ಡಿಂಪಲ್ ಬ್ಯೂಟಿಯ ರಹಸ್ಯ !

ನಗುವಾಗ ಕೆನ್ನೆ ಮೇಲೆ ಕಾಣಿಸಿಕೊಳ್ಳುವ ಡಿಂಪಲ್‌ಗಳು ತುಂಬಾ ಸುಂದರವಾಗಿ ಕಾಣುತ್ತವೆ. ಅವು ಮುಖಕ್ಕೆ ಒಂದು ರೀತಿಯ ವಿಶೇಷ ಸೊಬಗನ್ನು ನೀಡುತ್ತದೆ. ಸಾಮಾನ್ಯವಾಗಿ ಕೆನ್ನೆಯ ಮೇಲೆ ಡಿಂಪಲ್ ಹೊಂದಿರುವವರು ನಕ್ಕಾಗ ಬಹಳ ಸುಂದರವಾಗಿ ಕಾಣಿಸುತ್ತಾರೆ. ಹೀಗಾಗಿಯೇ ಅನೇಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಡಿಂಪಲ್ ಬೀಳುವಂತೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಕೆನ್ನೆ ಮೇಲೆ ಗುಳಿ ಬೀಳುವವರು ಬಹಳ ಅದೃಷ್ಟವಂತರು ಎಂದು ಹೇಳುತ್ತಾರೆ. ಆದರೆ ಈ ರೀತಿ ಡಿಂಪಲ್ ಯಾಕೆ ಬೀಳುತ್ತೆ ಅಂತ ನಿಮಗೆ ಗೊತ್ತಿದ್ಯಾ, ಇದರ ಹಿಂದಿದೆ ಇಂಟ್ರೆಸ್ಟಿಂಗ್ ವಿಚಾರ. ಬಾಲಿವುಡ್ ನಟಿ ಪ್ರೀತಿ ಝಿಂಟಾ, ಸ್ಯಾಂಡಲ್ವುಡ್ ಡಿಂಪಲ್ ಕ್ಲೀನ್ ಎಂದೇ ಕರೆಯಲಾಗುವ ರಚಿತಾ ರಾಮ್ ಹೀಗೆ ಅನೇಕ ನಟ, ನಟಿಯರು ನಗುವಾಗ ಡಿಂಪಲ್ ಬೀಳುವುದನ್ನು ನೀವು ನೋಡಿರಬಹುದು. ಈ ರೀತಿ ಕೆನ್ನೆ ಮೇಲೆ ಗುಳಿ, ಎಲ್ಲರಿಗೂ ಬೀಳುವುದಿಲ್ಲ. ಆದರೆ ಈ ರೀತಿ ಡಿಂಪಲ್ ಬೀಳುವವರು ಬಹಳ ಸುಂದರವಾಗಿ ಕಾಣಿಸುತ್ತಾರೆ ಎಂದು ಎಲ್ಲರು ಹೇಳುತ್ತಾರೆ. ಇದು ಒಂದು ರೀತಿಯ ಸೌಂದರ್ಯದ ಸಂಕೇತವಿದ್ದಂತೆ. ಇನ್ನು ಕೆಲವರು ಕೆನ್ನೆ ಮೇಲೆ ಗುಳಿ ಬೀಳುವವರು ಬಹಳ ಅದೃಷ್ಟವಂತರು ಎಂದು ಹೇಳುತ್ತಾರೆ. ಆದರೆ ಈ ರೀತಿ ಡಿಂಪಲ್ ಯಾಕೆ ಬೀಳುತ್ತದೆ ಎಂದು ನೋಡೊಣ.
