'ಡಂಕಿ' ಚಲನಚಿತ್ರದ ವಾಸ್ತವಿಕತೆಯ ಒಂದು ಅವಲೋಕನ!

'ಡಂಕಿ' ಚಲನಚಿತ್ರದ ವಾಸ್ತವಿಕತೆಯ ಒಂದು ಅವಲೋಕನ!

ಕಳೆದ ವರ್ಷ, ರಾಜು ಹಿರಾನಿ ಅವರ ನಿರ್ದೇಶನದ ಮತ್ತು ಶಾರುಖ್ ಅಭಿನಯದ 'ಡಂಕಿ' ಚಲನಚಿತ್ರವು ಭಾರಿ ಯಶಸ್ಸನ್ನು ಕಂಡಿತ್ತು. ಚಲನಚಿತ್ರದ ಒಂದು ಸಂಭಾಷಣೆಯಾದ: “Humne majboori mein apna ghar choda tha… warna koi apna desh... apna parivaar... apne doston ko chodkar kyun jayega saradon pe goli khane” ಎಂದು ಶಾರುಖ್ ಖಾನ್ ಅವರು ಭಾವುಕರಾಗಿ ಹೇಳಿದಾಗ, ಚಿತ್ರಮಂದಿರದಲ್ಲಿ ಹಲವಾರು ಮಂದಿ ಕಣ್ಣೀರನ್ನು ಸುರಿಸಿದ್ದರು.

'ಡಂಕಿ' ಚಿತ್ರದ ಕಥೆಯು ಕೇವಲ ಒಂದು ಕಾಲ್ಪನಿಕ ಕಥೆಯಲ್ಲ. ರಾಜು ಹಿರಾನಿ ಅವರು ಸಾಮಾನ್ಯವಾಗಿ ಜನಸಾಮಾನ್ಯರ ಜ್ವಲಂತ ಸಮಸ್ಯೆಗಳನ್ನು ಹಾಸ್ಯಾಸ್ಪದ ರೀತಿಯಲ್ಲಿ ಚಿತ್ರೀಕರಿಸುವುದರಲ್ಲಿ ನಿಪುಣರು. ಅವರ ಚಲನಚಿತ್ರಗಳಾದ 'ಮುನ್ನಾ ಭಾಯ್ MBBS' ವೈದ್ಯಕೀಯ ಹಗರಣಗಳ ಮತ್ತು ರೋಗಿಗಳ ನೋವುಗಳನ್ನು ವಿಮರ್ಶೆಸಿದರೆ, '3 ಐಡಿಯಟ್ಸ್' – ವಿದ್ಯಾರ್ಥಿಗಳ ಕಷ್ಟಗಳನ್ನು ಅವಲೋಕಿಸುತ್ತದೆ. 'ಪಿಕೆ' ಚಲನಚಿತ್ರವು ಮೌಢ್ಯವನ್ನು ಪ್ರಶ್ನಿಸುತ್ತದೆ ಮತ್ತು ಅದರಿಂದ ಹುಟ್ಟುವ ಸಂಕಷ್ಟಗಳನ್ನು ವಿವರಿಸುತ್ತದೆ. ಹಾಗೆಯೇ, ಅವರು 'ಅಕ್ರಮ ವಲಸೆಗಾರರ' ನೋವು ಮತ್ತು ಸಂಕಷ್ಟಗಳನ್ನು ಕಣ್ಣು ಕಟ್ಟುವಂತೆ 'ಡಂಕಿ' ಚಲನಚಿತ್ರದಲ್ಲಿ ಹೆಣೆದಿದ್ದರು.

