ಟ್ರಿಣ್ ಟ್ರಿಣ್ ಟೆಲಿಫೋನ್ ಗುಂಗು

ಟ್ರಿಣ್ ಟ್ರಿಣ್ ಟೆಲಿಫೋನ್ ಗುಂಗು

ಬರಹ

ನಾನಾಗ ಎಂಟೋ ಒಂಬತ್ತು ವಯಸಿನವಳಿರಬೇಕೇನೊ
ಆಗಲೆ ಮೊದಲ‌ ಬಾರಿ ಫೋನ್‍ ನಲ್ಲಿ ಮಾತಾಡಿದ್ದು
ಅದೂ ೨ ರೂ ಕಾಯಿನ್ ಹಾಕಿ ಮಾಡೋದು. ಅದೇನೋ ನಂಗೆ ದೊಡ್ಡ ಮಾಯೆಯಂತೆ ಕಂಡಿತ್ತು
ನಾವು ಮಾತಾಡೋದು ಅದು ಹೇಗೆ ಅಲ್ಲೆಲ್ಲೋ ಕೇಳುತ್ತೆ. ಅಂತ ಅನ್ನಿಸ್ತಿತ್ತು
ಅದಾದ ಮೇಲೆ ನನ್ನ ಕನಸೊಂದು ಇತ್ತು ನಾನೆ ಫೋನ್ ಮಾಡಬೇಕು ಅಂತ
ನನಗೆ ಸೈಕಲ್ ಸವಾರಿ ಹೇಳಿಕೊಟ್ಟ ಲಂಬೂ ನಾನು ನನ್ನಿಬ್ಬರು ಸ್ನೇಹಿತರು ಶಂಕರ ಮಠದ ಹತ್ತಿರವಿದ್ದ ಕಾಯಿನ್ ಫೋನ್‌ನಿಂದ ಸುಮ್ಮನೆ ಯಾರ್ಯಾರಿಗೋ ಫೋನ್ ಮಾಡೋದು, ಉಗಿದರೆ ಉಗಿಸಿಕೊಳ್ಳೋದು,
ಮೊದಲು ಲಂಬೂ ಯಾವುದೋ ಫೋನ್ ನಂಬರ್ ಹೇಳೋನು
ನಾನು ಫೋನ್ ಮಾಡಿ ಮಾತಾಡೋದು
ನಂತರ ಅದೇ ನಂಬರಿಗೆ ಮತ್ತೆ ಮತ್ತೆ ಫೋನ್ ಮಾಡಿ ತಲೆ ತಿನ್ನೋದು
ಅದೊಂಥರ ಆಟ ಆಗಿತ್ತು
ನಂತರ ಕಾಲೇಜು ಮುಗಿಯುವವರೆಗೂ ಫೋನಿನ ಸಂಪರ್ಕವಿರಲಿಲ್ಲ.
ನಮ್ಮ ಮನೆಯಲ್ಲಿ ಫೋನ್ ಇರಲಿಲ್ಲ. ಪಕ್ಕದ ಮನ್ದೆಗ್ ಫೋನ್ ಮಾಡುತ್ತಿದ್ದೆವು.