ಡಿಂಪಲ್ ಕಂಡು ಬರಲು ಇಲ್ಲಿದೆ ಕಾರಣ: ನಮ್ಮ ಮುಖದಲ್ಲಿ ಕಂಡು ಬರುವ ಪ್ರಮುಖ ಸ್ನಾಯುಗಳಲ್ಲಿ ಜೈಗೋಮ್ಯಾಟಿಕಸ್ ಎಂಬ ಸ್ನಾಯು ಕೂಡ ಒಂದು. ಈ ಸ್ನಾಯು ನಗುತ್ತಿರುವಾಗ ಕೆನ್ನೆಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ, ಚರ್ಮವನ್ನು ಒಳಮುಖವಾಗಿ ಎಳೆಯುತ್ತದೆ. ಕೆಲವು ಸಂದರ್ಭಗಳಲ್ಲಿ, ಈ ಸ್ನಾಯು ಎರಡು ಭಾಗಗಳಾಗಿ ವಿಭಜನೆಯಾಗಿ, ಮಧ್ಯದಲ್ಲಿ ಅಂತರವನ್ನು ಸೃಷ್ಟಿಸುತ್ತದೆ. ಇದು ಕೆನ್ನೆಗಳ ಮೇಲೆ ಡಿಂಪಲ್ ಆಗಿ ಕಾಣಿಸಿಕೊಳ್ಳುತ್ತದೆ. ಇದು ಡಿಂಪಲ್ ರಚನೆಗೆ ನಿಜವಾದ ಕಾರಣವಾಗಿದೆ. ಇದು ಸೌಂದರ್ಯವನ್ನು ಪ್ರತಿಬಿಂಬಿಸುವುದಿಲ್ಲ. ಬದಲಾಗಿ ಇದೊಂದು ಸ್ನಾಯು ಮತ್ತು ಮೂಳೆಗಳಿಂದ ಉಂಟಾಗುವ ಸಮಸ್ಯೆ ಆಗಿದೆ. ಇದು ಮುಖದಲ್ಲಿ ಮೂಳೆಗಳು ಬೆಸೆಯದೇ ಇದ್ದರೆ ಉಂಟಾಗುವಂತಹ ಸಮಸ್ಯೆಯಾಗಿದೆ. ಇನ್ನು ಭ್ರೂಣದ ಬೆಳವಣಿಗೆಯ ಸಮಯದಲ್ಲಿ, ದವಡೆಯ ಎರಡು ಭಾಗಗಳು ಸಂಪೂರ್ಣವಾಗಿ ಬೆಸೆಯದಿದ್ದರೆ, ಸಣ್ಣ ಅಂತರ ಮೂಡುತ್ತದೆ. ಈ ಅಂತರದ ಮೇಲಿರುವ ಚರ್ಮವು ಒಂದು ಪ್ರತ್ಯೇಕವಾದ ಸೀಳನ್ನು ರೂಪಿಸುತ್ತದೆ. ಇನ್ನು ಇದು ನಿಮ್ಮ ಮನೆಯ ಹಿರಿಯರಿಂದಲೂ ಬಳುವಳಿಯಾಗಿ ಬಂದಿರಬಹುದು.
ಆರೋಗ್ಯದ ಮೇಲೆ ಬೀರುವ ಪರಿಣಾಮ: ಕೆನ್ನೆಯ ಮೇಲೆ ಕಂಡು ಬರುವ ಗುಳಿಗಳು ಸಾಮಾನ್ಯವಾಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ವೈದ್ಯರ ಪ್ರಕಾರ, ಅವು ಸ್ನಾಯು ವ್ಯತ್ಯಾಸದಿಂದ ಕಂಡು ಬರುವಂತಹ ಸಮಸ್ಯೆಯಾದರೂ ಕೂಡ ಅವು ದೇಹಕ್ಕೆ ಯಾವುದೇ ರೀತಿಯಲ್ಲಿಯೂ ಹಾನಿ ಮಾಡುವುದಿಲ್ಲ. ಕೆಲವರಲ್ಲಿ ಇದು ಚಿಕ್ಕ ವಯಸ್ಸಿನಿಂದಲೇ ಸ್ಪಷ್ಟವಾಗಿ ಗೋಚರಿಸಬಹುದು. ಇನ್ನು ಕೆಲವರಲ್ಲಿ ಅಸ್ಪಷ್ಟವಾಗಿ ಕಾಣಿಸಬಹುದು. ಈ ರೀತಿ ಕಂಡು ಬರುವ ಡಿಂಪಲ್‌ಗಳು ದೇಹಕ್ಕೆ ಹಾನಿ ಮಾಡುವುದಿಲ್ಲ. ಅವು ಆನುವಂಶಿಕವಾಗಿ ಬಂದಿರಲಿ ಅಥವಾ ಸ್ನಾಯುಗಳ ಆಕಾರದಲ್ಲಿನ ವ್ಯತ್ಯಾಸಗಳಿಂದಾಗಿರಲಿ, ಅವು ಯಾವುದೇ ರೀತಿಯಲ್ಲಿ ದೇಹಕ್ಕೆ ಹಾನಿಕಾರಕವಲ್ಲ.
(ಆಧಾರ)
ಚಿತ್ರ ಕೃಪೆ: ಇಂಟರ್ನೆಟ್ ತಾಣ