮನಾಭನ ಸಣ್ನ ಲೋಹದ ವಿಗ್ರಹ ಎಲ್ಲ ಕೊಂಡು ಪಾಂಗತವಾಗಿ ದೇವಸ್ತಾನದ ಭೇಟಿ ಮುಗಿಸಿ ಸಂತೃಪ್ತರಾದೆವು. ಅರ್ಚಕರ ಕೂಗುಗಳು ಮತ್ತು ವ್ಯಾಪಾರೀ ಮನೋಭಾವನೆಗಳು ಬಿಟ್ಟರೆ, ದೇವಸ್ತಾನದಲ್ಲಿ ದಿವ್ಯವಾದ ಅನುಭವ ಮನಸಿಗೆ ತಾಗಿತ್ತು.

ದೇವಸ್ತಾನದ ಬೀದಿಯಲ್ಲೆ ಟಿ. ರಾಜರುಗಳ ಒಂದು ಸಣ್ಣ ಅರಮನೆ ಇದೆ. ( ಅವರ ಅರಮನೆಗಳಲ್ಲೊಂದಾದ). ಅದಕ್ಕೂ ಭೇಟಿ ಕೂಟ್ಟೆವು. ಹೊರಗಡೆಯಿಂದ ಅರಮನೆ ಸಣ್ಣದಾಗಿ ಕಂಡರೂ ಒಳಗೆ ಒಂದು ರೈಲಿನಂತೆ ಒಳಗೊಳಗೆ ತುಂಬಾ ಕೊಣೆಗಳನ್ನೊಳಗೊಂಡು , ಮಧ್ಯದಲ್ಲಿ ಉಧ್ಯಾನವನವಿದೆ.

ಮುಂದುವರೆಯುವುದು.............