ಡಾರ್ವಿನ್ ನ ವಿಕಾಸವಾದ: ಒಂದು ಕಿರು-ಪರಿಚಯ

ಡಾರ್ವಿನ್ ನ ವಿಕಾಸವಾದ: ಒಂದು ಕಿರು-ಪರಿಚಯ

ಬರಹ

[ಈ ಬರಹವನ್ನು ಸಂಪದದ ಲೇಖನ ಒಂದಕ್ಕೆ ಕಮೆಂಟಿನ ರೂಪದಲ್ಲಿ ಮೊದಲು ಬರೆದಿದ್ದೆ. ಇನ್ನು ಹೆಚ್ಚಿನ ಜನರಿಗೆ ತಲುಪಲಿ ಎಂದು ಕೆಲವು ಬದಲಾವಣೆಗಳೊಂದಿಗೆ ಲೇಖನವಾಗಿಸುತ್ತಿದ್ದೇನೆ.]

ವಿಕಾಸವಾದದ ಬಗ್ಗೆ ಜನರಲ್ಲಿ ತಿಳುವಳಿಕೆಗಿಂತ ತಪ್ಪು-ತಿಳುವಳಿಕೆ ಹೆಚ್ಚು ಎಂದರೆ ತಪ್ಪಾಗಲಾರದು. ಇದಕ್ಕೆ ಬಹುಷಃ ವಿಕಾಸವಾದದ ತಿರುಳನ್ನು ಪರಿಣಾಮಕಾರಿಯಾಗಿ ತಿಳಿಸಲು ನಮ್ಮ ಶಿಕ್ಷಣ ವ್ಯವಸ್ಥೆಯ ವೈಫಲ್ಯವೇ ಕಾರಣವಾಗಿರಬಹುದು. ಅಥವಾ ಮಾಧ್ಯಮಗಳಿಂದ ವಿಕಾಸವಾದದ 'ಮಂಗನಿಂದ ಮಾನವ' ಅನ್ನುವ over-simplification ಕೂಡ ಇರಬಹುದು. ಒಟ್ಟಿನಲ್ಲಿ ವಿಕಾಸವಾದದ ಬಗ್ಗಿನ ಬಹಳಷ್ಟು ಅಪನಂಬಿಕೆಗಳು ಮತ್ತು ಅನುಮಾನಗಳು ವಿಕಾಸವಾದದ ಮೂಲಭೂತ concept ಗಳ ತಿಳುವಳಿಕೆಯ ಅಭಾವದಿಂದ ಉಂಟಾದವು ಅನಿಸುತ್ತದೆ. ಆ ದಿಟ್ಟಿನಲ್ಲಿ ವಿಕಾಸವಾದದ concept ಗಳ ಕಿರುಪರಿಚಯ ಈ ಲೇಖನದ ಉದ್ದೇಶ. ನಿಮ್ಮೆಲ್ಲರ ಪ್ರತಿಕ್ರಿಯೆ, ಅನುಮಾನಗಳಿಗೆ ಸ್ವಾಗತ. 

ಈಗ ವಿಜ್ಞಾನಿಗಳು ಸಾರ್ವತ್ರಿಕವಾಗಿ ಒಪ್ಪಿಕೊಂಡಿರುವ ವಿಕಾಸವಾದದ ಮುಖ ಮಜಲುಗಳು ಇವು ಮೂರು.
೧. Variation
೨. Pressure on resources
೩. Natural selection
(ಇವಲ್ಲದೆ ಇತರ ಸೂಕ್ಷ್ಮ ಮಜಲುಗಳು ಇವೆ. ಆದರೆ ವಿಕಾಸವಾದದ ತಳಹದಿಯನ್ನು ತಿಳಿಯಲು ಅವು ಅವಶ್ಯಕವಲ್ಲ)

