ಡೈಬಿಟಿಸ್ ಅನ್ನು ಹೆಚ್ಚಿಸುವ ಆಹಾರಗಳು!
ಸಮೋಸ, ಛೋಲೆ ಭಟೊರೆ, ಗ್ರಿಲ್ಲಡ್ ಚಿಕನ್ ಪಕೋಡಗಳು ಇತ್ಯಾದಿಗಳ ಹೆಸರುಗಳನ್ನು ಕೇಳುತ್ತಲೇ ನಮಗೆ ಬಾಯಲ್ಲಿ ನೀರೂರುತ್ತದೆ. ಈ ಪದಾರ್ಥಗಳನ್ನು ಎಷ್ಟೇ ತಿಂದರೂ, ನಾಲಿಗೆಗೆ ಅದೇ ರುಚಿ-ಸ್ವಾದ ಸಿಗುತ್ತದೆ. ಆದರೆ, ಇವುಗಳು ನಮ್ಮಲ್ಲಿ ಮಧುಮೇಹದ ಅಪಾಯವನ್ನೂ ಹೆಚ್ಚಿಸುತ್ತದೆ. ಜಗತ್ತಿನಲ್ಲಿ ನಮ್ಮ ದೇಶವನ್ನು ಮಧುಮೇಹದ (ಡೈಬಿಟಿಸ್) ರಾಜಧಾನಿ ಎಂದು ಕರೆಯಲಾಗುತ್ತಿದೆ. ಜಗತ್ತಿನಾದ್ಯಂತ ಮಧುಮೇಹದ ಪ್ರಕರಣಗಳಲ್ಲಿ 25% ಪ್ರಕರಣಗಳು ನಮ್ಮ ದೇಶದಲ್ಲಿ ಕಂಡು ಬಂದಿವೆ.
ವೈಜ್ಞಾನಿಕ ನಿಯತ್ಕಾಲಿಕ '𝚃𝚑𝚎 𝙻𝚊𝚗𝚌𝚎𝚝'ನ ಪ್ರಕಾರ ಜಗತ್ತಿನಲ್ಲಿ 82.8 ಕೋಟಿಗಿಂತಲೂ ಅಧಿಕ ಮಧುಮೇಹ ರೋಗಿಗಳಿದ್ದಾರೆ; ಅವುಗಳಲ್ಲಿ 21.2 ಕೋಟಿ ರೋಗಿಗಳು ಭಾರತದಲ್ಲಿ ಇದ್ದಾರೆ. ಇದಕ್ಕೆ 𝙰𝚍𝚟𝚊𝚗𝚌𝚎𝚍 𝙶𝚕𝚢𝚌𝚊𝚝𝚒𝚘𝚗 𝙴𝚗𝚍 𝙿𝚛𝚘𝚍𝚞𝚌𝚝𝚜 ಕಾರಣವಾಗಿವೆ. ಇವುಗಳು ಅತೀಯಾಗಿ ಕರಿದ ಆಹಾರಗಳಲ್ಲಿ ಕಂಡು ಬರುತ್ತವೆ.
