ತಗೋ ಬೆಳಕು

ತಗೋ ಬೆಳಕು

ಬರಹ

ಶಿಷ್ಯ ಪ್ರತಿದಿನ ಗುರುವಿನ ಹತ್ತಿರ ಬರುತ್ತಿದ್ದ. ಒಂದು ದಿನ ರಾತ್ರಿ ಹೊತ್ತಾಗಿಬಿಟ್ಟಿತು .
'ಇನ್ನು ಮಲಗಲು ಹೋಗಬಹುದಲ್ಲ?' ಎಂದ ಗುರು.
ಶಿಷ್ಯ ಗುರುವಿಗೆ ನಮಸ್ಕರಿಸಿ ಎದ್ದು ತೆರೆ ಸರಿಸಿ ಹೊರ ನೋಡಿದ . 'ತುಂಬ ಕತ್ತಲಾಗಿದೆ' ಎಂದ.
'ತಗೊ, ಈ ಮೇಣದಬತ್ತಿ ತೆಗೆದುಕೊ' ಎಂದು ಗುರು ಅದನ್ನು ಹೊತ್ತಿಸಿಕೊಟ್ಟ .
ಶಿಷ್ಯ ಕೈ ನೀಡಿ ಅದನ್ನು ತೆಗೆದುಕೊಂಡ .

ಗುರು ಮುಂದಕ್ಕೆ ಬಾಗಿ ಮೇಣದಬತ್ತಿ ಊದಿ ಆರಿಸಿದ.