೧. Variation : ಜೀವಿಗಳು ಪೀಳಿಗೆಯಿಂದ ಪೀಳಿಗೆಗೆ ಬದಲಾಗುತ್ತವೆ. ಈ ಬದಲಾವಣೆಗೆ
ಹಲವು ಕಾರಣಗಳಿದ್ದರೂ, ಮುಖ್ಯವಾಗಿ ತಂದೆ ಮತ್ತು ತಾಯಿಯರ ಜೀನ್ಸ್ ಗಳ ಮಿಶ್ರಣದಿಂದ
ಬದಲಾವಣೆಗಳು ಉಂಟಾಗುತ್ತವೆ. ಉದಾಹರಣೆಗೆ ಮಗುವಿಗೆ ತಂದೆ ತಾಯಿಯರ ಹೋಲಿಕೆ ಇದ್ದರೂ,
ತಂದೆ ತಾಯಿಯರಲ್ಲಿ ಇರದ ಲಕ್ಷಣಗಳು ಕೂಡ ಇರುತ್ತವೆ. (ಇದು ಗ್ರೆಗರ್ ಮೆಂದಲ್ ನ
ಜೆನೆಟಿಕ್ಸ್ ವಾದಕ್ಕೆ ಅನುಗುಣವಾಗಿಯೇ ಇದೆ.) ಈ ಬದಲಾವಣೆ ಸಂಪೂರ್ಣ ramdom. ಯಾವುದೇ
ಉದ್ದೇಶದೆಡೆಗೆ ಈ ಬದಲಾವಣೆಗಳು ಒಯ್ಯುವುದಿಲ್ಲ. ಉದಾಹರಣೆಗೆ ಒಂದು ದಂಪತಿಗಳಿಗೆ ೧೦
ಮಕ್ಕಳಾದರು ಎನ್ನಿ, ಅವರೆಲ್ಲ ಒಂದೇ ತಂದೆ ತಾಯಿಯರ ಜೀನ್ಸ್ ಗಳಿಂದ ತಮ್ಮ ಜೀನ್ಸ
ಗಳನ್ನು ಪಡೆದಿದ್ದರೂ, ಒಟ್ಟಿನಲ್ಲಿ ಪರಸ್ಪರ ವ್ಯತ್ಯಾಸಗಳನ್ನು ಹೊಂದಿರುತ್ತಾರೆ.
ಕೆಲವರು ಉದ್ದ, ಕೆಲವರು ಗಿಡ್ಡ, ಕೆಲವರು ಬಿಳುಪು, ಕೆಲವರು ಕಪ್ಪು ಹೀಗೆ. ಕೆಲವರಿಗೆ
ಸೀಳು ತುಟಿಯೋ, ಹೃದಯ ಕವಾಟದ ತೊಂದರೆಯೋ, ಒಳ್ಳೆಯ ಬುಧ್ಧಿಮತ್ತೆಯೋ, ಅಧ್ಭುತ
ವಾಕ್-ಶಕ್ತಿಯೋ ಇರಬಹುದು. ಇದರಲ್ಲಿ ಕೆಲವು ಗುಣಗಳು ತಂದೆ ತಾಯಿಯರಲ್ಲಿ ಇರದೇ ಇರುವುದು
ಕೂಡ ಇರಬಹುದು.

ಇಲ್ಲಿ ಒಂದು standard ಉದಾಹರಣೆ ಎಂದರೆ Peppered Moth ಎನ್ನುವ ಪತಂಗದ್ದು. ಒಂದು ಗಂಡು (ಬಿಳಿ) ಹೆಣ್ಣು (ಕಪ್ಪು) ಪತಂಗಗಳು ಸೇರಿ ೧೦೦
ಮೊಟ್ಟೆ ಇಟ್ಟವು ಎಂದುಕೊಳ್ಳೋಣ. ಅವುಗಳಲ್ಲಿ ಸುಮಾರು ೨೫ ಬಿಳಿ ಪತಂಗಗಳೂ, ೨೫ ಕಪ್ಪು
ಪತಂಗಗಳೂ, ೫೦ ಮಿಶ್ರ ಪತಂಗಗಳೂ ಹುಟ್ಟುತ್ತವೆ. ಸರಿಯಷ್ಟೇ? ಇದು ಮೆಂದಲ್ ನ ವಾದಕ್ಕೆ
ಅನುಗುಣವಾಗಿಯೇ ಇದೆ.

