-ತಟ್ಟೀತು ಶಾಪ...

-ತಟ್ಟೀತು ಶಾಪ...

ಕವನ

 

 
-ತಟ್ಟೀತು ಶಾಪ...
 
ಕಗ್ಗಲ್ಲ ಬಂಡೆಗಳಿಗೇಕೆ
ಮೊಗ್ಗಿನಾ ಬಯಕೆ?
ಮುಸುಕಿನಲಿ ಬಂದದನು 
ಹೊಸಕಿ ಹಾಕುವುದೇಕೆ?
ಬೇಲಿಯಂತಿರುವವರೆ ಒಳನುಗ್ಗಿ
 
ಕೇಲಿ ಬಯಸುವುದೇಕೆ?
ಅರಳಿ ಹೂವಾಗಲಿ ಬಾಲೆ;
ತಟ್ಟೀತು ಶಾಪ 
ಸುಟ್ಟೀತು ನಿಮ್ಮನ್ನೆ 
ಮುಟ್ಟದಿರಿ ಅವಳನ್ನು, ಜೋಕೆ...
-ಮಾಲು