ಡಾ| ಕೆ.ಎಸ್. ಆಚಾರ್ಯರ ಮಹಾಭಾರತದ ಭೀಷ್ಮ. ೨

ಡಾ| ಕೆ.ಎಸ್. ಆಚಾರ್ಯರ ಮಹಾಭಾರತದ ಭೀಷ್ಮ. ೨

ಬರಹ

ಬೀಷ್ಮ ಎಡವಿದ್ದು ಏಲ್ಲೆಲ್ಲಿ? ಅಂಧನೃಪನನ್ನು ಹಾದಿಗೆ ತರಲು ಅಸಮರ್ಥನಾದುದು. ಅರಗಿನ ಮನೆಯ ಸುಳಿವನ್ನು ಅರಿಯದೆ ಹೋದುದು. ಕೌರವರು ದ್ರೌಪದಿಯ ಸೀರೆಯನ್ನು ಸೆಳೆವಾಗ ಅವಳ ಮಾನ ರಕ್ಷಿಸಲು ಅಸಮರ್ಥನಾದುದು ಮಾತ್ರವಲ್ಲ ಹಾಗೆ ನಡೆಯುವ ಸಮಯದಲ್ಲಿ ಅಲ್ಲೆ ಇದ್ದುಕೊಂಡು ಮೌನವಾಗಿದ್ದದ್ದು.
ಇದೆಲ್ಲಾ ಆದ ನಂತರ ಕೊನೆಗೆ ಭೀಷ್ಮ ತಾನು ಮಾಡಿದ ತಪ್ಪಿಗೆ ತಾನೇ ಪ್ರಾಯಶ್ಚಿತ ಮಾಡಿಕೊಳ್ಳುವುದು. ಸಾಯುವ ಸಮಯದಲ್ಲಿ ತಾನು ಮಹಾಪಾತಕಿ ಎಂದು ಒಪ್ಪಿಕೊಳ್ಳುವುದು ಅವರ ದೊಡ್ಡತನವನ್ನು ಸೂಚಿಸುತ್ತದೆ. ಅಂದಿನ ಭೀಷ್ಮನಿಗೂ ಇಂದಿನ ರಾಜಕಾರಿಣಿಗಳಿಗೂ ಒಳ್ಳೆಯ ಹೋಲಿಕೆಯನ್ನು ಮಾಡಿದ್ದು ತುಂಬಾ ಸೊಗಸಾಗಿದೆ. ಹಸ್ತಿನಾವತಿಯ ಸಿಂಹಾಸನದ ರಕ್ಷಕನಾಗಿ ಆಗುವ ಅನಾಹುತಗಳನ್ನು ತಪ್ಪಿಸಲು ಸಾಧ್ಯವಿದ್ದರೂ ತನ್ನ ಯಾವ ಸಲಹೆಗಳನ್ನು ಪಾಲಿಸದೆ ತನ್ನನ್ನು ಕಡೆಗಣಿಸಿದ ಮೇಲೂ ಈಗಿನ ರಾಜಕೀಯದಲ್ಲಿರುವ ಅತೀ ಉನ್ನತಸ್ಥಾನದಂತೆ ರಬ್ಬರ್ ಸ್ಟಾಂಪ್ ಆಗಿ ಅಲ್ಲಿಯೇ ಉಳಿದದ್ದು ಯಾಕೆ? ರಾಜ್ಯದಲ್ಲಿ ಪಾಂಡವರಿಗೂ ಪಾಲು ಕೊಡುವ ಸಲಹೆ ಕೊಟ್ಟು ಗಾಂಧೀಜಿಯವರು ಮಾಡಿದ "ಎರಡು ರಾಷ್ಟ್ರ " ನೀತಿಯನ್ನು ಅಂದೂ ಭೀಷ್ಮನೂ ಮಾಡಿದನೆ? ಎಂದು ಆಚಾರ್ಯರು ನಿರೂಪಿಸಿದ್ದಾರೆ. ಇದೇ ರೀತಿ ಭೀಷ್ಮನ ಪಾತ್ರದ ಪರಿಚಯ ಬಹಳ ಸೊಗಸಾಗಿದೆ. ಹಲವಾರು ಉದಾಹರಣೆಗಳನ್ನು ಕೊಟ್ಟು ಇಂದಿನ ರಾಜಕಾರಣದಲ್ಲಿರುವ ಮಂದಿಗಳಿಗೆ ಅಂದಿನವರನ್ನು ಹೋಲಿಸುವುದು- ಉದಾ- ಶಿಶುಪಾಲ-ಜಿನ್ನಾ. ಇತ್ಯಾದಿ....... ಇತ್ಯಾದಿ

ವಿವರಿಸಲು ತುಂಬಾ ಇದೆ. ಸ್ವತಹ ಓದಿದರೆ ಅದರ ಮಜಾವೇ ಬೇರೆ. ಇಂತಹ ಹಲವಾರು ಪಾತ್ರಗಳ ಪರಿಚಯ ಮಾಡಿದ್ದಾರೆ. ಸಾಧ್ಯವಾದರೆ ಒಂದೊಂದೇ ಪಾತ್ರಗಳ ಪರಿಚಯವನ್ನು ಮಾಡಲು ಪ್ರಯತ್ನಿಸುತ್ತೇನೆ.

ಬಿ.ವೆಂಕಟ್ರಾಯ