ಕೆಲವು ದಿನಗಳ ಹಿಂದೆ 'ಡಂಕಿ' ಚಲನಚಿತ್ರದ ಕಥೆಯಾಧಾರಿತ ನೈಜ ಘಟನೆಯೊಂದು ದೆಹಲಿಯಿಂದ ವರದಿಯಾಗಿದೆ. ದೆಹಲಿಯ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ವೃದ್ಧರ ವೇಷಭೂಷಣದಲ್ಲಿರುವ ಯುವಕನೊಬ್ಬನನ್ನು CISF ಅಧಿಕಾರಿಗಳು ಬಂಧಿಸಿದರು. ರಷ್ವಿಂದರ ಸಿಂಗ್ ಸಹೊತ (67) ನಾಮದ ಹಿರಿಯರೊಬ್ಬರು ನೀಲಿ ಮುಂಡಾಸು ಮತ್ತು ಬಿಳಿ ಗಡ್ಡವಿರುವ ಹಿರಿಯರೊಬ್ಬರು, ಕೆನಡಾ ಹೋಗುವ ವಿಮಾನದ ಪ್ರಯಾಣಿಗರ ಸಾಲಿನಲ್ಲಿ ನಿಂತಿದ್ದರು. CISF ಅಧಿಕಾರಿಗಳು ಆ ವ್ಯಕ್ತಿಯ ಮಾತನಾಡುವ ಧ್ವನಿಯಲ್ಲಿ ಸಂಶಯವನ್ನು ಕಂಡರು; ಅವನ ಮೈಚರ್ಮವು ಅವನ ವಯಸ್ಸಿಗೆ -  ಒಂದೇ ಒಂದು ಸುಕ್ಕು ಇಲ್ಲದೆ - ಬಹಳ ಮೃದುವಾಗಿತ್ತು.

ಆತನ ಬಂಧನದ ಬಳಿಕ ಆತ 24 ವಯಸ್ಸಿನ ಗುರು ಸೇವಕ್ ಸಿಂಗ್ ಎಂದು ತಿಳಿದುಬಂದಿದೆ; ಹಾಗೂ ಆತ ನಕಲಿ ಪಾಸ್‌ಪೋರ್ಟ್ ಬಳಸಿ ಪ್ರಯಾಣಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ತದನಂತರ, ಆತನ ಪತ್ನಿಯೂ ನಕಲಿ ಪಾಸ್‌ಪೋರ್ಟ್ ಬಳಸಿ ಕೆನಡಾ ವಲಸೆ ಹೋಗಲು ಯತ್ನಿಸಿದ್ದಳು.

ಡಿಸಿಪಿ ಉಷಾ ರಂಗಾನಿ ಅವರು: "ಪ್ರಕರಣದ ತನಿಖೆಯ ಸಂದರ್ಭದಲ್ಲಿ, ದಂಪತಿಗಳು ಉದ್ಯೋಗ ಮತ್ತು ಉತ್ತಮ ಜೀವನೋಪಾಯದ ಅವಕಾಶವನ್ನು ಪಡೆಯಲು ಕೆನಡಾ ಹೋಗಲು ಬಯಸಿದ್ದರು ಎಂದು ಗುರು ಸೇವಕ್ ಬಹಿರಂಗಪಡಿಸಿದರು. ಗುರು ಸೇವಕ್ ಅವರು ತನ್ನ ಸ್ನೇಹಿತರೊಬ್ಬರ ಮೂಲಕ ಏಜೆಂಟ್ ಜಗಜೀತ್ ಸಿಂಗ್ ಅಲಿಯಾಸ್ ಜಗ್ಗಿಯೊಂದಿಗೆ ಸಂಪರ್ಕ ಹೊಂದಿದ್ದರು. 60 ಲಕ್ಷ ರೂಪಾಯಿಗೆ ಬದಲಾಗಿ ಇನ್ನೊಬ್ಬ ವ್ಯಕ್ತಿಯ ಪಾಸ್‌ಪೋರ್ಟ್‌ನಲ್ಲಿ 'Dunki Route' ಮೂಲಕ ಕೆನಡಾದ ಮೂಲಕ ಅಕ್ರಮ ರೀತಿಯಲ್ಲಿ ಗುರುಸೇವಕ್ ಮತ್ತು ಅವರ ಪತ್ನಿಯನ್ನು ಯುಎಸ್‌ಗೆ ಕಳುಹಿಸುವುದಾಗಿ ಜಗಜೀತ್ ಭರವಸೆ ನೀಡಿದ್ದರು." ಎಂದು ಮಾಧ್ಯಮಗಳಿಗೆ ತಿಳಿಸಿದರು. ಇದು ಕೇವಲ ನಿನ್ನೆಯ ಕಥೆಯಲ್ಲ.

