ಡಿಜಿಟಲ್ ಲೈಬ್ರರಿ ಆಫ಼್ ಇಂಡಿಯ (DLI) ಪುಸ್ತಕ ನಿಧಿ

ಡಿಜಿಟಲ್ ಲೈಬ್ರರಿ ಆಫ಼್ ಇಂಡಿಯ (DLI) ಪುಸ್ತಕ ನಿಧಿ

ಡಿಜಿಟಲ್ ಲೈಬ್ರರಿ ಆಫ಼್ ಇಂಡಿಯ (DLI) ಪುಸ್ತಕ ನಿಧಿ

ಡಿಜಿಟಲ್ ಲೈಬ್ರರಿ ಆಫ಼್ ಇಂಡಿಯ (DLI) ಪುಸ್ತಕ ನಿಧಿಯಿಂದ ಪುಸ್ತಕಗಳನ್ನು ಇಳಿಸಿಕೊಳ್ಳುವುದರ ಬಗ್ಗೆ ಶ್ರೀಕಾಂತ್ ಮಿಶ್ರಿಕೋಟಿ, ಶ್ರೀನಿವಾಸ ಮೂರ್ತಿ, ರೋಹಿತ್, ಸುನಿಲ್ ಜಯಪ್ರಕಾಶ್ ಮೊದಲಾದವರು ಹಲವಾರು ಬರಹಗಳನ್ನು ಸಂಪದದಲ್ಲಿ ಬರೆದಿರುವುದನ್ನು ಓದಿದ್ದೆನಾದರೂ, ಅದೇಕೋ ನನಗೆ ಮಾತ್ರ DLI ನಿಂದ ಹಾಗೆ ಮಾಡಲಾಗಿರಲಿಲ್ಲ. ಬಹುಶಃ ಸೀರಿಯಸ್ಸಾಗಿ ಪ್ರಯತ್ನಿಸಿರಲಿಲ್ಲವೇನೋ! ಅಥವಾ ಶನಿವಾರ / ಭಾನುವರಗಳಲ್ಲಿ ಪ್ರಯತ್ನಿಸಿದ್ದೆನೋ ಏನೋ ನೆನಪಿಲ್ಲ. ಯಾವಾಗಲೂ "The webpage cannot be displayed" ಎನ್ನುವ ಮೆಸೇಜ್ ಬರುತ್ತಿತ್ತು. ಬಹುಶಃ ನಾನು ಮಡಗಾಸ್ಕರ್ ನಲ್ಲಿ ಕುಳಿತು DLI ವೆಬ್ ತಾಣವನ್ನು ತೆರೆಯಲು ಪ್ರಯತ್ನಿಸುತ್ತಿರುವುದರಿಂದ ಹೀಗಾಗುತ್ತಿದೆಯೇನೋ ಎಂದುಕೊಂಡಿದ್ದೆ.
ಆದರೆ ಮಿಶ್ರಿಕೋಟಿಯವರು ಪುಸ್ತಕಗಳನ್ನು ಒಂದಾದ ಮೇಲೆ ಒಂದರಂತೆ ಇಳಿಸಿಕೊಂಡು ಅದರ ಬಗ್ಗೆ ಬರೆಯುತ್ತಿದ್ದುದನ್ನು ನೋಡಿದರೆ ಇದೇನು ಇವರು ಬಾಳೆಹಣ್ಣಿನ ಸಿಪ್ಪೆ ಸುಲಿದಷ್ಟು ಸುಲಭವಾಗಿ ಮಾಡುತ್ತಾರಲ್ಲಾ! ಎನಿಸಿತ್ತು. ಕಳೆದ ಶನಿವಾರ, ಏನಾದರೂ ಮಾಡಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೇಬೇಕೆಂಬ ಛಲದಿಂದ ಪ್ರಾರಂಭಿಸಿದೆ.
