ಡೈರೆಕ್ಟರ್‍ಗಿಂತ ಹೀರೋಗೇಕೆ ಹೆಚ್ಚಿನ ಮಹತ್ವ?

ಡೈರೆಕ್ಟರ್‍ಗಿಂತ ಹೀರೋಗೇಕೆ ಹೆಚ್ಚಿನ ಮಹತ್ವ?

Comments

ಬರಹ

'ಮುಂಗಾರು ಮಳೆ'ಯ ಗೆಲುವಿನ ನಂತರ, ಗಾಂದಿನಗರ ಗಣೇಶ್ ಮುಂದಿನ ಸಿನಿಮಾ ಬಗ್ಗೆ ಸುದ್ದಿ ಕೊಟ್ಟಿತೇ ಹೊರತು ಯೋಗರಾಜ್ ಭಟ್‍ರ ಸುದ್ದಿನೇ ಇಲ್ಲ. ಇವರ ಮೊದಲ ಸಿನಿಮಾ 'ಮಣಿ' ಕೂಡ ಚೆನ್ನಾಗಿದೆ, ಆದರೆ ಇದು ಸೋತಿದ್ದು ಅತಿಯಾದ ಹಿಂಸೆಯನ್ನು ತೋರಿಸಿದ್ದರಿಂದ. ಆದರೆ ಕತೆ ಮತ್ತು ಅದನ್ನು ಹೆಣೆದಿರುವ ರೀತಿ, ದ್ರುಶ್ಯಗಳು ಚೆನ್ನಾಗಿವೆ. ಉಮಾಶ್ರಿ ಮತ್ತು ರಂಗಾಯಣ ರಘು ಪ್ರತಿಭೆ ಒರೆಗೆ ಹಚ್ಚಿದಂತಿದೆ.

ಒಂದು ಸಿನಿಮಾ ಗೆಲ್ಲೋಕೆ ಮೂರು ವಿಷಯಗಳು ಚೆನ್ನಾಗಿರಬೇಕು. ೧) ಹಾಡುಗಳು  ೨)ಕತೆ  ೩) ಡೈರೆಕ್ಷನ್. ಉಪೇಂದ್ರ, ಪ್ರೇಮ್ ಮುಂತಾದವರು ಮೇಲೆ ಬಂದಿದ್ದೇ ಡೈರೆಕ್ಷನ್ ಪ್ರತಿಭೆಯಿಂದ. ತಮಿಳು, ತೆಲುಗರಂತೆ ಕನ್ನಡಿಗರು ಹೀರೋ oriented ಅಲ್ಲ ಅನ್ನುವದನ್ನು ಮತ್ತೆ ಮತ್ತೆ ತೋರಿಸುತ್ತಿದ್ದರೂ ಗಾಂದಿನಗರ ಇದನ್ನು ತಿಳಿದುಕೊಳ್ಳುತ್ತಿಲ್ಲ. ಹೀಗಾಗಿ ಉಪೇಂದ್ರನಂತ ಅದ್ಭುತ ಪ್ರತಿಭೆ ಧೂಳು ತಿಂತಿದೆ, ಪ್ರೇಮ್ ಕೂಡ ಅದೇ ಹಾದಿಯಲ್ಲಿದೆ.

ಬಹುಶ ಕನ್ನಡ ಸಿನಿಮಾರಂಗದ ಈ ನೋಟ ಬದಲಾಗಬೇಕು. ಡೈರೆಕ್ಟರ್‍ಗೆ ಹೆಚ್ಚಿನ ಮಹತ್ವ ನೀಡಬೇಕು ಅನಿಸುತ್ತದೆ.  

ನೀವೇನಂತೀರಿ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet