ಡಯಟ್ ಪ್ರಿಯರು ನಾವು

ಡಯಟ್ ಪ್ರಿಯರು ನಾವು

ಕವನ

 ಡಯಟ್ ಪ್ರಿಯರು ನಾವು
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
 

ಬಹಳಾ ಡಯಟ್ ಮಾಡ್ತಾರ್ರೀ ನಮ್ಮ ಕನ್ನಡದವರು
ಅನ್ನ ತಿನುವುದಿಲ್ಲ; ತಂಗಳಿನ ಮೇಲೆ ಪ್ರೀತಿ ಬಹಳ
 
ಸಕ್ಕರೆಯ ಬದಲು ಇನ್ನೇನೋ ಬಿಳಿಯ ಪುಡಿ ಕಾಫೀಗೆ
ಹಸುವಿನ ಹಾಲು ನಿಷೇಧವಾಗಿ, ಕರೀ ಕಾಫೀ ಬಾಯಿಗೆ
 
ಬೆಣ್ಣೆ, ತುಪ್ಪ ಎಂದರೇನು ಎನ್ನುವುದೇ ನೆನಪಿಲ್ಲ ಇವರಿಗೆ
ಎಣ್ಣೆಯೇ ಇಲ್ಲದ ಒಗ್ಗರಣೆ; ಕನ್ನಡದ ಅಡಿಗೆ ಮಾಡಿದರೆ!
 
ತಿಂಗಳಿಗೊಂದಲ್ಲ, ದಿನಾನೂ ಮೈಲಿಗೆ ಅಡುಗೆ ಮಾಡೆಂದರೆ
ಆಡಿನ ಜಾತಿಯವರಪ್ಪಾ ನಾವೆಲ್ಲಾ ಎಲೆ ಮಾತ್ರ ತಿನ್ನುವುದು
 
ಅಮ್ಮನ ಚಾಳಿ ಮನೆ ಮಂದಿಗೆಲ್ಲಾ; ಮಕ್ಕಳಿಗೆ ಕನ್ನಡ ಅಲರ್ಜಿ!
ಅಪ್ಪನಿಗೆ ಎಲ್ಲಾ ಬಿದ್ದು ಹೋಗಿರಬೇಕು; ಹೆಣ್ ಪೆಕ್ದ್ ಅಂತಾರಲ್ಲ!
 
ದಯಟ್ಟಿಗೆ ಪರಿಮಿತಿಯೇ ಇಲ್ಲ; ಕನ್ನಡ ಸಾಹಿತ್ಯ ಕಿವಿಗೆ ಕಹಿ
ವರುಷಕ್ಕೆ ಒಂದು ಸಾರಿ ಓದಿದರೆ ಕನ್ನಡ ತಾಯಿಗೆ ಸಾಕೆ?