ಡಾಕ್ಟರ್ ವಂದನ ಶಿವ ಅವರಿಂದ ಭಾಷಣ - ವಿಷಯ: ರಾಷ್ಟ್ರೀಯ ಕೃಷಿ ನೀತಿ
ಜನವರಿ ೨೦೦೮ರಂದು Institute of Agriculture Technologists, ಕ್ವೀನ್ಸ್ ರಸ್ತೆ, ಬೆಂಗಳೂರು, ಇಲ್ಲಿ ಹೆಸರಾಂತ ಲೇಖಕಿ ಮತ್ತು ಚಳುವಳಿಗಾರ್ತಿ ವಂದನ ಶಿವ ಅವರ ಭಾಷಣವನ್ನು ಏರ್ಪಡಿಸಲಾಗಿದೆ. Friends of Organic ಎಂಬ ಸಂಸ್ಥೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ.
ಭಾಷಣದ ವಿಷಯ: ಇತ್ತೀಚೆಗೆ ಲೋಕಸಭೆಯಲ್ಲಿ ಚರ್ಚೆಗೆ ಬಂದಿರುವ ಭಾರತದ "ರಾಷ್ಟ್ರೀಯ ಕೃಷಿ ನೀತಿ".
ಭಾಷಣದ ನಂತರ ಮಾತುಕತೆಯಲ್ಲಿ ಪಾಲ್ಗೊಳ್ಳುವವರು: ಡಾಕ್ಟರ್ ಯೂ. ಆರ್. ಅನಂತಮೂರ್ತಿ, ಡಾಕ್ಟರ್ ರಾಮಕೃಷ್ಣಪ್ಪ, ನಾಗೇಶ್ ಹೆಗ್ಡೆ, ನಾರಯಣ ರೆಡ್ಡಿ, ಭರಮಗೌಡ, ಕೆ. ಎಸ್. ಪುಟ್ಟಣ್ಣಯ್ಯ.
ಭಾರತದ ರಾಷ್ಟ್ರೀಯ ಕೃಷಿ ನೀತಿಯ ಕರಡನ್ನು ಹೆಸರಾಂತ ಕೃಷಿ ಸಂಶೋಧಕ ಎಂ. ಎಸ್. ಸ್ವಾಮಿನಾಥನ್ ನೇತೃತ್ವದ ತಂಡ ರಚಿಸಿದೆ.