ತಂಪು ಇರದೆ ಮಲಗಿದೆ
ಕವನ
ಯಾವ ಗಂಧವ ತೀಡುತಿರಲು ಬನದ ಹೂವದು ಅರಳಿತೊ
ಯಾವ ರೀತಿಯ ಬಾಳಿನಲ್ಲಿ ನನ್ನ ಜೀವನ ನಿಂತಿತೊ
ಹರಿವ ನದಿಗೆ ಚೆಂದವೆನುವ ಚಿಂತೆಯಿಂದು ಇರುವುದೆ
ಕದಡಿ ಹೋದ ಮನದ ಒಳಗೇ ಸವಿಯ ಕೊರತೆ ಕಂಡಿದೆ
ಚೈತ್ರವಿಂದು ಕನಸಿನೊಳಗೆ ಕೈಯ ಬೀಸಿ ಕರೆದಿದೆ
ನನಸು ಬರದೆ ಮೋಹ ಕಳೆಯೆ ಸುಪ್ತ ಕಾಮನೆ ನರಳಿದೆ
ಬಾವಿಯೊಳಗೆ ಇರುವ ಜಲಕೆ ಕೆಡುವ ಭಯವು ಎಲ್ಲಿದೆ
ಮನೆಯ ಒಳಗಡೆ ಕುಳಿತ ಒಲವಿಗೆ ಪ್ರೀತಿ ಸಿಗದೆ ಬಾಡಿದೆ
ಹೊಂಗೆ ಮರದ ನೆರಳು ಇಂದೂ ತಂಪು ಇರದೆ ಮಲಗಿದೆ
ಜೀವದೊಳಗೆ ಭಾವವಿರದೆ ನವ್ಯ ಚೇತನ ಸೊರಗಿದೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್