೨. Pressure on resources : ಜೀವಿಗಳ ಸಂಖ್ಯೆಯು ಅವಕ್ಕೆ ಲಭ್ಯವಿರುವ
ಸಂಪನ್ಮೂಲಗಳಿಗಿಂತ ಹೆಚ್ಚು . ಒಂದೊಂದು ಪ್ರಾಣಿಗೂ ಅಸ್ತಿತ್ವದಲ್ಲಿ ಇರಲು ಹಲವು
ಸಂಪನ್ಮೂಲಗಳ ಅಗತ್ಯ ಇರುತ್ತದೆ. ಅದು ಆಹಾರ, ನೀರು, ಬೆಳಕು ಇತ್ಯಾದಿ ಆಗಿರಬಹುದು ಅಥವಾ
ಬೇರೆ ಜೀವಿಗಳಿಂದ ರಕ್ಷಣೆ ಆಗಿರಬಹುದು. ಅದು ಯಾವಾಗಲೂ ಎಲ್ಲ ಜೀವಿಗಳಿಗೂ ಸಾಕಾಗುವಷ್ಟು
ಇರುವುದಿಲ್ಲ.ಇದು ಅರ್ಥ ಮಾಡಿಕೊಳ್ಳಲು ಸುಲಭ. ಹುಲಿಗಳ ಸಂಖ್ಯೆ ಹೆಚ್ಚಾದಲ್ಲಿ ಅವಕ್ಕೆ ತಿನ್ನಲು ಜಿಂಕೆಗಳ ಕೊರತೆ ಆಗುತ್ತದೆ ಇತ್ಯಾದಿ.

೩. Natural Selection: ತನ್ನ ಸುತ್ತಲಿನ ಪರಿಸರಕ್ಕೆ ಹೊಂದಿಕೊಳ್ಳುವ ಬದಲಾವಣೆ
ಇರುವ ಜೀವಿಗಳು ಉಳಿಯುತ್ತವೆ. ಪರಿಸರ ಯಾವಾಗಲೂ ಬದಲಾಗುತ್ತಲೇ ಇರುತ್ತದೆ. ವಾತಾವರಣದ
ಉಷ್ಣತೆ, ಸೂರ್ಯನ ಬೆಳಕಿನ ಪ್ರಮಾಣ, ಮಳೆ, ಆಹಾರದ ಪ್ರಮಾಣ, ಬೇಟೆಗಾರ ಪ್ರಾಣಿಗಳ
ಸಂಖ್ಯೆ,, ಇವೆಲ್ಲವೂ ಬದಲಾಗುತ್ತಲೇ ಇರುತ್ತವೆ. ಈ ಬದಲಾವಣೆಗಳಿಗೆ ಯಾವ ಜೀವಿಗಳು
ಉತ್ತಮವಾಗಿ ಹೊಂದಿಕೊಳ್ಳುತ್ತವೋ, ಅವು ಬದುಕಿ ತಮ್ಮ ಜೀನ್ಸ್ ಗಳನ್ನು ಮುಂದಿನ
ಪೀಳಿಗೆಗೆ ದಾಟಿಸುತ್ತವೆ (ಅಂದರೆ ವಂಶಾಭಿವ್ರುಧ್ಧಿ ಮಾಡುತ್ತವೆ). ಉಳಿದ ಜೀವಿಗಳು
ನಾಶವಾಗುತ್ತವೆ.

