ಡಾ. 'ರಾಜ್' ಅಮರರಾದರು !
ಬರಹ
ಡಾ. 'ರಾಜ್' ಅಮರರಾದರು ! ಮುಂಬೈ, ಘಾಟ್ಕೋಪರ್.
ಕನ್ನಡದ 'ಮೇರು ನಟಸಾರ್ವಭೌಮ' 'ಡಾ.ರಾಜ್ ಕುಮಾರ್' ಅವರ ಪಾರ್ಥಿವ ದೇಹವನ್ನು ಇಂದು,ಗುರುವಾರ, ಏಪ್ರಿಲ್,13, 2006, ರ ಸಾಯಂಕಾಲ ವೇಳೆ, 6 ರ ಒಳಗೇ,ನೆರವೇರಿದ 'ಅಂತಿಮ ಸಂಸ್ಕಾರದ ವಿಧಿ ಗಳನ್ನು' ನಾವು ಈ-ಟೀ.ವಿ.ಯಲ್ಲಿ ನೋಡಿ 'ಮೂಕವಿಸ್ಮಿತರಾದೆವು' ! ಅದೊಂದು 'ಹೃದಯ ವಿದ್ರಾವಕ'ವಾದ ದೃಶ್ಯ ! ಸರಕಾರಿ ವಿಧಿ ವಿಧಾನಗಳಿಂದ (ಅವರ ಮನೆಯ ಸಂಪ್ರದಾಯದಂತೆ),ಅವರ ಮೆಚ್ಚಿನ ಕಂಠೀರವ ಸ್ಟುಡಿಯೊ, ಬಳಿಯ ಮೈದಾನದಲ್ಲಿ ಸಾಯಂಕಾಲ 6 ಘಂಟೆಗೇ ಪ್ರಚಂಡ ಜನಸ್ಥೋಮದ ಸಮ್ಮುಖದಲ್ಲಿ,ಅವರ 'ಪಾರ್ಥಿವ ಶರೀರ'ವನ್ನು ಮಣ್ಣು ಮಾಡಲಾಯಿತು.ಕನ್ನಡದ ಕಣ್ಮಣಿಯಾಗಿದ್ದ 'ರಾಜ್' ಅವರು, 'ಇಂದು ನಮ್ಮೊಡನೆ ಇಲ್ಲ'. ಆದರೆ, ಆದರ್ಶ, ಸರಳತೆ, ಕನ್ನಡದಮೇಲಿನ ಅಪಾರ ಪ್ರೇಮಗಳಿಂದಾಗಿ ಅವರು ಕನ್ನಡಿಗರ,('ಅಭಿಮಾನ ದೇವತೆಗಳ') ಮನಸ್ಸಿನಲ್ಲಿ, ಎಂದೆಂದಿಗೂ ಅಮರರಾಗಿರುತ್ತಾರೆ !
ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ.
ವೆಂ.ಮತ್ತು ಪರಿವಾರ.