ಡಾ. ಎ. ಎನ್. ಮೂರ್ತಿರಾಯರು- ದೇವರ ಬಗ್ಗೆ:

ಡಾ. ಎ. ಎನ್. ಮೂರ್ತಿರಾಯರು- ದೇವರ ಬಗ್ಗೆ:

ಬರಹ

ಎನ್. ಮೂರ್ತಿರಾಯರು- ದೇವರ ಬಗ್ಗೆ: 103 ವರ್ಷಗಳ ಸಂಮ್ರುಧ್ಧ ಜೀವನದಲ್ಲಿ ಅವರ ನಿಲವುಗಳು ಅತಿ ಸ್ಪಸ್ಟವಾದವುಗಳು. ಅವರ ಸಮವಯಸ್ಕರಿಗೆ ಇವು ಪ್ರಶ್ನೆಗಳಲ್ಲದೆ ಮತ್ತೇನು ? ಮೂರ್ತಿರಾಯರು ನಂಬಿದ್ದು 'ಮಾನವೀಯತೆಯನ್ನು. ಅವರು ಕೊಟ್ಟ ಸಾಹಿತ್ಯ ಹಾಗೂ ಚಿಂತನೆಗಳು ಅನನ್ಯ ! 'ಶತಮಾನದ ಅಸಾಧಾರಣ ವ್ಯಕ್ತಿಗಳ' ಪಂಕ್ತಿಗೆ ಅವರು ಸೇರುತ್ತಾರೆ ! 'ದೇವರನ್ನು ನಂಬುವುದಿಲ್ಲ' ಎಂದು ನಾನೇನೂ ಪಣ ತೊಟ್ಟಿಲ್ಲ. ನನ್ನ ಅಪನಂಬಿಕೆ ಪ್ರಯತ್ನ ಪೂರ್ವಕವಾಗಿ ಬರಮಾಡಿಕೊಂಡದ್ದಲ್ಲ. ನಂಬಿಕೆ ಬರಲೊಲ್ಲದು -ಅಷ್ಟೆ.!' 'ಇತರರಿಗೆ ದೈವಭಕ್ತಿಯಿಂದ ಶಾಂತಿ ಬರುವುದಾದರೆ ಬರಲಿ; ಅದರಿಂದ ಸಜ್ಜನಿಕೆಗೆ ಉತ್ತೇಜನ ದೊರಕುವುದಾದರೆ ಅವರ ದೈವ ಭಕ್ತಿ ಸಂತತವಾಗಿ ಇರಲಿ' ಎಂದು ಹಾರೈಸಲೂ ನಾನೂ ಸಿಧ್ಧ. ನನಗೆ ನಂಬಿಕೆ ಬರಲೊಲ್ಲದು- ಅದು ನನ್ನ ತಪ್ಪಲ್ಲ.! 'ನನಗೆ ಇದರಲ್ಲಿ ನಂಬಿಕೆ ಇಲ್ಲ, ಅದರಲ್ಲಿ ನಂಬಿಕೆ ಇಲ್ಲ, ಮತ್ತೊಂದರಲ್ಲಿ ನಂಬಿಕೆ ಇಲ್ಲ'- 'ಇಲ್ಲ'ಗಳ ಪಟ್ಟಿ ದೊಡ್ಡದಾಯಿತು. ನನ್ನ ಬದುಕು 'ನ' ಕಾರದ (ಇಲ್ಲಗಳ) ಭಜನೆಯೋ ಅಥವಾ ನನ್ನ ನಂಬಿಕೆಗೆ ಪಾತ್ರವಾಗಿರುವುದೂ ಏನಾದರೂ ಉಂಟೋ ? ಉಂಟು. ಇಹಜೀವನದಲ್ಲಿ ನಂಬಿಕೆಯುಂಟು; ಇಲ್ಲಿ ಸಲ್ಲುವವರು ಅಲ್ಲೂ ಸಲ್ಲುತ್ತಾರೆ ಎಂಬ ಮಾತಿನಲ್ಲಿ ನಂಬಿಕೆಯುಂಟು. ಲೋಕದಲ್ಲಿ ಸಂಕಟ ಕಡಿಮೆಯಾಗುವಂತೆ , ಸಹಮಾನವರ ಬದುಕು ಸುಖಸಂಮ್ರುಧ್ಧವಾಗುವಂತೆ ಕೈಲಾದ್ದನ್ನು ಮಾಡುವುದು ಕರ್ತವ್ಯ ಎಂಬ ನಂಬಿಕೆ ಯುಂಟು.

ಚಿತ್ರಸೌಜನ್ಯ’   -’ಕಾಮತ್ಸ್ ಪಾಟ್ ಪೌರ್ರಿ’

ವೆಂ.