ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ?

ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ?

ಬರಹ

ತಕಳ್ರಪ್ಪ. ಶಂಕದಿಂದ ಬಂದ್ರೇನೆ ತೀರ್ತ.. ಪ್ರಜಾವಾಣಿಯಲ್ಲಿ ಬರುವ ನುಡಿಬಿನ್ನಣಿ ಕೆ.ವಿ.ನಾರಾಯಣ ಅವರ 'ಪದಸಂಪದ' ದಲ್ಲಿ ಹೆಚ್ಚು ಕನ್ನಡಿಗರ ಬಾಯಲ್ಲಿ ಮಹಾಪ್ರಾಣ ಅಲ್ಪಪ್ರಾಣವಾಗುತ್ತದೆ ಅಂತ ಹೇಳಿದ್ದಾರೆ. ಹಾಗಾಗಿ ಅದನ್ನು ಬರಹದಲ್ಲಿ ಉಳಿಸಿಕೊಳ್ಳುವ ಅಗತ್ಯವಿಲ್ಲ ಎಂಬ ಶಂಕರಬಟ್ಟರ ನಿಲುವನ್ನು ಅವರು ಒಪ್ಪಿದ್ದಾರೆ.

http://prajavani.net/Content/Feb102008/weekly2008020966678.asp


ಕೆ.ವಿ.ನಾರಾಯಣರವರು ಹೇಳಿರುವುದು:-
"ಕನ್ನಡ ಬರಹ ಕಲಿಯುತ್ತಿರುವವರೆಲ್ಲ ಒಂದಲ್ಲ ಒಂದು ಬಾರಿ ಈ ಮಹಾಪ್ರಾಣನೋ,ಅಲ್ಪಪ್ರಾಣನೋ ಎಂಬ ಗೊಂದಲಕ್ಕೆ ಒಳಗಾಗುತ್ತಾರೆ. ಇದಕ್ಕೆ ಎರಡು ಕಾರಣಗಳಿವೆ.
೧) ಮಹಾಪ್ರಾಣಗಳಿರುವ ಈ ಬಗೆಯ ಪದಗಳು ಬೇರೆ ಬಾಶೆಯಿಂದ ಅದರಲ್ಲೂ ಸಂಸ್ಕ್ರುತದಿಂದ ಕನ್ನಡಕ್ಕೆ ಬಂದು ಸೇರಿಕೊಂಡಿರುತ್ತವೆ. ಹಾಗಾಗಿ ಇವು ಕನ್ನಡದ ದನಿರಚನೆಯನ್ನು ಪಾಲಿಸುತ್ತಿರುವುದಿಲ್ಲ.
೨) ಈ ಬಗೆಯ ಪದಗಳ ಬರಹದ ರೂಪವನ್ನು ನಾವು ಅಲ್ಲಲ್ಲಿ ಕಂಡಿರಬಹುದೇ ಹೊರತು ಅವುಗಳ ನುಡಿ ರೂಪ ನಮ್ಮ ನೆನಪಿನಲ್ಲಿ ಬೇರೂರುವುದಿಲ್ಲ. ಹಾಗಾಗಿ ಈ ಪದಗಳನ್ನು ಬರೆಯಬೇಕಾಗಿ ಬಂದಾಗಲೆಲ್ಲ ಸರಿಯಾದ ರೂಪ ಯಾವುದು ಎಂಬ ಗೋಜಲು ಉಂಟಾಗುತ್ತದೆ.
