ಡಿಸೆಂಬರ್ ೧೦- ಮಾನವ ಹಕ್ಕುಗಳ ದಿನಾಚರಣೆ
ಮಾನವ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಮಾನವ ಹಕ್ಕುಗಳ ಪರಿಧಿ ಅಥವಾ ವ್ಯಾಪ್ತಿ ವಿಶಾಲವಾದ್ದು. ನಾವುಗಳು ನಾಗರಿಕರಾಗಿ ಬದುಕಲು ಅನಿವಾರ್ಯ ಸಹ. ಬೇರೆಯವರ ಸ್ವಾತಂತ್ರ್ಯವನ್ನು ಹರಣ ಮಾಡುವ, ತುಳಿಯುವ, ಕಸಿಯುವ ಅಧಿಕಾರ ಖಂಡಿತಾ ನಮಗಿಲ್ಲ. ಇಲ್ಲಿ ಪರಸ್ಪರ ತಿಳುವಳಿಕೆ ಅಗತ್ಯ. ಪ್ರಜಾಪ್ರಭುತ್ವದ ಜೀವಂತಿಕೆಯೂ ಹೌದು.
೧೯೪೮ ರಲ್ಲಿ ವಿಶ್ವಸಂಸ್ಥೆ ಮೊದಲು ಇದನ್ನು ಅಂಗೀಕರಿಸಿತು. ಅದು ಇದೇ ಡಿಸೆಂಬರ್ ೧೦ರಂದು. ಇದರ ಈ ವರುಷದ ಧ್ಯೇಯವಾಕ್ಯ*ಉತ್ತಮವಾಗಿ ಚೇತರಿಸಿಕೊಳ್ಳಿ ; ಮಾನವ ಹಕ್ಕುಗಳ ರಕ್ಷಣೆಗಾಗಿ ನಿಂತುಕೊಳ್ಳಿ*
ನಮ್ಮ ದೇಶದಲ್ಲಿ ೧೯೯೩ರಲ್ಲಿ ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸ್ಥಾಪನೆ ಆಯಿತು. ಇಲ್ಲಿ ನಾಗರಿಕರ ರಕ್ಷಣೆ ಹಾಗೂ ಜವಾಬ್ದಾರಿಯನ್ನು*ನ್ಯಾಯಾಂಗ*ಕ್ಕೆ ಒಪ್ಪಿಸಲಾಯಿತು.ಓರ್ವ ವ್ಯಕ್ತಿಯ ಜೀವನ,ಸ್ವಾತಂತ್ರ್ಯ, ಸಮಾನತೆ, ಘನತೆಗೆ ಸಂಬಂಧಿಸಿದಂತೆ ಈ ಆಯೋಗ ಕಾರ್ಯ ನಿರ್ವಹಿಸಬೇಕು. ಜಾತಿ, ಮತ, ಧರ್ಮ, ಬಣ್ಣ, ಲಿಂಗ, ರಾಷ್ಟ್ರೀಯತೆ, ಜನಾಂಗ, ಭಾಷೆ, ಕಲಿಕೆ, ಅಭಿವ್ಯಕ್ತಿ, ಧಾರ್ಮಿಕ, ಅಸ್ಪೃಶ್ಯತೆ, ವೃತ್ತಿ ಯ ಆಯ್ಕೆ, ನಮ್ಮ ದೇಶದೊಳಗೆ ಎಲ್ಲಿ ಗೆ ಬೇಕಾದರೂ ಹೋಗುವುದು, ಆರೋಗ್ಯ, ಶೋಷಣೆ ಇಲ್ಲದಿರುವುದು, ಸಮಾನತೆ ಈ ಮುಂತಾದ ಯಾವುದೇ ತಾರತಮ್ಯದಿಂದ ಮುಕ್ತಿ ಸಿಗುವಂತೆ ಕಾರ್ಯ ನಿರ್ವಹಿಸುವುದು.
ನಮ್ಮ ಮೂಲಭೂತ ಅವಶ್ಯಕತೆಗಳಾದ ಆಹಾರ,ಬಟ್ಟೆ, ವಸತಿ,ಮೂಲಸೌಕರ್ಯಗಳನ್ನು ಒದಗಿಸುವುದು ಆದ್ಯ ಕರ್ತವ್ಯ ಸಹ. ಪ್ರತಿಯೊಬ್ಬ ಪ್ರಜೆಯ ಮಾನವ ಹಕ್ಕುಗಳನ್ನು ರಕ್ಷಿಸುವುದು, ರಾಜ್ಯದ ಎಲ್ಲಾ ಸಂಸ್ಥೆಗಳ ಆದ್ಯ ಕರ್ತವ್ಯ ಕೂಡ.
*ಸರ್ವರ ಮಾನವ ಹಕ್ಕುಗಳ ರಕ್ಷಣೆ--ನಮ್ಮೆಲ್ಲರ ಹೊಣೆ*
ವಿವಿಧ ಮೂಲಗಳಿಂದ--(ಸಂಗ್ರಹ)
-ರತ್ನಾ ಭಟ್ ತಲಂಜೇರಿ