ಕೆಲವು ಸಮಯದ ಹಿಂದೆ 𝙸𝚗𝚍𝚒𝚊𝚗 𝙲𝚘𝚞𝚗𝚌𝚒𝚕 𝚘𝚏 𝙼𝚎𝚍𝚒𝚌𝚊𝚕 𝚁𝚎𝚜𝚎𝚊𝚛𝚌𝚑, 𝙼𝚊𝚍𝚛𝚊𝚜 𝙳𝚒𝚊𝚋𝚎𝚝𝚎𝚜 𝚁𝚎𝚜𝚎𝚊𝚛𝚌𝚑 𝙵𝚘𝚞𝚗𝚍𝚊𝚝𝚒𝚘𝚗 ಮತ್ತು ಇನ್ನು ಇತರ ಕೆಲವು ಸಂಸ್ಥೆಗಳು ಇದರ ಕುರಿತು ಅಧ್ಯಯನವನ್ನು ಮಾಡಿದ್ದರು. ಇದರ ಫಲಿತಾಂಶವನ್ನು 𝙸𝚗𝚝𝚎𝚛𝚗𝚊𝚝𝚒𝚘𝚗𝚊𝚕 𝙹𝚘𝚞𝚛𝚗𝚊𝚕 𝚘𝚏 𝙵𝚘𝚘𝚍 𝚂𝚌𝚒𝚎𝚗𝚌𝚎𝚜 𝚊𝚗𝚍 𝙽𝚞𝚝𝚛𝚒𝚝𝚒𝚘𝚗 ಪ್ರಕಟಿಸಲಾಗಿತ್ತು; ಇದರಲ್ಲೂ 𝙰𝚍𝚟𝚊𝚗𝚌𝚎𝚍 𝙶𝚕𝚢𝚌𝚊𝚝𝚒𝚘𝚗 𝙴𝚗𝚍 𝙿𝚛𝚘𝚍𝚞𝚌𝚝𝚜ಗಳ ಕುರಿತು ವಿಶ್ಲೇಷಸಲಾಗಿತ್ತು.
ಡಾ. ಐಶ್ವರ್ಯ ಕೃಷ್ಣಮೂರ್ತಿ ಅವರ ಪ್ರಕಾರ ನಮ್ಮ ದೇಹದಲ್ಲಿ ಗ್ಲುಕೋಸ್ – ಕೊಬ್ಬು, ಪ್ರೊಟೀನ್, ಅಥವಾ DNAನೊಂದಿಗೆ ಬೆಸೆದರೆ 𝙰𝚍𝚟𝚊𝚗𝚌𝚎𝚍 𝙶𝚕𝚢𝚌𝚘𝚝𝚒𝚘𝚗 𝙴𝚗𝚍 𝙿𝚛𝚘𝚍𝚞𝚌𝚝𝚜ಗಳು ರಚಿಸಲ್ಪಡುತ್ತವೆ. ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಇದರ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ಇದರಿಂದ ದೇಹದಲ್ಲಿ ತೊಡಕುಗಳು ಹುಟ್ಟುತ್ತವೆ. ಸಾಮಾನ್ಯವಾಗಿ, ಇವುಗಳ ಮಟ್ಟವು ಸಾಧಾರಣವಾಗಿರುತ್ತದೆ; ಆದರೆ, ಕೆಲವೊಮ್ಮೆ ಅವು ಹೆಚ್ಚಾಗುತ್ತವೆ.
ಉದಾಹರಣೆಗೆ, ನಿಮ್ಮ ರಕ್ತದಲ್ಲಿ ಗ್ಲುಕೋಸ್ ಮಟ್ಟ ತುಂಬಾ ಹೆಚ್ಚಾಗಿದ್ದರೆ, ದೀರ್ಘಕಾಲದವರೆಗೆ 𝙰𝚍𝚟𝚊𝚗𝚌𝚎𝚍 𝙶𝚕𝚢𝚌𝚘𝚝𝚒𝚘𝚗 𝙴𝚗𝚍 𝙿𝚛𝚘𝚍𝚞𝚌𝚝ಗಳು ದೇಹದಲ್ಲಿ ಅಧಿಕವಾಗಿ ಹುಟ್ಟುತ್ತವೆ. ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಈ 𝙰𝚍𝚟𝚊𝚗𝚌𝚎𝚍 𝙶𝚕𝚢𝚌𝚘𝚝𝚒𝚘𝚗 𝙴𝚗𝚍 𝙿𝚛𝚘𝚍𝚞𝚌𝚝𝚜ಗಳು ಸಮಾನ್ಯವಾಗಿ ಸಿಗುತ್ತದೆ. ಇವುಗಳಿಂದ ದೇಹದಲ್ಲಿ ಅತಿಯಾಗಿ ಪರಿಣಾಮವನ್ನು ಬೀರುತ್ತಿದೆ.