"Indians make up 3rd largest illegal immigrant population in US: Pew Research Center ಅವರು ವರದಿ ಮಾಡಿದ್ದಾರೆ. ಅಂದರೆ: ಅಮೆರಿಕಾದಲ್ಲಿ 'ಅಕ್ರಮ ವಲಸೆಗಾರರ ಪ್ರಮಾಣ'ದಲ್ಲಿ ಭಾರತೀಯರು ಮೂರನೇ ಸ್ಥಾನ ಪಡೆದಿದ್ದಾರೆ. ಅಂಕಿ-ಅಂಶಗಳ ಪ್ರಕಾರ 7,25,000 ಭಾರತೀಯ ಅಕ್ರಮ ವಲಸೆಗಾರರು ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ. 2019ರಿಂದ 2020ರವರೆಗಿನ ಅಂಕಿ-ಅಂಶಗಳಲ್ಲಿ ಐದು ಪಟ್ಟು ಹೆಚ್ಚಳದೊಂದಿಗೆ US ಗಡಿಗಳನ್ನು ದಾಟುವ ದಾಖಲೆರಹಿತ ಭಾರತೀಯ ವಲಸಿಗರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. 2014 ನಂತರ ಅಮೆರಿಕಾ, ಇಂಗ್ಲೆಂಡ್, ಮತ್ತು ಕೆನಡಾ ದೇಶದಲ್ಲಿ ಭಾರತೀಯ 'ಅಕ್ರಮ ವಲಸೆಗಾರರ' ಸಂಖ್ಯೆ ವೃದ್ಧಿಯಾಗಿದೆ ಎಂದು ತಿಳಿದು ಬಂದಿದೆ.

"Sharp rise in Indians illegally crossing U.S. northern border from Canada" ಎಂದು ದಿ ಹಿಂದು ಪತ್ರಿಕೆ ವರದಿ ಮಾಡಿದರೆ, "ಕಳೆದ 5 ವರ್ಷಗಳಲ್ಲಿ US ಅಧಿಕಾರಿಗಳು 2 ಲಕ್ಷಕ್ಕೂ ಹೆಚ್ಚು ಅಕ್ರಮ ಭಾರತೀಯ ವಲಸಿಗರನ್ನು ಬಂಧಿಸಿದ್ದಾರೆ" ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ. 2022-23 ವರ್ಷದಲ್ಲಿ 96,917 'ಅಕ್ರಮ ವಲಸೆಗಾರರು' ಅಮೆರಿಕಾದಲ್ಲಿ ಸೆರೆಯಾಗಿದ್ದು ಇಕಾನಾಮಿಕ್ ಟೈಮ್ಸ್ ವರದಿ ಮಾಡಿದೆ. "In Gujarat, illegal migration to U.S. continues unabated" - The Hindu. ಭಾರತದಿಂದ ವಲಸೆ ಹೋಗಿದ್ದ ಹೆಚ್ಚಿನವರಲ್ಲಿ ಗುಜರಾತಿಗರು ಎಂದು ದಿ ಹಿಂದು ಪತ್ರಿಕೆ ವರದಿ ಮಾಡಿದೆ.

"Historically, India has been a key contributor to global migration. The immigration numbers of Indian immigrants to countries like the US have been higher in 2023. The US figure is significantly higher than the UK because the US economy is much larger.  In the first six months of 2023, 84,000 Indians immigrated to Canada." ಎಂದು ಬೆಚ್ಚಿ ಬೀಳಿಸುವ ಸುದ್ದಿಯೊಂದನ್ನು moneycontrol.com ಪ್ರಕಟಿಸಿದೆ.

ಬಂಧಿತರಲ್ಲಿ, ಹೆಚ್ಚಿನವರು ಕೇವಲ ಉದ್ಯೋಗಕ್ಕಾಗಿ ಮತ್ತು ಉತ್ತಮ ಜೀವನೋಪಾಯದ ಅವಕಾಶಕ್ಕಾಗಿ ವಲಸೆ ಹೋಗಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದರು. ನಮ್ಮ ದೇಶದಲ್ಲಿ ಉದ್ಯೋಗಾವಕಾಶದಿಂದ ವಂಚಿತರೇ ಅಕ್ರಮ ವಲಸೆಗಾರರಲ್ಲಿ ಹೆಚ್ಚಿನವರು ಎಂದು ತಿಳಿದು ಬಂದಿರುವುದು ಖೇದಕರ. ಮುಂಬರುವ ದಿನಗಳಲ್ಲಿ, ನಮ್ಮ ದೇಶದಲ್ಲಿ ಉದ್ಯೋಗಗಳು ಸೃಷ್ಟಿಯಾಗಲಿ ಮತ್ತು 'ಅಕ್ರಮ ವಲಸೆಗಾರರ' ಸಂಖ್ಯೆಯು ಇಳಿಯಲಿ ಎಂದು ಆಶಿಸೋಣ!

-ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು

ಇಂಟರ್ನೆಟ್ ಚಿತ್ರ ಕೃಪೆ