ನಮ್ಮ ಪತಂಗದ ಉದಾಹರಣೆಗೆ ಬಂದರೆ, ಪರಿಸರ ಮಾಲಿನ್ಯ ಇಲ್ಲದ ದಿನಗಳಲ್ಲಿ
ಮರದ ತೊಗಟೆಗಳು ಸಾಕಷ್ಟು ಬಿಳಿಯಾಗಿಯೇ ಇದ್ದಿದ್ದರಿಂದ ಬಿಳಿ ಪತಂಗಗಳು ಬೇಟೆಗಾರ
ಪಕ್ಷಿಗಳ ಕಣ್ಣಿಗೆ ಬೀಳದೇ ಬದುಕಿ ಉಳಿದವು. ಕಪ್ಪು ಪತಂಗಗಳು ಕೆಲವು ಮಾತ್ರ ಉಳಿದವು.
Industrial revolution ಆದ ನಂತರ ಮಾಲಿನ್ಯ ಹೆಚ್ಚಿ ಮರದ ತೊಗಟೆಗಳು ಕಪ್ಪಾದವು
(ಬದಲಾದ ಪರಿಸರ) ಆಗ ಆ ಪರಿಸರಕ್ಕೆ ಕಪ್ಪು ಪತಂಗಗಳು ಹೆಚ್ಚು ಹೊಂದಿಕೆ ಹೊಂದಿದ್ದವು.
ಹಾಗಾಗಿ ಅವುಗಳ ಸಂಖ್ಯೆ ಹೆಚ್ಚಾಗಿ ಬಿಳಿ ಪತಂಗಗಳ ಸಂಖ್ಯೆ ಇಳಿಯಿತು. ಇತ್ತೀಚಿನ
ವರ್ಷಗಳಲ್ಲಿ ಕೈಗಾರಿಕಾ ಮಾಲಿನ್ಯ ನಿಯಂತ್ರಣಕ್ಕೆ ಬಂದಿದ್ದರಿಂದ ಮರಗಳು ಮತ್ತೆ
ಬೆಳ್ಳಗಾಗಿ ಬಿಳಿ ಪತಂಗಗಳ ಸಂಖ್ಯೆ ಮತ್ತೆ ಏರಿದೆ.

 

ವಿಕಾಸವಾದದ ಎಲ್ಲ ಪ್ರಮುಖ ಆಯಾಮಗಳನ್ನೂ ಈ ಮೂರು concept ಗಳಿಂದ ವಿವರಿಸಬಹುದು.

 

