ಡಾ|ರಾಜ್ - ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ !

ಡಾ|ರಾಜ್ - ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ !

 

ಡಾ|ರಾಜ್ ಅವರ ಹುಟ್ಟು ಹಬ್ಬದಂದು ಅವರ ವಿಚಾರ ಅಧಾರಿತವಾಗಿ ಏನಾದರೂ ಬರೆಯಲೇಬೇಕೆಂದು ನಿರ್ಧಾರ ಮಾಡಿದ್ದೆ. ಆದರೆ ಏನು ಬರೆಯಬೇಕೆಂದು

ತಲೆಗೆ ಬಂದಿರಲಿಲ್ಲ. ಹಾಡುಗಳನ್ನು ಹಾಡಿಕೊಂಡು ಪದರಂಗ ಮಾಡಿದ್ದಾಯಿತು ... ಸಾಮಾಜಿಕ ಮತ್ತು ಪೌರಾಣಿಕ ಚಿತ್ರಗಳ ಎರಡು ರೀತಿಯ ಪದರಂಗ ರಚಿಸಿದ್ದಾಯಿತು. ಮುಂದೇನು?

 

ನಾನ್ನಾಕೆ ಕೊಟ್ಟ ಸಲಹೆ "ಡೈಲಾಗ್ಸ್" ಎಂದು.

 

ಡಾ|ರಾಜ್ ಸಂಭಾಷಣೆಗಳನ್ನು ಆಧರಿಸಿ ಒಂದು ರಸಪ್ರಶ್ನೆ ತಯಾರಿಸಿಯೇಬಿಟ್ಟೇ ನೋಡಿ. ಹೆಚ್ಚು ಕಷ್ಟವಾಗಲಿಲ್ಲ ... ಯಾಕೆ ಅಂದಿರಾ? ಅವರ ಸಂಭಾಷಣೆಯ ವೈಖರಿಯೇ ಹಾಗೆ. ಅಷ್ಟರಮಟ್ಟಿಗೆ ನಮ್ಮಲ್ಲಿ ಬೆರೆತು ಹೋಗಿದೆ !! ಅವರ ಇಪ್ಪತ್ತು ನಾಲ್ಕು ಚಿತ್ರಗಳಿಂದ ಆಯ್ದ ಸಂಭಾಷಣೆಯ ತುಣುಕುಗಳನ್ನು ಇಲ್ಲಿ ಕೊಟ್ಟಿದ್ದೇನೆ. ನಿಮ್ಮ ಕೆಲಸ ಏನು ಅಂದರೇ .....

 

ಮೊದಲು ಸಾಲುಗಳನ್ನು ಓದಿ ... ಯಾವ ಚಿತ್ರದ್ದು ಎಂದು ಯೋಚಿಸಿ ... ಸನ್ನಿವೇಶ ನೆನಪಿಸಿಕೊಳ್ಳಿ ... ಸನ್ನಿವೇಶದ ಭಾವುಕತೆಯನ್ನು ಅನುಭವಿಸಿಕೊಂಡು ಮತ್ತೊಮ್ಮೆ ಓದಿ ... ಚಿತ್ರದ ಹೆಸರನ್ನು ಪ್ರತಿಕ್ರಿಯೆಯಲ್ಲಿ ಹಾಕಿ ... ಪ್ರಶ್ನೆಗಳೆಲ್ಲ ಉತ್ತರಿಸಿದ ಮೇಲೆ, ನಿಮ್ಮ ಮನದಲ್ಲಿ ಮೂಡಿ ಬಂದ ಇನ್ಯಾವುದೇ ಸಂಭಾಷಣೆಗಳನ್ನೂ ಬರೆದರೆ ಇನ್ನೂ ಚೆನ್ನ ... ಮಾತು ಜಾಸ್ತಿ ಆಯ್ತು ... ಈಗ ಕೆಲ್ಸಕ್ಕೆ ಬರೋಣ ...

 

ರಸಪ್ರಶ್ನೆಯ ಪ್ರಶ್ನೆಗಳು :-

 

೦೧. ಬ್ಯಾಂಗಳೂರ್ !! ಬೆಂಗಳೂರಿನಲ್ಲಿ ಇದ್ಗೊಂಡ್ ಕನ್ನಡ ಮಾತಾಡೊಕ್ಕೆ ಬರೋಲ್ವಾ? ಕರ್ನಾಟಕದಲ್ಲಿರೋ ಎಲ್ಲರೂ ಕನ್ನಡ ಕಲೀಬೇಕು ಅನ್ನೋದೇ ನನ್ನಾಸೆ ...