• ಮೊದಲು ಸಂಪದದಲ್ಲಿ DLI ಬಗೆಗಿನ ಎಲ್ಲಾ ಬರಹಗಳನ್ನು ಕಲೆ ಹಾಕಿದೆ; ಎಲ್ಲವನ್ನು ಕೂಲಂಕಶವಾಗಿ ಓದಿದೆ. ಅವುಗಳಲ್ಲಿ ಶ್ರೀನಿವಾಸ ಮೂರ್ತಿಯವರು ಕೊಟ್ಟ ಈ ಕೆಳಗಿನ ಕೊಂಡಿ ವಿಂಡೋಸ್ ತಂತ್ರಾಂಶ ಉಪಯೋಗಿಸುವ ನನ್ನ ಕಂಪ್ಯೂಟರಿಗೆ ಸರಿಯಾಗಿತ್ತೆಂದು ತಿಳಿದುಕೊಂಡೆ.
http://sampada.net/blog/%E0%B2%A1%E0%B2%BF%E0%B2%9C%E0%B2%BF%E0%B2%9F%E0%B2%B2%E0%B3%8D-%E0%B2%B2%E0%B3%88%E0%B2%AC%E0%B3%8D%E0%B2%B0%E0%B2%B0%E0%B2%BF-%E0%B2%86%E0%B2%AB%E0%B3%8D-%E0%B2%87%E0%B2%82%E0%B2%A1%E0%B2%BF%E0%B2%AF%E0%B2%BE%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%95%E0%B3%86%E0%B2%B2%E0%B2%B5%E0%B3%81-%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%AA%E0%B3%81%E0%B2%B8%E0%B3%8D%E0%B2%A4%E0%B2%95%E0%B2%97%E0%B2%B3%E0%B3%81/13-1-2014/42491
• ಅಂತೆಯೇ ಮೊದಲಿಗೆ ಅವರು ತಿಳಿಸಿದ dli-downloader ಅನ್ನು (<https://code.google.com/p/dli-downloader/ >) ಈ ಕೊಂಡಿಯಿಂದ  ಇಳಿಸಿಕೊಂಡೆ.
• ಅದು ಈ ಕೆಳಗಿನ ಫ಼ೈಲ್ ಆಗಿತ್ತು - dli-downloader-5.4-jar-with-dependencies ಮತ್ತು ಅದೊಂದು Executable Jar File ಆಗಿತ್ತು. ಅದನ್ನು right click ಮಾಡಿ open with ಎಂದಾಗ ಈ ಕೆಳಗಿನ ತೆರೆಯುವ option ಗಳು ಕಂಡು ಬಂದವು - 1. Java (TM) Platform SE Binary, 2. WinRar archiver, 3. WinZip. ನಿಮ್ಮ ಕಂಪ್ಯೂಟರುಗಳಲ್ಲಿ Jar / Rar File ಗಳನ್ನು ತೆರೆಯುವ ಯಾವುದೇ ತಂತ್ರಾಂಶವಿದ್ದರೂ ಅದು ಅಲ್ಲಿ option ಆಗಿ ಕಂಡು ಬರುವುದು.
• ಮೊದಲು ನಾನು dli-downloader-5.4-jar-with-dependencies ಅನ್ನು WinRar archiver ಮೂಲಕ ತೆರೆದೆ. ಅದು ತೆರೆಯಿತು ಕೂಡ. ಆದರೆ ಅದರೊಳಗೆ ಎಲ್ಲೂ Set up / Application File ಕಾಣಿಸಲಿಲ್ಲ.
• ಮತ್ತೆ dli-downloader-5.4-jar-with-dependencies ಅನ್ನು right click ಮಾಡಿ open with  - Java(TM) Platform SE binary ಎಂದಾಗ ನಿಮಿಷದೊಳಗೆ  dli-downloader install ಆಗಿ ಅದರ ಕಿಟಕಿಯೊಂದು ತೆರೆದುಕೊಂಡಿತು.
• ಅದರ download ಬಟನ್ ಕೆಳಗೆ Enter Barcode/Directory Path/File path.... ಎನ್ನುವ ಜಾಗದಲ್ಲಿ ಶ್ರೀನಿವಾಸ ಮೂರ್ತಿ ಮತ್ತು ಶ್ರೀಕಾಂತ್ ಮಿಶ್ರಿಕೋಟಿಯವರು ತಮ್ಮ ಬರಹಗಳಲ್ಲಿ ಕೊಟ್ಟಿದ್ದ Barcode ಸಂಖ್ಯೆಗಳನ್ನಷ್ಟೆ ತುಂಬಿಸಿದೆ. ಇಲ್ಲಿ copy and paste ನ ಅವಕಾಶವಿಲ್ಲದಿರುವುದರಿಂದ Barcode ಸಂಖ್ಯೆಗಳನ್ನು ಜಾಗರೂಕತೆಯಿಂದ ಸರಿಯಾಗಿ ತುಂಬಿಸಬೇಕು. ನಂತರ ಕಂಪ್ಯೂಟರಿನ enter ಬಟನ್ ಒತ್ತುತ್ತಿದ್ದಂತೆ download ಪ್ರಾರಂಭವಾಯಿತು. ಮತ್ತು interenet speed ಗೆ ಅನುಗುಣವಾಗಿ ಯಶಸ್ವಿಯಾಗಿ download ಆಯಿತು.