ಪ್ರಬೇದ, ಪ್ರಬಂದ, ಸಂಬಂದ ಮುಂತಾದ ಪದಗಳನ್ನು ಬರೆಯುವಾಗಲೂ ಈ ಗೋಜಲು ಕಾಣುವುದು. ಹೆಚ್ಚು ಕನ್ನಡಿಗರು ಸಹಜ ವೇಗದಲ್ಲಿ ಮಾತಾಡುವಾಗ ಮಹಾಪ್ರಾಣಗಳನ್ನು ಅಲ್ಪಪ್ರಾಣಗಳನ್ನಾಗಿಯೇ ನುಡಿಯುತ್ತಾರೆ(ಮರಾಟಿ ಬಾಶೆಯನ್ನು ಮಾತಾಡುವ ಪ್ರದೇಶಕ್ಕೆ ಹತ್ತಿರವಿರುವ ಕನ್ನಡ ನಾಡಿನಲ್ಲಿ ಮಂದಿ ಕೆಲವು ಮಹಾಪ್ರಾಣಗಳನ್ನು ಸಹಜವಾಗಿಯೇ ನುಡಿಯುತ್ತಾರೆ). ಎಚ್ಚರದಿಂದ ನುಡಿಯುವಾಗ ಮಾತ್ರ ಮಹಾಪ್ರಾಣಗಳನ್ನು ಅವು 'ಇರಬೇಕಾದಂತೆ'ನುಡಿಯುತ್ತಾರೆ. ಅಂದರೆ ಬರಹ ರೂಪಗಳಲ್ಲಿ ನಾವು ಮಹಾಪ್ರಾಣಗಳನ್ನು ಎಚ್ಚರದಿಂದ ಬಳಸಬೇಕಾದ ಒತ್ತಡಕ್ಕೆ ಒಳಗಾಗುತ್ತೇವೆ. ಅಲ್ಲದೆ ಮಾತಾಡುವಾಗ ಮಹಾಪ್ರಾಣಗಳಿಲ್ಲದಿರುವಾಗಲೂ ಅಲ್ಪಪ್ರಾಣಗಳನ್ನು ಮಹಾಪ್ರಾಣಗಳಾಗನ್ನಾಗಿ ನುಡಿಯುತ್ತಿರುವುದುಂಟು. ಮಾತು ಮತ್ತು ಬರಹಗಳ ನಡುವೆ ಉಂಟಾಗುತ್ತಿರುವ ಈ ಕೊರಕಲನ್ನು ಗಮನಿಸಿಯೆ ಡಾ||ಶಂಕರ ಬಟ್ಟರು ಕನ್ನಡ ಬರಹದಲ್ಲಿ ಮಹಾಪ್ರಾಣಗಳ ಬದಲು ಅಲ್ಪಪ್ರಾಣಗಳನ್ನೆ ಬರೆಯಬೇಕೆಂಬ ಸಲಹೆಯನ್ನು ಮುಂದಿಟ್ಟಿದ್ದಾರ್. ತಮ್ಮ ಹೊಸ ಹೊತ್ತಗೆಯನ್ನು (ಕನ್ನಡ ನುಡಿ ನಡೆದು ಬಂದ ದಾರಿ) ಹೀಗೆಯೆ ಅಚ್ಚು ಮಾಡಿದ್ದಾರೆ. ಮೊದಮ್ದಲು ಓದಲು ಮುಜುಗರವೆನಿಸಿದರೂ ಓದಿಗೆ ಹೊಂದಿಕೊಂಡಾಗ ತೊಂದರೆಯಾಗುವುದಿಲ್ಲ. ಅರ್ತವಾಗುವುದಕ್ಕೆ ನಾವು ತಿಳಿದ್ಕೊಂಡಂತೆ ಯಾವ ಅಡ್ಡಿಯೂ ಆಗುವುದಿಲ್ಲ. ನಾವೆಲ್ಲ ಈ ಬಗ್ಗೆ ಯೋಚಿಸಬೇಕಾಗಿದೆ"

ಮಾನ್ಯ ಸಂಪದಿಗರೆ,
  ಶಂಕರ ಬಟ್ಟರು ಮತ್ತು ಕೆ.ವಿ.ನಾರಾಯಣರು ಹೇಳಿರುವ ಬಗ್ಗೆ ಉಂಕಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet