ಠಕ್ಕ ನರಿಗೆ ಪಾಠ ಕಲಿಸಿದ ಕಾಗೆ

ಠಕ್ಕ ನರಿಗೆ ಪಾಠ ಕಲಿಸಿದ ಕಾಗೆ

ಒಂದು ಕಾಗೆ ಊರಿನಲ್ಲಿ ಆಹಾರಕ್ಕಾಗಿ ಅರಸುತ್ತಿದ್ದಾಗ ಅದಕ್ಕೆ ಒಂದು ಮಾಂಸದ ತುಂಡು ಸಿಕ್ಕಿತು. ಅದನ್ನು ಕಚ್ಚಿಕೊಂಡು ಆ ಕಾಗೆ ಊರಿನಿಂದ ಹೊರಗಿರುವ ಮರದ ಮೇಲೆ ಕುಳಿತು ತಿನ್ನಲುಪಕ್ರಮಿಸಿತು. ಇದನ್ನು ಗಮನಿಸಿದ ಠಕ್ಕ ನರಿಯೊಂದು, ಏನಾದರೊಂದು ಉಪಾಯ ಮಾಡಿ ಆ ಕಾಗೆಯ ಬಾಯಿಂದ ಮಾಂಸದ ತುಂಡನ್ನು ಕಿತ್ತುಕೊಳ್ಳಬೇಕೆಂದು ಸಂಚು ಮಾಡಿತು. ಅದರಂತೆ ಅದು ಆ ಕಾಗೆಯ ಬಳಿ ಸಾಗಿ, ಕಾಗಕ್ಕ ಕಾಗಕ್ಕ ನಿನ್ನ ಬಣ್ಣವೇನು ಅಂದ, ನಿನ್ನ ರೂಪವೇನು ಚಂದ ಎಂದು ಹಾಡಿ ಹೊಗಳಿತು. ಇದರಿಂದ ಕಾಗೆ ಉಬ್ಬಿ ಹೋಯಿತು. ಇದೇ ಸರಿಯಾದ ಸಮಯವೆಂದರಿತ ಠಕ್ಕ ನರಿ ಕಾಗಕ್ಕ ಕಾಗಕ್ಕ ನಿನ್ನ ದನಿ ಅದೇನು ಇಂಪು, ಒಂದೇ ಒಂದು ಬಾರಿ ನನಗಾಗಿ ನಿನ್ನ ಸುಶ್ರಾವ್ಯ ಕಂಠದಿಂದ ಹಾಡು ಎಂದಾಗ ಮೈಮರೆತು ಆ ಹುಚ್ಚು ಕಾಗೆ, ಕಾಂವ್, ಕಾಂವ್ ಎಂದು ಹಾಡಲು ಬಾಯಿ ತೆಗೆಯಿತು ಅಷ್ಟರಲ್ಲಿ ಅದರ ಬಾಯಲ್ಲಿದ್ದ ಮಾಂಸದ ತುಂಡು ಜಾರಿ ಕೆಳಕ್ಕೆ ಬಿತ್ತು. ಇದಕ್ಕಾಗಿಯೇ ಕಾಯುತ್ತಿದ್ದ ಆ ಗುಳ್ಳೆ ನರಿ ಆ ಮಾಂಸದ ತುಂಡನ್ನು ಕಚ್ಚಿಕೊಂಡು ಓಡಿಹೋಯಿತು. ಆ ಪೆದ್ದ ಕಾಗೆ ಹೀಗೆ ಮೋಸಹೋಗಿ ತನ್ನ ಕೈಯ್ಯಲ್ಲಿದ್ದದ್ದನ್ನು ಕಳೆದುಕೊಂಡಿತು. ಇದು ಬಹುಷಃ ಎಲ್ಲರಿಗೂ ಗೊತ್ತಿರುವ ಹಳೆಯ ಕತೆ, ಗೊತ್ತಿಲ್ಲದಿದ್ದವರು ಲಕ್ಷ್ಮೀಕಾಂತ ಇಟ್ನಾಳರು ಪ್ರಸ್ತುತ ಪಡಿಸಿರುವ ಈ ಠಕ್ಕ ನರಿಯ ಪದ್ಯರೂಪವನ್ನು ನೋಡಿ.
http://sampada.net/blog/%E0%B2%95%E0%B2%BE%E0%B2%97%E0%B3%86%E0%B2%AF%E0%B3%8A%E0%B2%82%E0%B2%A6%E0%B3%81-%E0%B2%B9%E0%B2%BE%E0%B2%B0%E0%B2%BF%E0%B2%AC%E0%B2%82%E0%B2%A6%E0%B3%81-%E0%B2%A8%E0%B2%AE%E0%B3%8D%E0%B2%AE-%E0%B2%AE%E0%B2%95%E0%B3%8D%E0%B2%95%E0%B2%B3%E0%B2%BF%E0%B2%97%E0%B2%BE%E0%B2%97%E0%B2%BF-%E0%B2%AE%E0%B2%A4%E0%B3%8D%E0%B2%A4%E0%B3%8A%E0%B2%AE%E0%B3%8D%E0%B2%AE%E0%B3%86/13/09/2012/38347