𝙰𝚍𝚟𝚊𝚗𝚌𝚎𝚍 𝙶𝚕𝚢𝚌𝚘𝚝𝚒𝚘𝚗 𝙴𝚗𝚍 𝙿𝚛𝚘𝚍𝚞𝚌𝚝𝚜 (𝙰𝙶𝙴𝚜) ಗಳಿಂದ ಮಧುಮೇಹ ಹೇಗೆ ಆಗುತ್ತದೆ? 𝙰𝚍𝚟𝚊𝚗𝚌𝚎𝚍 𝙶𝚕𝚢𝚌𝚘𝚝𝚒𝚘𝚗 𝙴𝚗𝚍 𝙿𝚛𝚘𝚍𝚞𝚌𝚝𝚜ಗಳು ನಮ್ಮ ದೇಹದಲ್ಲಿರುವ ಇನ್ಸೂಲಿನ್ ಹಾರ್ಮೋನ್ ಗಳ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಕಾರಣದಿಂದ ದೇಹದಲ್ಲಿ ಇನ್ಸೂಲಿನ ಮಟ್ಟಗಳು ಹೆಚ್ಚಾಗುತ್ತದೆ; ಇದು ಕೆಲಮಟ್ಟಕ್ಕೆ ದೇಹದಲ್ಲಿ ಹಾನಿಯನ್ನುಂಟು ಮಾಡುತ್ತದೆ. ಹಾಗೆಯೇ, ಇನ್ಸೂಲಿನ ನಿಂದ ದೇಹದಲ್ಲಿ ನಿಯಂತ್ರಿಸಲ್ಪಟ್ಟಿದ್ದ ಸಕ್ಕರೆ ಅಂಶಗಳು ವೃದ್ಧಿಸುತ್ತವೆ.
ಎರಡನೆಯದು, 𝙰𝚍𝚟𝚊𝚗𝚌𝚎𝚍 𝙶𝚕𝚢𝚌𝚘𝚝𝚒𝚘𝚗 𝙴𝚗𝚍 𝙿𝚛𝚘𝚍𝚞𝚌𝚝𝚜ಗಳು ಆಕ್ಸಿಡೆಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ, ಎಲ್ಲಾ ಅಂಗಗಳಿಗೆ ಹಾನಿಯನ್ನುಂಟು ಮಾಡುತ್ತದೆ; ಹಾಗಾಗಿ, ಇದರಿಂದ ಮಧುಮೇಹದ ಪ್ರಮಾಣ ಹೆಚ್ಚಾಗುತ್ತದೆ.
ಮೂರನೇಯದು, 𝙰𝚍𝚟𝚊𝚗𝚌𝚎𝚍 𝙶𝚕𝚢𝚌𝚊𝚝𝚒𝚘𝚗 𝙴𝚗𝚍 𝙿𝚛𝚘𝚍𝚞𝚌𝚝𝚜ಗಳು ಉರಿಯೂತವನ್ನು ಉಂಟು ಮಾಡುತ್ತವೆ. ಇದರಿಂದ, ದೇಹದಲ್ಲಿ ಇನ್ಸೂಲಿನ್ ನ ಪ್ರಮಾಣವೂ ಕಡಿಮೆಯಾಗುತ್ತದೆ; ಮತ್ತು ಇನ್ಸುಲಿನ್ ನ ಕೆಲಸವನ್ನೂ ಕಷ್ಟಗೋಳಿಸುತ್ತದೆ. ಇದರಿಂದ ಇನ್ಸುಲಿನ್ ತನ್ನ ಕೆಲಸವನ್ನು ಸರಿಯಾಗಿ ಮಾಡುವಲ್ಲಿ ವಿಫಲವಾಗುತ್ತದೆ. ಹೀಗೆ, ದೇಹದಲ್ಲಿ 𝙰𝚍𝚟𝚊𝚗𝚌𝚎𝚍 𝙶𝚕𝚢𝚌𝚊𝚝𝚒𝚘𝚗 𝙴𝚗𝚍 𝙿𝚛𝚘𝚍𝚞𝚌𝚝𝚜ಗಳು ಮಧುಮೇಹವನ್ನು ಹುಟ್ಟಿಸುತ್ತದೆ.
