ತಡಿಮಗ ತಡಿಮಗ (ಜೋಗಿ ಹಾಡಿನ Remix ಅಣಕವಾಡು)
ತಡಿಮಗ ತಡಿಮಗ ತಡಿಮಗ ತಡಿಮಗ ಬಿಡಬೇಡ ಸೀಟ್ನಾ
ಕಾ0ಗ್ರೆಸ್ , ಬಿ.ಜೆ.ಪಿ ಯಾರೆ ಬಡ್ಕೊ0ಡ್ರು ಕೊಡಬೇಡ ಗಮ್ನಾ
ಈ ಪಾಲಿಟಿಕ್ಸಗೆ ಬ0ದಮೇಲೆ ಹೀಗೇನಾ ಅಪ್ಪಾ
ಮೋಸದಿ0ದ ನೀ ಸಿ.ಎಮ್ ಮಾಡ್ದೆ ಅದು ನನ್ ತಪ್ಪ
ಮಗ ಯಾರ್ನೂ ನ0ಬಬೇಡ
ಮಗ ಪ್ರೆಸ್ನೋರ್ನ ಬೈಯ್ಯಬೇಡ
ಒಬ್ನೆ ಪ್ರೆಸ್ ಮೀಟ್ ಮಾಡಬೇಡ
ಮಾಡಿ ಏನೇನೊ ಹೇಳಬೇಡ
ಹೇಳಿ ಹಗರಣದಲ್ಲಿ ಸಿಗಬ್ಯಾಡ
ಸಿಕ್ಕಿ ಹಾಳಾಗಬ್ಯಾಡ ಲೇಯ್
ಪ್ರೆಸ್ನೋರ್ನೆಲ್ಲ ಮು0ದೆ ಇಟ್ಟು ಸ್ಕೆಚ್ಚು ಹಾಕ್ತಾರೊ
ಡ್ಯೂಟಿ ಅ0ತ ಹಿ0ದೆ ಹೋದ್ರೆ ಚುಚ್ಚೆ ಬಿಡ್ತಾರೊ
ರಾಜಕೀಯ ಗೋಳು ಅಪ್ಪ , ಪವರ್ ಖಾಲಿ ಹಾಳೆ ಅಪ್ಪ
ಆ ಪ್ರೆಸ್ ನೋರ್ ಬರೆವ ಬರಹಾ.. || ಪ ||
ಮಗ ಎಲ್ಲ0ದ್ರಲ್ಲಿ ಮಲ್ಗ ಬೇಡ
ಮಾಡೊ ಕೆಲ್ಸ ಹೇಳಬೇಡ
ಏನು ಕೆಲ್ಸಾನೂ ಮಾಡಬೇಡ
ಕೆಲ್ಸಕ್ಕ್ ಯಾರ್ನೂ ನ0ಬಬೇಡ
ನ0ಬಿ ರಾಜಿ ಆಗಬ್ಯಾಡ
ಆದ್ರೂ ಯಾಮಾರ ಬ್ಯಾಡ ಲೇಯ್
ದೋಸ್ತಿ ಸರ್ಕಾರ ಅ0ತ ಒಳ್ಗೊಳ್ಗೆ ಸ್ಕೀಮು ಹಾಕ್ತಾರೊ
ಒ0ದೆ ಸರ್ಕಾರದಲ್ಲಿ ಇದ್ಕೊ0ಡೆ ಮೂರ್ತ ಇಡ್ತಾರೊ
ಹುಟ್ಟು ನಿ0ದೆ ಅಪ್ಪ, ಪವರ್ ನಿ0ದೆ ಅಪ್ಪ
ನಾನ್ ಸಿ.ಎಮ್ ಆಗಿದ್ದು ನನ್ ತಪ್ಪಾ
(ರವಿಕುಮಾರ ವೈ. ಎಮ್)