ಕಾಗೆ ಮತ್ತು ನರಿಗಳ ವಂಶಗಳಲ್ಲಿ ಹಲವಾರು ತಲೆಮಾರುಗಳು ಕಳೆದವು. ಹೀಗಿರಬೇಕಾದರೆ ಒಂದು ದಿವಸ ಮತ್ತದೇ ಸೀನ್ ರಿಪೀಟ್ ಆಗಬೇಕೇ? ಕಾಗೆಯೊಂದು ಊರಹೊರಗಿನ ಮರದ ಮೇಲೆ ಕುಳಿತು ಮಾಂಸದ ತುಂಡನ್ನು ಕಚ್ಚಿ ತಿನ್ನುತ್ತಾ ಇದೆ ಮತ್ತು ಇದು ಗುಳ್ಳೇನರಿಯ ಗಮನಕ್ಕೆ ಬಂತು. ಅದಕ್ಕೇ ಅದರ ಪೂರ್ವಜರಿಂದ ಕೇಳಿದ್ದ ಕತೆ ನೆನಪಿಗೆ ಬಂತು ಅದು ಹೋಗಿ ಯಥಾಪ್ರಕಾರ ಕಾಗಕ್ಕ ಕಾಗಕ್ಕ ನಿನ್ನ ಬಣ್ಣವೇನು ಚಂದ, ನಿನ್ನ ರೂಪವೇನು ಅಂದ ಎಂದು ಹೊಗಳಿ ಕಾಗಕ್ಕ ನನಗಾಗಿ ಒಂದು ಹಾಡು ಹಾಡು ಹೇಳು ಎಂದಿತು. ಆಗ ಈ ಕಾಗೆಯೂ ತನ್ನ ಪೂರ್ವಜರಿಂದ ತಾನು ಮಾಂಸದ ತುಂಡನ್ನು ಕಳೆದುಕೊಂಡ ಕತೆಯನ್ನು ಕೇಳಿತ್ತು. ಅದು ಸ್ವಲ್ಪ ಮಾಡರ್ನ್ ಆಗಿ ಥಿಂಕ್ ಮಾಡಿತು. ನರಿ ಹಾಡು ಹೇಳು ಎಂದೊಡನೆ ಮಾಂಸದ ತುಂಡನ್ನು ತನ್ನ ಕಾಲಲ್ಲಿ ಹಿಡಿದುಕೊಂಡು ಕಾಂವ್,ಕಾಂವ್ ಎಂದು ರಾಗಬದ್ಧವಾಗಿ ಹಾಡಲಾರಂಭಿಸಿತು. ಆಗ ನರಿ ಮತ್ತೊಂದು ಉಪಾಯ ಹೂಡಿತು, ಕಾಗಕ್ಕ ಕಾಗಕ್ಕ ನಿನ್ನ ನಾಟ್ಯವದೇನು ಚಂದ, ಒಮ್ಮೆ ಹೃತಿಕ್ ರೋಷನ್ ತರಹ ಸ್ಟೆಪ್ಸ್ ಹಾಕಬಾರದೆ ಎಂದು ಹೇಳಿತು. ಆಗ ಈ ಮಾಡರ್ನ್ ಕಾಗೆ ಮಾಂಸದ ತುಂಡನ್ನು ಬಾಯಲ್ಲಿಟ್ಟುಕೊಂಡು ನಾಟ್ಯ ಮಾಡಲು ಪ್ರಾರಂಭಿಸಿತು. ಆಗ ನರಿ ಮತ್ತೆ ಆಲೋಚನೆ ಮಾಡಿತು. ಕಾಗಕ್ಕ, ಕಾಗಕ್ಕ, ನಿನ್ನ ಹಾಡು ಮತ್ತು ನೃತ್ಯಗಳನ್ನು ನೋಡುತ್ತಿದ್ದರೆ ನನಗೆ ಸಮಂತಾ ಫಾಕ್ಸ್ ನೆನಪಾಗುತ್ತಾಳೆ ಅವಳ ಹಾಗೆ ನಾಟ್ಯ ಮಾಡುತ್ತಾ ಹಾಡು ಹೇಳಿದರೆ ಎಷ್ಟು ಚೆನ್ನಾಗಿರುತ್ತದೆ ಎಂದಿತು. ಆಗ ಈ ಮಾಡರ್ನ್ ಕಾಗೆ ಮಾಂಸದ ತುಂಡನ್ನು ಮರದಲ್ಲಿದ್ದ ಪೊಟರೆಯೊಂದರಲ್ಲಿಟ್ಟು ಹಾಡು ಹೇಳುತ್ತಾ ನಾಟ್ಯ ಮಾಡಲು ತೊಡಗಿತು. ಮತದಾರರನ್ನು ಯಾವು ಯಾವುದೋ ಉಪಾಯದಿಂದ ಕೆಡುವಲು ಪ್ರಯತ್ನಿಸಿ ಓಟುಗಿಟ್ಟಿಸಲು ಅಸಮರ್ಥವಾಗೆ ಠೇವಣಿ ಕಳೆದುಕೊಂಡ ರಾಜಕಾರಣಿಯಂತೆ ಆ ಠಕ್ಕನರಿ ತನ್ನ ಮನೆಯ ಕಡೆ ಹೆಜ್ಜೆ ಹಾಕಿತು.