ವಿಕಾಸವಾದ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಳ್ಳಲು ಒಂದು ಸಂಪೂರ್ಣ ಕಾಲ್ಪನಿಕ ಉದಾಹರಣೆ ತೆಗೆದುಕೊಳ್ಳೋಣ.
ಈಗಿನ ಕಾರುಗಳು ಜೀವಿಗಲಾಗಿದ್ದವು ಎಂದುಕೊಳ್ಳೋಣ!! ಪರಸ್ಪರ ಸೇರಿ ಮರಿ ಹಾಕುತ್ತಿದ್ದವು ಎಂದುಕೊಳ್ಳಿ.
೧. ಮೇಲೆ ವಿವರಿಸಿದಂತೆ ಕೆಲವು ಕಪ್ಪು ಕಾರುಗಳು, ಬಿಳಿ ಕಾರುಗಳು, ಮೈಲೇಜ್ ಹಚ್ಚು ಕೊಡುವ ಕಾರುಗಳು, ಕಮ್ಮಿ ಕೊಡುವವು ಇತ್ಯಾದಿ ವಿವಿಧತೆಯ ಕಾರುಗಳು ಪ್ರತೀ ಪೀಳಿಗೆಯಲ್ಲು  ಹುಟ್ಟುತ್ತವೆ ಅಲ್ಲವೇ? ಕೆಲವು ಅಂಗವಿಕಲ ಕಾರುಗಳು ೩ ಚಕ್ರಗಳೊಂದಿಗೆ ಹುಟ್ಟಿದವು ಎಂದುಕೊಳ್ಳಿ (೪ರ ಬದಲಿಗೆ)
೨. ಈಗ ಜಗತ್ತಿನಲ್ಲಿ ಪೆಟ್ರೋಲ್ ಮುಗಿದು ಹೋಗಲು ಸನಿಹವಿದೆ ಅಂದುಕೊಳ್ಳೋಣ. ಇದು ಪರಿಸರದಲ್ಲಿನ ಬದಲಾವಣೆಗೆ ಉದಾಹರಣೆ. ಈಗ ಇರುವ ಪೆಟ್ರೋಲ್ ಗಾಗಿ ಕಾರುಗಳು ಸ್ಪರ್ಧಿಸಬೇಕಾಗುತ್ತದೆ.
೩. ಚಕ್ರಗಳು ಕಮ್ಮಿ ಇದ್ದಷ್ಟು ಪೆಟ್ರೋಲ್ ಕಮ್ಮಿ ಸಾಕಾಗುವುದರಿಂದ ೩ ಚಕ್ರದ ಕಾರುಗಳು ಹೆಚ್ಚು ಚೆನ್ನಾಗಿ ಬದುಕಿ ಹೆಚ್ಚು ಹೆಚ್ಚು ಮರಿಗಳನ್ನು ಹಾಕುತ್ತವೆ. ೪ ಚಕ್ರದ ಕಾರುಗಳು ಬದುಕಲು ಕಷ್ಟ ಪಡಬೇಕಾಗಿರುವುದರಿಂದ ಅವುಗಳ ಸಂಖ್ಯೆ ಇಳಿಯುತ್ತಾ ಹೋಗುತ್ತದೆ. ಹೀಗೆ ಕೆಲವೇ ತಲೆಮಾರುಗಳಲ್ಲಿ ಕಾರುಗಳೆಲ್ಲ ಅಳಿದು ರಿಕ್ಷಾಗಳು ಬಂದುಬಿಡುತ್ತವೆ.

ಮೇಲಿನ ಉದಾಹರಣೆ ಸ್ವಲ್ಪ ಮಟ್ಟಿಗೆ ಹಾಸ್ಯಾಸ್ಪದ ವಾಗಿದ್ದರೂ, ಹೇಗೆ ಕಾರುಗಳೆಲ್ಲ ಅಳಿದು ರಿಕ್ಷಾಗಳು ಆಗಲು ಸಾಧ್ಯ ಎಂದು ತೋರಿಸುತ್ತದೆ ಅಲ್ಲವೇ? ಅದೇ ರೀತಿ ವಿಕಾಸವಾದದ ಪ್ರಕಾರ ಹಲವು ಜೀವಿಗಳು ಅಳಿದು ಈಗ ನಾವು ಕಾಣುವ ಜೀವಿಗಳು ಉಂಟಾಗಿವೆ. ಇದೇ ರೀತಿ ಸರಳ ಏಕಕೋಶ ಜೀವಿಗಳಿಂದ ನೋಡಬಲ್ಲ, ಯೋಚಿಸಬಲ್ಲ, ಹಳೆಯ ಘಟನೆಗಳನ್ನು ನೆನಪಿಟ್ಟುಕೊಳ್ಳಬಲ್ಲ ಮನುಷ್ಯನಂತಹ ಜೀವಿಗಳು ಹೇಗೆ ಉಗಮವಾದರು ಎಂದು ಕೂಡ ವಿವರಿಸಬಹುದು.

ನಿಮ್ಮ ಅನುಮಾನಗಳನ್ನು ಪ್ರತಿಕ್ರಿಯೆಗಳಲ್ಲಿ ವ್ಯಕ್ತಪಡಿಸಿದರೆ ಅವನ್ನು ಪರಿಹರಿಸಲು ನನ್ನ ಪ್ರಯತ್ನವನ್ನು ಮಾಡುತ್ತೇನೆ.