ಡಿಸೆಂಬರ್ ೩೧

ಡಿಸೆಂಬರ್ ೩೧

ಕವನ


 ಡಿಸೆಂಬರ್ - ೩೧

ಇನ್ನೊಂದು ವರ್ಷ
ಮುಳುಗುವ ಹೊತ್ತು !
ಮತ್ತೊಂದು ವರ್ಷಕ್ಕೆ
ಆಗಮನದ ಗತ್ತು !

ಗವುಜಿ  ಗದ್ದಲ- .
ಮೈಕು ಸುಡುಮದ್ದುಗಳ ಗುಡುಗು.
ಪಾನಮತ್ತ ನರ್ತನಗಳ ಪಿಡುಗು !
ಹೊಸ ವರ್ಷ ಸ್ವಾಗತಿಸುವ ಸೋಗು? .

ಆದರೆ ಸೂರ್ಯನಿಗೆ ಏನು ಗೊತ್ತು?
ಅಸ್ತನಾಗುವುದು, ಉದಯಿಸುವುದು
ನಿರ್ಲಿಪ್ತ ಬದುಕು!

Comments