 

೦೨. ನೀಲ ನನ್ನನ್ನ ಏನೋ ಕೇಳೋಕ್ಕೆ ಬಂದಿದ್ದಾಳೆ. ಅವಳು ಏನೇ ಕೇಳಿದರೂ, ನನ್ನಲ್ಲಿ ಇರೋದನ್ನ ಮಾತ್ರ ಕೇಳೋ ಹಾಗೆ ಮಾಡು ಪ್ರಭು.

 

೦೩. ಈ ಬಂಗ್ಲೇ ಮನೇನ ಗ್ರಾಮಕ್ಕೆ ಬೇಕಾದ ಆಸ್ಪತ್ರೆಗೋ, ಇಲ್ಲಾ ಮಕ್ಕಳ ಶಾಲೆಗೋ, ಯಾವುದಕ್ಕೆ ಬೇಕಾದರೂ ಸದುಪಯೋಗ ಪಡಿಸಿಕೊಳ್ಳಿ

 

೦೪. ಒಬ್ಬಟ್ಟ್ನಾಗೆ ಊರಣ ತುಂಬ್ದಂಗೆ ತಲೇನಾಗೆ ಬುದ್ದಿ ತುಂಬಿರ್ತಾನೆ ದೇವರು. ಕುರಿಗೆ ಕುರಿ ಬುದ್ದಿ, ನರಿಗೆ ನರಿ ಬುದ್ದಿ.

 

೦೫. ಯಾವ ಮನೆಯಲ್ಲಿ ನಿತ್ಯ ಪೂಜೆ-ಪುನಸ್ಕಾರಗಳು ನೆಡೆಯುತ್ತಿತ್ತೋ, ಯಾವ ಮನೆ ದೇವರ ಗುಡೀನೇ ಆಗಿತ್ತೋ, ಆ ಮನೆಯಲ್ಲಿ ಇವತ್ತು ಕುಡುಕರು ಕುಣಿತ, ಕುಡುಕರ ಸಂತೆ ..

 

೦೬. ಏನಣ್ಣ? ಟೀ’ನಾ? ನೀ ಹಾಕ್ಕೊಂಡ್ ಬಂದಿದ್ದೀಯಲ್ಲ ಆ ಎಣ್ಣೇನ್ನ ಬೆರೆಸಿದ್ದೀಯೇನೋ ಅಂತ ಅಂದ್ಕೊಂಡೆ. ಅದೆಲ್ಲ ಚೆನ್ನಾಗಿರಲ್ಲ. ನೀನು ಕುಡೀಬೇಡ... ಬಿಟ್ಬಿಡು

 

೦೭. ದೇವರೇ, ನಾ ಕಟ್ಟಿದ ಆಶೋಗೋಪುರ ಕಳಚಿದ ಮೇಲೆ ಸಾಕಷ್ಟು ನೋವು ಅನುಭವಿಸಿದ್ದೀನಿ. ಇನ್ನೊಂದು ಕನಸನ್ನೂ ಹಾಗೇ ಮಾಡಿಬಿಡಬೇಡಪ್ಪ.

 

೦೮. ನನ್ನ ಜಾತಕದಲ್ಲಿ ಕುಜ ದೋಷ ಇದೆಯಂತೆ. ಮದುವೆಯಾದ ಒಂದೇ ವರ್ಷದಲ್ಲಿ ಹೆಂಡತಿ ಸತ್ ಹೋಗ್ತಾಳಂತೆ!

 

೦೯. ಚೆನ್ನಜ್ಜ ಇದ್ದಾನಲ್ಲ ಚೆನ್ನಜ್ಜ, ಅವನಿಗೆ ವಿಪರೀತ ಜ್ವರ ... ಪಾಪ ಕೊಡ್ಲೀನೇ ಎತ್ತಕ್ಕೆ ಆಗ್ತಿರ್ಲಿಲ್ಲ ಆತನಿಗೆ

 

೧೦. ಅಪ್ಪಾ?? ಮನೆ ಕೆಲಸ ಮಾಡೊಕ್ಕೆ ಬಂದಿರೋ ಆಳು .. ಅಪ್ಪ ಹೇಗಾಗ್ತಾನೆ ಯಜಮಾನ್ರೇ? ಬಡವನ ಕೋಪ ದವಡೆಗೆ ಮೂಲ ಅನ್ನೋ ಹಾಗೆ, ಮನೆ ಆಳು ಕೋಪಿಸಿಕೊಂಡರೆ ಯಜಮಾನನಿಗೆ ಏನು ನಷ್ಟ? ನೀನು ಯಜಮಾನ ... ನಾನು ಜವಾನ.

