ಡೈವೊರ್ಸ್ ಬೇಕಾ ಆ್ಯಪಲ್ ತಿನ್ನಿ

ಡೈವೊರ್ಸ್ ಬೇಕಾ ಆ್ಯಪಲ್ ತಿನ್ನಿ

 
- ಮಹೇಶ ಕಲಾಲ
ಪ್ರಸಿದ್ಧ ವೈದ್ಯ ಧನವಂತರಾವ್‍ನ ಹೆಂಡತಿ ಲೀಲಾಗೆ ಗಂಡನಿಗೆ ಡೈವೊರ್ಸ್ ಕೊಡ್ಬೇಕಾಗಿತ್ತು. ಲಾಯರ್‍ನ ಕಾಣ್ಬೇಕಲ್ಲ  ಲಾಯರ್ ಬಲವಂತರಾವ್‍ನನ್ನು ಹುಡುಕಿಕೊಂಡು ಅವರ ಕಚೇರಿಗೆ ಬಂದಳು. ಕಚೇರಿ ಎದುರು ಗುಂಡ ಕುಳಿತಿದ್ದ ತನ್ನ ಗಂಡನ ಖಾಯಂ ಗಿರಾಕಿ ಗುಂಡ ಕುಳಿತಿದ್ದನ್ನು ಕಂಡು ಒಂದು ಕ್ಷಣ ಮೌನವಾದಳು ಲೀಲಾ. 
ಗುಂಡ : ಏನು ಮೇಡಂ ಇಲ್ಲಿಗೆ ಬಂದಿದ್ದಿರಿ
ಲೀಲಾ : ಲಾಯರ್‍ನ ಕಾಣ್ಬೇಕಿತ್ತು.
ಗುಂಡ : ಬರುತ್ತಾರೆ ಕುಳಿತುಕೊಳ್ಳಿ ಮೇಡಂ
ಲೀಲಾ: ಎಷ್ಟೊತ್ತಿಗೆ ಬರುತ್ತಾರೆ?
ಗುಂಡ : ಏನು ಕೆಲಸ ಇತ್ತು ಮೇಡಂ
ಲೀಲಾ : ಸ್ವಲ್ಪ ಪರ್ಸನಲ್
ಗುಂಡಾ : ಓ ಹೌದಾ
ಗುಂಡಾ: ಅಲ್ಲ ಮೇಡಂ ನಮ್ಮೆಜಮಾನರು ನಿಮ್ಮೆಜಮಾನರನ್ನ ಹುಡುಕಿಕೊಂಡು ಬರುತ್ತಾರೆ. ಆದರೆ ನೀವು ನಮ್ಮೆಜಮಾನರನ್ನು ಹುಡುಕಿಕೊಂಡು ಬಂದಿದ್ದಿರಿ
ಲೀಲಾ: ಸ್ವಲ್ಪ ಕೆಲಸ ಇತ್ತು ಅಂದ್ರೆ ಅರ್ಥ ಆಗಲ್ವಾ
ಗುಂಡಾ: ಅದೇ ಏನು ಕೆಲಸ?
ಲೀಲಾ: ನಮ್ಮೆಜಮಾನರಿಂದ ದೂರ ಇರಬೇಕು ಅಂತ ಮಾಡಿದ್ದಿನಿ ಸಾಕಾ ಇನ್ನು ಬೇಕಾ ಅವಿವೇಕಿ
ಗುಂಡ : ಇಷ್ಟೇನಾ ಅಷ್ಟಕ್ಕೆ ಯಾಕೆ ಇಷ್ಟು ದೂರ ಬಂದಿದ್ದಿರಿ ಮೇಡಂ
ಲೀಲಾ: ಏನು? ನಿನಗೆ ಸಣ್ಣ ವಿಷಯ ಅನ್ನಿಸುತ್ತಾ?
ಗುಂಡ: ಹೇ ಆ್ಯಪಲ್ ತಿಂದ್ರೆ ಆಯ್ತಲ್ಲ ಮೇಡಂ ಅದಕ್ಕೆ ಇಲ್ಲಿಗ್ಯಾಕೆ ಬಂದ್ರಿ. ನಮ್ಮೆಜಮಾನ್ರು ಏನು ಹಣ್ಣಿನಂಗಡಿ ಇಟ್ಟಿದ್ದಾರ. ದಿನಕ್ಕೊಂದು ಸೇಬು ತಿಂದರೆ ವೈದ್ಯನಿಂದ ದೂರ ಅಂತ ಗಾದೆ ಇಲ್ವಾ !!!!
 

Comments