ಕಾಲೇಜ್ ಕೊನೆಯ ವರ್ಷ ಕೊನೆಯ ದಿನ ಅಮ್ಮನ ಕರೆಯಲೆಂದು ನಮ್ಮ ಪಕ್ಕದ ಮನೆಗೆ ಫೋನ್ ಮಾಡಿದಾಗ ಬೆಳಗಷ್ಟೆ ಊರಿನಿಂದ ಬಂದಿದ್ದ ಆ ಮನೆಯ ಹುಡುಗ ಫೋನ್ ಎತ್ತಿದ್ದ. ಅದು ನಮ್ಮ ಪ್ರೇಮಕ್ಕೆ ನಾಂದಿಯಾಯಿತು. ಆ ಕೆಂಪು ಕೆಂಪು ಹುಡುಗ ಕೊನೆಗೆ ನನ್ನ ಪತಿಯಾಗಿ ಗಂಟು ಬಿದ್ದ.
ನಂತರ ಕೆಲಸಕ್ಕೆ ಅರ್ಜಿ ಗುಜಾರಾಯಿಸಿದಾಗ ಫೋನ್‌ನ ಸದಾ ಒಡನಾಟ ಸಾಧ್ಯವಾಯಿತು.
ಕೊನೆಗೆ ನಾನು ಕೆಲಸಕ್ಕೆ ಸೇರಿದಾಗ ಮನೆಗೆ ಫೋನ್ ಕನೆಕ್ಶ್ನನ ಹಾಕಿಸಿದೆ
ಆ ದಿನ ಇನ್ನೂ ನೆನಪಿದೆ ಫೋನ್ ಬಂದ ದಿನ
ಅಮ್ಮ ಫೋನ್ ಮಾಡಿದರು
ನನಗೋ ಸಂಭ್ರಮ
ಯಾವ ಫೋನ್, ಸೈಜ್ ಏನು ಕಲರ್ ಏನು ಎಂದೆಲ್ಲಾ ವಿಚಾರಿಸಿದ್ದ್ದೆ. ಸ್ನೇಹಿತರೆಲ್ಲಾ ರೇಗಿಸಿದ್ದರು.
ನಂತರ ಅದೇ ಫೋನ್ ನಮ್ಮ ಮನೆಗೆ ಸುಮಾರು ಎರೆಡು ವರ್ಷ ಉಳಿಯಿತು.
ಫೋನ್ ಯಾರಾದರೂ ಮಾಡಿದರೆ ಸಾಕು ಎಂದ್ಜು ಕಾಯುತ್ತಿದ್ದೆವು, ಅದರ ಟ್ರಿಣ್ ಟ್ರಿಣ್ ಶಭ್ದ ನಮಗೆ ಇಂಪಾದ ಸಂಗೀತದಂತಿತ್ತು. ಆದರೆ ಕಾಲಾನಂತರದಲ್ಲಿ ಬಿಎಸ್ ಎನ್ ಎಲ್‌ರವರ ತಲೆಹರಟೆಗಳು ಹಿಡಿಯಲ್ಲಿಲ್ಲ
ಆಗಲೆ ರಿಲೈಯನ್ಸ್ ರವರು ೫೦೦ ರೂಗೆ ಮೊಬೈಲ್ ಬಿಟ್ಟಿದ್ದರು. ಆಗ ಒಂದು ಫೋನ್ ಪಡೆದೆ. ನಂತರ ನನನ್ನ್ನ ಸಂಪರ್ಕಿಸುವವರು ಮೊಬೈಲ್ಗೆ ಮಾಡುತ್ತಿದ್ದರು. ನಮ್ಮ ಹಳೆಯ ಫೋನ್ ಅಪ್ರಯೋಜಕವಾಯ್ತು
ನನಗೆ ಮದುವೆಯಾಯಿತು. ಅಮ್ಮನಿಗೆ ಮೊಬೈಲ್ ಕೊಡಿಸಿದೆ. ಹಳೆ ಫೋನ್ ಸಂಪರ್ಕ ಕಡಿಸಿದೆ
ನನಗೂ ಮೂರು ಮೂರು ಮೊಬೈಲ್ ಬಂತು ಆದರೆ ಆ ಮೊದಲ್ ಫೋನ್‍ನ ಸಂಭ್ರಮ ಮತ್ತೆ ನನಗೆಂದೂ ಆಗಲೇ ಇಲ್ಲ
ಈಗಲೂ ಲ್ಯಾಂಡಲೈನ್ ಇದ್ದರೂ ಅದು ಕೇವಲ ಇಂಟರ್‌ನೆಟ್ ಕನೆಕ್ಟರ್ ಆಗಿದೆಯೇ ಹೊರತು ನನಗೆಂದೂ ಆಪ್ತವಾಗಿಯೇ ಇಲ್ಲ
ಆ ಫೋನಿನ ಗುಂಗು ಒಮ್ಮೊಮ್ಮೆ ಕಾಡುತ್ತದೆ.