ಡಜನ್ನಿಗೆ ಹತ್ತು !!!!!

ಡಜನ್ನಿಗೆ ಹತ್ತು !!!!!

ಬರಹ



ಛೇ! ಛೆ!! ಫಸ್ ಗಯಾ

"ಪಪ್ಪಾ ಒಂದೈವತ್ರುಪಾಯಿ ಕೊಡು" ಎಂದ ಮಗರಾಯ.
"ನಾನ್ಕೊಡಲ್ಲ, ಅಲ್ಲ ಐವತ್ರುಪಾಯಿ ಏನಕ್ಕೆ ಹೇಳು ಮೊದಲು?" ಪಪ್ಪ ಉವಾಚ.
"ಕೊಡ್ತೀಯಾ ಇಲ್ಲವಾ ಹೇಳು ಮೊದಲು" ಮಗನದ್ದು ಒಂದೇ ಮಾತು.
"ಇಲ್ಲವೇ ಇಲ್ಲ" ಅಪ್ಪನ ಖಂಡಿತ ಉತ್ತರ.
"ಹೋಗ್ಲಿ ಬಿಡು ಮಮ್ಮಿ ಹತ್ತಿರ ತಗೋತೀನಿ ಬಿಡು" ಮಗನ ಮಾತಿನಲ್ಲಿ ಖಚಿತತೆ.
"ಹೇಗೆ, ಹೇಗೆ ತಗೋತೀಯಾ?" ತಂದೆಯ ನೋಟದಲ್ಲಿ ಅನಿಶ್ಚತತೆ.
"ಪಕ್ಕದ್ಮನೆ ಅಂಕಲ್ ಹತ್ತಿರ ಅವಳು " ಇವತ್ತು ನೀವು ತುಂಬಾನೇ ಸ್ಮಾರ್ಟಾಗಿ ಕಾಣ್ತಾ ಇದ್ದೀರಾ.." ಅಂತ ಇನ್ನು ಏನೇನೊ ಮಾತಾಡ್ತಾ ಇರೋದನ್ನ ನೋಡಿದ್ದೆ, ಬೆಳಿಗ್ಗೆ.." ಮಗ ನಿಜವಾಗಿಯೂ ಮರಿ ಪತ್ತೆದಾರ.
"ಇನ್ನೂ .. ಏನೇನು ಮಾತಾಡಿಕೊಂಡರು ಹೇಳು..?" ತಂದೆ ಸುಮ್ಮನೆ ಇರಲಾರದಾದ. ಅಂತೂ ಇವತ್ತಾದರೂ ಒಂದು ವಿಷಯ ಸಿಕ್ಕಿತು ಎಂದು ಕೊಂಡನಾತ.
"ಅದು ಹೇಳ್ಬೇಕಾದರೆ ನೂರು ರುಪಾಯಿ ಇಡು ನನ್ನ ಕೈಯ್ಯಲ್ಲಿ" ಪಕ್ಕಾ ವ್ಯಾಪಾರೀ ತಲೆಯೇ  (ಬ್ಯುಸಿನೆಸ್ ಮೈಂಡ್ ).
" ತಗೋ ನೂರು ರುಪಾಯಿ, ಈಗ ಹೇಳು!"ಈ ವಿಶಯಕ್ಕಾದರೆ ನೂರು ರುಪಾಯಿ ಹೆಚ್ಚೇ.
" ನೀವು ಹಾಕಿಕೊಂಡಿರೋ ಈ ಶರ್ಟ್ ತುಂಬಾನೇ ಚೆನ್ನಾಗಿದೆ, ನಮ್ಮ ಯಜಮಾನ್ರಿಗೂ ಇಂತಹದ್ದೇ ಹುಡುಕ್ತಾ ಇದ್ದೆ, ಯಾವ ಅಂಗಡಿಯಿಂದ ತಗೊಂಡ್ರೀ" ಅಂತ ಕೇಳ್ತಾ ಇದ್ದ್ರು.