(ವಿ.ಸೂ.: ಬಹಳ ಹಿಂದೆ ಸ್ನೇಹಿತನೊಬ್ಬನಿಂದ ಕೇಳಿದ ಮಾಡರ್ನ್ ಕಾಗೆ ಕತೆಯ ಸ್ಪೂರ್ತಿಯಿಂದ ರಚಿಸಿದ್ದು ಮತ್ತು ನೆನಪಾದದ್ದು ಶ್ರೀಯುತ ಇಟ್ನಾಳರು ಸಂಗ್ರಹಿಸಿ, ಸಂಪದದಲ್ಲಿ ಕೊಟ್ಟಿರುವ ಮರುಳ ಕಾಗೆ, ರಚನೆ : ಸಿ. ಫ. ಕಟ್ಟಿಮನಿ; ಪದ್ಯದ ದೆಸೆಯಿಂದ.)

Comments

Submitted by lpitnal@gmail.com Fri, 09/21/2012 - 07:34

geleyarada makara ravrare, ee modern kaage kathe keliralilla, tumba channagide. Intaha modern vicharagala kaageya kathe mudaneeditu. Lekhandalli nannannu prastapisi taavu doddatana merediddeeri. Tamma vishal hrudayakke Atmeeya vandanegalu. Bengalurinallivruve, magana Lap nalli nudi illa adakke heege mudrisiddu. Dhanyavadagalu.

Submitted by makara Fri, 09/21/2012 - 09:37

In reply to by lpitnal@gmail.com

ಹೌದು ಈ ಮುಂಚಿನಂತೆ ಕನ್ನಡದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುವ ಸೌಲಭ್ಯವು ಈಗ ಸಂಪದದಲ್ಲಿ ಇಲ್ಲವಾಗಿದೆ ಅದನ್ನು ನಿರ್ವಾಹಕರ ಗಮನಕ್ಕೆ ತರಬೇಕಾಗಿದೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಇಟ್ನಾಳರೆ. ಒಳ್ಳೆಯದನ್ನು ಹಂಚಿಕೊಂಡವರನ್ನು ನೆನೆಪು ಮಾಡಿಕೊಳ್ಳಬೇಕಲ್ಲವೇ ಹಾಗೇ ನಮಗೆ ಸಿಕ್ಕ ಒಳ್ಳೆಯದನ್ನು ಇತರರೊಂದಿಗೆ ಹಂಚಿಕೊಳ್ಳಬೇಕಲ್ಲವೆ? ನೀವು ಕೊಟ್ಟ ಠಕ್ಕ ನರಿಯ ಪದ್ಯದಿಂದ ಈ ಕತೆ ನೆನಪಾಯಿತು ಅದನ್ನೇ ಇಲ್ಲಿ ಪ್ರಸ್ತಾಪಿಸಿದ್ದೇನೆ.
ವಂದನೆಗಳೊಂದಿಗೆ, ಮಕರ.

Submitted by venkatb83 Fri, 09/21/2012 - 16:43

In reply to by makara

ಆಧುನಿಕ ಕಾಗೆ ನರಿ ಕಥೆ ಸಖತ್.. ಹಲವು ಪದ ಪರಯೋಗಗಳು ನೀವು ಹಾಸ್ಯವನ್ನು ಬರೆಯಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತಿವೆ,..... ಖಂಡಿತವಾಗಿ ಆ ನಿಟ್ಟಿನಲ್ಲಿ ಯಶಸ್ವಿ ಆಗಿರುವಿರಿ...

ಶುಭವಾಗಲಿ..

ಶುಭ ಸಂಜೆ...
>> ಕನ್ನಡದಲ್ಲಿ ಟೈಪಿಸಲು ಆಗದೆ ನಾ ಗೂಗಲ್ ತ್ರನ್ಸಿಲ್ತ್ ಬಳಸಿ ಇದನ್ನು ಹಾಕಿರುವೆ..

ನನ್ನಿ

\|