ಯಾವ ಯಾವ ತಿನಿಸುಗಳಲ್ಲಿ 𝙰𝚍𝚟𝚊𝚗𝚌𝚎𝚍 𝙶𝚕𝚢𝚌𝚊𝚝𝚒𝚘𝚗 𝙴𝚗𝚍 𝙿𝚛𝚘𝚍𝚞𝚌𝚝𝚜ಗಳು ಕಂಡು ಬರುತ್ತದೆ? ಅಧಿಕ ತಾಪಮಾನದಲ್ಲಿ ಹುರಿದಿರುವ ಆಹಾರಗಳಲ್ಲಿ 𝙰𝚍𝚟𝚊𝚗𝚌𝚎𝚍 𝙶𝚕𝚢𝚌𝚊𝚝𝚒𝚘𝚗 𝙴𝚗𝚍 𝙿𝚛𝚘𝚍𝚞𝚌𝚝𝚜ಗಳು ಕಂಡು ಬರುತ್ತವೆ. ಪ್ಯಾಕೆಟ್ ಗಳಲ್ಲಿ ಬರುವ ಫ್ರೈಡ್ ಫುಡ್ಸ್, ಗ್ರಿಲ್ಡ್ ಫುಡ್ಸ್, ಮತ್ತು ಫಾಸ್ಟ್ ಫುಡ್ಸ್ ಗಳಲ್ಲಿ ಇವು ಹೆಚ್ಚಾಗಿ ಕಂಡು ಬರುತ್ತದೆ. ಹೆಚ್ಚು ತಾಪಮಾನದಲ್ಲಿ ಮಾಡಲಾಗುವ ಆಹಾರಗಳಾದ ಚೀಸ್, ಕ್ರೀಮ್, ಮತ್ತು ಬೆಣ್ಣೆಯಲ್ಲೂ 𝙰𝙶𝙴ಗಳು ಕಂಡು ಬರುತ್ತದೆ.
ಇದನ್ನು ತಡೆಯುವುದು ಸಹ ಸುಲಭವಾಗಿದೆ. ಆಹಾರ ಪದಾರ್ಥಗಳನ್ನು ಹುರಿಯುವ ಅಥವಾ ಗ್ರಿಲ್ಲ್ ಮಾಡುವ ಬದಲಿಗೆ ಬೇಯಿಸಿ ಆಹಾರವನ್ನು ಸೇವಿಸಬಹುದು. ಧವಸ-ಧಾನ್ಯಗಳನ್ನು, ಬೆಳೆಗಳನ್ನು, ಹಣ್ಣು-ಹಂಪಲುಗಳನ್ನು, ಮತ್ತು ತರಕಾರಿಗಳನ್ನು ಅಧಿಕವಾಗಿ ಸೇವಿಸಬಹುದು. ಫಾಸ್ಟ್ ಫುಡ್ ಗಳನ್ನು ಸ್ವಲ್ಪ ಕಡಿಮೆ ಸೇವಿಸಬೇಕು. 𝙰𝚍𝚟𝚊𝚗𝚌𝚎𝚍 𝙶𝚕𝚢𝚌𝚊𝚝𝚒𝚘𝚗 𝙴𝚗𝚍 𝙿𝚛𝚘𝚍𝚞𝚌𝚝𝚜ನಿಂದ ಕೇವಲ ಮಧುಮೇಹದ ಅಪಾಯವಲ್ಲ; ಜೊತೆಗೆ, ಹೃದಯ ಸಂಬಂಧಿತ ಕಾಯಿಲೆಗಳು, ಮೂತ್ರಪಿಂಡ ವೈಫಲ್ಯ ಮತ್ತು ಅಲ್-ಝೖೆಮರ್ಸ್ ನಂತಹ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.
-ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