ಜಾಸ್ತಿ ಅಪಾಯ

ಕುಡುಕನೊಬ್ಬ ಹಾಡ ಹಗಲೇ ಪ್ರೊಫೆಸರೊಬ್ಬರಲ್ಲಿ ತಗಲಿ ಹಾಕಿಕೊಂಡ. ಅವರೆಂದರು" ಅಲ್ಲಯ್ಯಾ, ನೀನೇ ಹೇಳು, ನೀರು ಜಾಸ್ತಿ ಅಪಾಯಾನಾ? ಶರಾಬು ಜಾಸ್ತಿ ಅಪಾಯವಾ? ನೀನೇ ಹೇಳು"
ಶರಾಬಿಯೆಂದ"ನಿಸ್ಸಂಶಯವಾಗಿಯೂ ನೀರೇ!!"
ಯಾಕೆ ಹಾಗೆ ಹೇಳುವಿ?" ಪ್ರೊಫೆಸರರೆಂದ.
"ಈಗ ನೋಡಿ" ಕುಡುಕನೆಂದ"ಈವರ್ಷ ಶರಾಬು ಕುಡಿದು ಎಷ್ಟು ಜನ ಸತ್ತರು ಗೊತ್ತಿದೆಯಾ ನಿಮಗೆ? ಬರೇ ನೂರು ಜನರು ಅಷ್ಟೇ!, ಅದೇ ನೆರೆಯಿಂದಾಗಿ ಅದರ ಹತ್ತು ಪಟ್ಟು ಜನರು ಸತ್ತಿದ್ದಾರೆಗೊತ್ತಾ? ಹಾಗಿರುವಾಗ.....ನೀರೇ ಜಾಸ್ತಿ ಅಪಾಯ ಕಾರಿ ಅಂತ ಆಯ್ತಲ್ಲಾ?"

ದೊಡ್ಡ ಪುರಾವೆ

ಟೀಟಿಯೊಬ್ಬನಲ್ಲಿ ಸಿಕ್ಕಿ ಹಾಕಿಕೊಂಡ ತ್ಯಾಂಪನೊಮ್ಮೆ.
"ನಾನು ಈ ರೈಲಿನಲ್ಲಿ ಪ್ರಯಾಣಿಸಲೇ ಇಲ್ಲ" ತ್ಯಾಂಪನೆಂದ.
ದಿನಾ ಇಂತಹ ಜನರನ್ನು ಅನೇಕ ಬಾರಿ ನೋಡುತ್ತಿದ್ದ ಟೀಟಿ
"ಹಾಗಿದ್ದಲ್ಲಿ  ನೀನು ಈ ರೈಲಿನಲ್ಲಿ ಪ್ರಯಾಣಿಸಲಿಲ್ಲವೆಂದು ಒಂದೇ ಒಂಡು ಪುರಾವೆ ಕೊಡು ನೋಡೋಣ?"
ನನ್ನಲ್ಲಿ ಟಿಕೇಟಿಲ್ಲದಿರುವುದಕ್ಕಿಂತ ದೊಡ್ಡ ಪುರಾವೆ ಬೇಕೇ ನಿಮಗೆ?" ಕೇಳಿದ ತ್ಯಾಂಪ.

ಕಡಿಮೆ ಮಾಡ್ಕೋಂಡ್ರೆ

ಮುದುಕರೊಬ್ಬರು ತರಕಾರಿಯವನ ಹತ್ತಿರ ಚೌಕಾಶಿ ಮಾಡುತ್ತಿದ್ದರು.
"ತಾಜಾಮಾಲು ಸ್ವಾಮೀ, ತುಂಬಾನೇ ಚೆನ್ನಾಗಿದೆ ತಗೊಳ್ಳಿ" ತರಕಾರಿಯವನೆಂದ.
"ಸರಿ ಕಣಪ್ಪಾ, ಆ ಮೋಸಂಬಿ ಹೇಗೆ?" ಇವರೋ ಚೌಕಾಶೀ ಮಾಸ್ತರರು.
" ಅದಾ..? ಡಜನ್ನಿಗೆ ಬರೇಮೂವತ್ತು ರುಪಾಯಿ ಅಷ್ಟೇ !!" ಈಗಲೇ ಎಲ್ಲದರ ರೇಟು ಹೇಳಿ ಬೇಸತ್ತಿದ್ದ ಆತ.
" ಸ್ವಲ್ಪ ಕಮ್ಮಿ ಮಾಡ್ಕೊಳ್ಳಯ್ಯಾ,ನಾನು ದಿನಾ ನಿನ್ನ ಹತ್ರಾನೇ ತಗೋಳೋದಲ್ವಾ?" ಬಿಡಲೊಲ್ಲದೇ ಕೇಳಿದರು.
" ಅದಕ್ಕೇನು ಸ್ವಾಮೀ, ನೀವು ಹತ್ತೇ ತಗೊಳ್ಳೀ, ಆಯ್ತಾ?" ಅವನೂ ಏನೂ ಕಡಿಮೆಯಿಲ್ಲ, ಡಜನ್ ನನ್ನೇ ಹತ್ತಕ್ಕಿಳಿಸಿದನಾತ.