ತಂಗಿ ಆಗಲಿ ನಿನಗೆ ಒಳಿತು
ಕವನ
ಕೂಸು ಮರಿ
ನನ್ನ ಕೂಸು ಮರಿ
ಲಾಲಿ ಹಾಡುವೆ
ನನ್ನ ತಂಗಿ ಮುದ್ದು ಮರಿ
ಬೇಡ ಬಿಡು ಕೋಪ
ತೆಗೆದು ಹಾಕು ತಾಪ
ಕ್ಷಮಿಸಿ ಬಿಡು ತಪ್ಪ
ನಾನು ಆಗಿರುವೆ ಸಪ್ಪ
ಮೌನ ಉಳಿಯಿತು ಕವಿತೆಯಲ್ಲಿ
ಮಾತು ಬರಲಿಲ್ಲ ಬಾಯಲಿ
ಹೃದಯ ಅರ್ಥ ಆಗಲಿಲ್ಲ
ಕೊನೆಗೆ ನಾನು ಅರ್ಥ ಆಗಲಿಲ್ಲ
ಹೃದಯ ಚಿದ್ರ ಆಗಿದೆ
ಮನಸು ಕಲ್ಲು ಆಗಿದೆ
ಏನು ತೋಚದೆ
ಕುಳಿತೆ ಸುಮ್ಮನೆ ಮಾತನಾಡದೆ
ಮಾಡಿದ್ದಾದರೂ ಎನು ತಪ್ಪು
ಹೋಗುತ್ತಿಲ್ಲ ನನಗೆ ಹೊತ್ತು
ತಂಗಿ ಆಗಲಿ ನಿನಗೆ ಒಳಿತು
ನೋವು ಬಾಧಿಸುತ್ತದೆ ಈ ಹೊತ್ತು
-ಹುಚ್ಚೀರಪ್ಪ ವೀರಪ್ಪ ಈಟಿ, ಸಾ ನರೇಗಲ್ಲ, ಗದಗ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್