 

೧೧. ಕಂದಾ, ಏಕಪ್ಪ ನಿನಗೆ ಈ ಹಠ. ಯಾವ ನಿನ್ನ ತಂದೆಯ ಹೆಸರನ್ನು ಕೇಳಿದರೆ ತ್ರಿಮೂರ್ತಿಗಳು ಗಡಗಡನೆ ನಡುಗುವರೋ ....

 

೧೨. ತುಂಬಿದ ಸಭೆಯಲ್ಲಿ ನಮ್ಮವರ ಮುಂದೆ ನೀನು ಏನು ಹೇಳಿದೆ? ನಿನ್ನಾ ಚಿಕ್ಕಪ್ಪ ಚಿಕ್ಕ ಅಪ್ಪನೇ ಹೊರತು ಇಲ್ಲಾರಿಗೂ ದೊಡ್ಡ ಅಪ್ಪನಲ್ಲವೆಂದು ಹೇಳಿ, ಬಾಯಿಗೆ ಬಂದಂತೆ ಹರಟಿದ ನೀನು, ಈಗ ಶರಣಾರ್ಥಿಯಾಗಿ ಬಂದಿರೋದನ್ನ ನೋಡಿದರೆ, ನಮಗೆ ಕನಿಕರವಾಗ್ತಾ ಇದೆ.

 

೧೩. ಹಿಡಿದು ಬಿಡ್ತಾರಂತೆ ಹಿಡಿದ್ಬಿಡ್ತಾರೆ ... ನಾನೇನು ಕುರಿಮರೀನ ಹಿಡಿಯೋಕ್ಕೆ? ... ನಾನು ಮನಸ್ಸು ಮಾಡಿದರೆ, ಒಬ್ಬೊಬ್ಬ್ರನ್ನೂ ನೇಣು ಹಾಕಿಸಬಲ್ಲೆ ... ಮೊದಲು ನಾನು ಉಳ್ಕೊಂಡ್ರೆ ಅಲ್ವೇ? ... ಏ ರುಕ್ಕೂ ... ಏನದೃಷ್ಟಾನೆ ನಿಂದು? ಹೋಗೀ ಹೋಗೀ ಈ ಕಳ್ಳನ್ನ ಕಟ್ಕೋಬೇಕೂ ಅಂತ ಆಸೆ ಪಟ್ಯಲ್ಲೇ?

 

೧೪. ಜ್ಞ್ನಾಪಿಸ್ಕೋ ... ಇನ್ನೂರು ವರ್ಷಗಳ ಹಿಂದೆ ನಾವು ಸಂಧಿಸಿದ್ದು, ನೋಡಿದ್ದು, ಮಾತಾಡಿದ್ದು, ಪ್ರೀತಿಸಿದ್ದು ... ಒಬ್ಬರಿಗೊಬ್ಬರು ಪ್ರಾಣ ಕೊಡೋಕ್ಕೂ ಸಿದ್ದವಾಗಿದ್ವಿ

 

೧೫. ಬೇಡ ಪಾರ್ವತಿ ... ನೀನು ನನ್ನಿಂದ ದೂರ ಆದ್ರೆ, ಖಂಡಿತ ನಾನು ಬದುಕಿರೋದಿಲ್ಲ .... ರಾಮೂ ... ಹೋಗಪ್ಪ ... ಬೇಗ ಕಾರ್ ತೊಗೊಂಡ್ ಹೋಗಿ ಡಾಕ್ಟರ್’ನ ಕರ್ಕೊಂಡ್ ಬಾ ..... 

 

೧೬. ನಡಿ ಉಷಾ ... ಯಾವ ಜಾಗದಲ್ಲಿ ನಮ್ಮ ಪ್ರೀತಿಗೆ ಬೆಲೆ ಇಲ್ಲವೋ ಆ ಜಾಗದಲ್ಲಿ ನಾವು ಇರಬಾರದು ...

 

೧೭. ಶಂಕ್ರೂ ಅಲ್ಲ ... ಶಂಕ್ರು ತಂದೆ ರಾಜಶೇಖರ್ ಮಾತಾಡ್ತಿರೋದು ... ರಾಜಶೇಖರ್ ... ನಿನ್ನ ರಾಜಶೇಖರ್ ಸುಮತಿ ಮಾತಾಡ್ತಿರೋದು ...