ಹೀಗೆ DLI ಪುಸ್ತಕ ನಿಧಿಯಿಂದ ಪುಸ್ತಕಗಳನ್ನು ಇಳಿಸಿಕೊಳ್ಳುವುದರಲ್ಲಿ ನಾನೂ ಯಶಸ್ವಿಯಾದೆ! ಆದರೆ ಇದು ಬರೇ ಮೊದಲನೆಯ ಮೆಟ್ಟಿಲಾಗಿತ್ತು.
____________________________
ಇನ್ನು http://www.dli.gov.in/ ವೆಬ್ ತಾಣವನ್ನು ತೆರೆಯಲು ಪ್ರಯತ್ನಿಸಿದೆ. ಅದೃಷ್ಟವೆಂಬಂತೆ ಅದೂ ತೆರೆದುಕೊಂಡಿತು. ಅದರಲ್ಲಿ Languages - Kannada ಎಂಬ ಗುಂಡಿಯನ್ನು ಕ್ಲಿಕ್ಕಿಸಿದೆ - ವಾವ್! Search matched: 3341 books with 720993 pages ಎನ್ನುತ್ತಾ ಪುಸ್ತಕಗಳ ಪಟ್ಟಿ ಪ್ರತ್ಯಕ್ಷವಾಯಿತು!! (ಇದು DLI ನ ಎಲ್ಲಾ ತಾಣಗಳ ಅಂದರೆ IISc bangalore, IIIT Hyderabad ಮುಂತಾದ ಎಲ್ಲ ತಾಣಗಳಲ್ಲಿ ಲಭ್ಯವಿರುವ ಪುಸ್ತಕಗಳ ಒಟ್ಟು ಸಂಖ್ಯೆ).
ಹಿಂದೆ ಹೇಳಿದಂತೆ ಶ್ರೀನಿವಾಸ ಮೂರ್ತಿ ಮತ್ತು ಶ್ರೀಕಾಂತ್ ಮಿಶ್ರಿಕೋಟಿಯವರು ತಿಳಿಸಿದ್ದ ಹಲವು ಪುಸ್ತಕಗಳನ್ನು ಇಳಿಸಿಕೊಂಡಿದ್ದೆನಾದರೂ ಮೇಲಿನ 3341 ಪುಸ್ತಕಗಳಲ್ಲಿ ಎಲ್ಲವೂ ಲಭ್ಯವಿದೆಯೇ ಎನ್ನುವುದನ್ನು ಪರೀಕ್ಷಿಸಲು random check ಮಾಡಲು ನಿರ್ಧರಿಸಿದೆ.
ನನ್ನ ಮನಸ್ಸಿಗೆ ಹೊಳೆದ, ನಾನು ಹುಡುಕುತ್ತಿದ್ದ ಹೀಗೆ ಹಲವು ಪುಸ್ತಕಗಳನ್ನು ಪಟ್ಟಿ ಮಾಡಿಕೊಂಡು ಪ್ರಾರಂಭಿಸಿದೆ. ಅವೆಂದರೆ ೧. ಸರ್ವಜ್ಞನ ವಚನಗಳು, ೨. ತೊರವೆ ರಾಮಾಯಣ, ೩. ದುರ್ಗೇಶ ನಂದಿನಿ (ಬಂಕಿಮ ಚಂದ್ರರ ಈ ಪುಸ್ತಕವನ್ನು ಕನ್ನಡಕ್ಕೆ ಬಿಂಡಿಗನವಿಲೆ ವೆಂಕಟಾಚಾರ್ಯ ಅವರು ಅನುವಾದಿಸಿದ್ದು), ೪. ಭರತೇಶ ವೈಭವ, ೫. ಆರ್. ಕೆ ನಾರಾಯಣ್ ರ ಸ್ವಾಮಿ ಮತ್ತು ಗೆಳೆಯರು, ೬. ಕು. ವೆಂ. ಪು ರವರ ಕಾನೂರು ಸುಬ್ಬಮ್ಮ ಹೆಗ್ಗಡತಿ
ಎಲ್ಲವೂ ಸಿಕ್ಕಿದವು ಮತ್ತು ಯಶಸ್ವಿಯಾಗಿ download ಆದವು. ಅಂದರೆ ಬಹುಶಃ ಎಲ್ಲ ೩೩೪೧ ಪುಸ್ತಕಗಳೂ ಸಿಗುವ ಸಾಧ್ಯತೆ ಹೆಚ್ಚು ಅನಿಸಿತು.
_________________________________
ಇನ್ನೊಂದು ಪ್ರಯೋಗವೆಂದು ಇಂಗ್ಲಿಷ್ ಭಾಷೆಯ ಪುಸ್ತಕವನ್ನು ಹುಡುಕೋಣವೆನಿಸಿತು. ನಾನು ಬಹಳ ಹಿಂದೆ ಓದಿದ್ದ William Harrison ನ 'Burton and Speke' (ಪೂರ್ಣಚಂದ್ರ ತೇಜಸ್ವಿಯವರು ಬರೆದ ನೈಲ್ ನದಿಯ ಮೇಲಿನ ಪುಸ್ತಕ ಇದರಿಂದ ಪ್ರೇರಿತವಾದದ್ದು) ಮತ್ತು T. Lobsang Rampa ನ  'The Third Eye' (ಟಿಬೆಟ್ ನ ಲಾಮಾಗಳ ಕೌತುಕಮಯ ಜೀವನದ ಬಗೆಗಿನ ಪುಸ್ತಕ) - ಈ ೨ ಪುಸ್ತಕಗಳಿಗಾಗಿ ಹುಡುಕಿದೆ; ಸಿಕ್ಕಿತು ಮತ್ತು ಯಶಸ್ವಿಯಾಗಿ ಇಳಿಸಿಕೊಂಡೆ ಕೂಡ!
______________________________________________
ಅಂದರೆ ಈ ಮೇಲಿನ random check ಬರೇ ೨ ಭಾಷೆಗಳ ೮ ಪುಸ್ತಕಗಳಿಗೆ ಸೀಮಿತವಾದರೂ DLI ಪುಸ್ತಕ ನಿಧಿಯಲ್ಲಿ ಲಭ್ಯವಿರುವ ಎಲ್ಲಾ ಭಾಷೆಗಳ ಒಟ್ಟು ಪುಸ್ತಕಗಳ ಸಂಖ್ಯೆಗೆ ಹೋಲಿಸಿದಾಗ ಎಂಟಕ್ಕೆ ಎಂಟೂ ಯಶಸ್ವಿಯಾಯಿತೆಂದರೆ ಆ ವೆಬ್ ತಾಣದ ಎಲ್ಲ ಕೊಂಡಿಗಳೂ ಸರಿಯಾಗಿ ಕೆಲಸ ಮಾಡುತ್ತಿರುವ ಸಾಧ್ಯತೆ ಹೆಚ್ಚು ಅನಿಸುತ್ತದೆ.
ಒಟ್ಟಾಗಿ ಹೇಳಬೇಕೆಂದರೆ DLI ನ ಮೂಲ ವೆಬ್ ತಾಣವಾದ http://www.dli.gov.in/ ನಲ್ಲಿ ನೀವು ಸರಿಯಾಗಿ ಹುಡುಕಿದಲ್ಲಿ ಒಂದು ಜನ್ಮದಲ್ಲಿ ಓದಲು ಸಾಧ್ಯವಿಲ್ಲದಷ್ಟು ಪುಸ್ತಕಗಳು ಲಭ್ಯವಿದೆ! ಪುಸ್ತಕಪ್ರಿಯರಿಗೆ ಹುಚ್ಚು ಹಿಡಿಸುವಷ್ಟು!!!
- ಕೇಶವ ಮೈಸೂರು