 

೧೮. ಅಮ್ಮಾ ... ತಾಯಿ ... ಮುರಿದು ಬೀಳ್ತಾ ಇದ್ದ ಸಂಸಾರಕ್ಕೆ ಹೊಟ್ಟೆ ತುಂಬ ಅನ್ನ ಕೊಟ್ಟು ಕಾಪಾಡಿದ್ದೀಯ. ಈಗ ನಿನ್ನ ಸೇವೆ ಬಿಟ್ಟು ದೂರ, ಬಹುದೂರ ಹೋಗ್ತಾ ಇದ್ದೀನಿ.

 

೧೯. ಈ ಮಣಿ ಕಿರೀಟ ನಿನಗೆ ಬೇಡವೆ? ಈ ಸಾಮ್ರಾಜ್ಯ ನಿನಗೆ ಬೇಡವೇ ಎಂದು ಕೇಳುತ್ತಿದ್ದವಳು ನೀನೇನೇ ಅಮ್ಮ?

 

೨೦. ಇನ್ನೊಂದು ಸಲ ಆ ಶಬ್ದ ನಿನ್ ಬಾಯಲ್ಲಿ ಬಂದರೆ ಹೂತು ಹಾಕ್ಬಿಡ್ತೀನಿ ಭಡವ !! ಹೆಣ್ಣು ಜನ್ಮ ಕೊಡೋ ತಾಯಿ ಕಣೋ. ಮೊದಲು ಅವಳಿಗೆ ಮರ್ಯಾದೆ ಕೊಡಿ. ಉದ್ದಾರ ಆಗ್ತೀರ.

 

೨೧. ನಿನ್ನನ್ನ ಏನಂತ ಕರೀಲಿ? ಸ್ನೇಹಿತ ಅನ್ನಲೇ? ಸಹಾಯಕ್ಕೆ ಬಂದಿರೋ ಪುಣ್ಯಾತ್ಮ ಅಂತ ಕರೀಲೇ? ಅಪ್ಪಾ ಅಂತ ಕರೀಲೆ? ಅಥವಾ ಕೈ ತುತ್ತು ತಿನ್ನಿಸ್ತ ಕಾಪಾಡೊ ಹೆತ್ತ ತಾಯಿ ಅಂತ ಕರೀಲೆ?

 

೨೨. ಮುಳ್ಳನ್ನ ಮುಳ್ಳಿನಿಂದಲೇ ತೆಗೀ ಬೇಕೂ ಅನ್ನೋ ಹಾಗೆ ನಾನೂ ನಮ್ಮಕ್ಕನಂತೇ ನೆಡೆದುಕೊಂಡೆ. ಇಲ್ದೆ ಇದ್ದಿದ್ರೆ ನಿನಗೆ ಕೊಳೆ ಬಟ್ಟೆ ಒಗೆಯೋದ್ ತಪ್ತಾ ಇರ್ಲಿಲ್ಲ, ಚಳೀಲಿ ನಡುಗೋದ್ ತಪ್ತಿರ್ಲಿಲ್ಲ, ನಿನ್ನಿಷ್ಟದಂತೆ ಕಾಲೇಜ್’ಗೆ ಹೋಗೋದಕ್ಕೂ ಆಗ್ತಿರ್ಲಿಲ್ಲ ...

 

೨೩. ನೀ ಯಾರು ಅಂತ ನನಗೆ ಗೊತ್ತಿಲ್ವ? ನಿಮ್ಮಜ್ಜಿ ಪುಟ್ನಂಜಿ, ಕೆನ್ನೆ ಗುಲಗಂಜಿ, ಬಣ್ಣ ಅಪರಂಜಿ, ಕೆರಳಿದ್ರೆ ಕಾರಂಜಿ

 

೨೪. ನಮ್ ಮೈಲಾರಿ ಒಮ್ಮೆ ಗುದ್ದ ನೋಡು, ಹಾಗೇ ನೆಗೆದು ಬಿಟ್ಟ .. ಮೇಲೆ .. ಬೊಮ್ಮ

 

 

{ಹುಟ್ಟು ಹಬ್ಬದ ಶುಭಾಶಯಗಳು .. ರಾಜ್ ನೆನಪು ನೂರಾರು ವರ್ಷ ಹಸಿರಾಗಿರಲಿ}

 

Comments