ತನಿ ಎರೆಯೋಣ
ಕವನ
ಬನ್ನಿರಕ್ಕ ಹೋಗೋಣ ನಾಗಪ್ಪನ ಗುಡಿಗೆ
ತನ್ನಿರಕ್ಕ ಹಾಲು ತುಂಬಿದ ಚೆಲುವಿನ ಗಡಿಗೆ
ಶ್ರಾವಣದ ಚತುರ್ದಶಿ ನಾಗಚೌತಿಯಂತೆ
ಕಲ್ಲ ನಾಗದೇವನನು ಪೂಜಿಸೋಣವಂತೆ
ರಾಹುಕಾಲ ಹಾಲೆರೆಯಲು ಶುಭದ ಸಮಯವು
ಅರಶಿನ ಮಿಶ್ರಿತ ನೀರಿನ ಅಭಿಷೇಕವು
ಹಸಿತಂಬಿಟ್ಟು ಸಿಹಿಉಂಡೆ ನೈವೇದ್ಯವು
ಗೆಜ್ಜೆಹಾರ ಹಣ್ಣು ಕಾಯಿ ಸಮರ್ಪಣೆಯು
ಅಕ್ಷತೆ ಹೂಗಂಧ ಧೂಪ ದೀಪವು
ಶ್ರದ್ಧಾಭಕ್ತಿಯಲಿ ಅರ್ಚನೆ ಪ್ರಾರ್ಥನೆಯು
ತನ್ನಿ ಎರೆಯೋಣ ಕ್ಷೇಮವನು ಬೇಡೋಣ
ಸರ್ವರಿಗೂ ಸುಖಶಾಂತಿ ಜೀವನದಿ ಎನ್ನೋಣ
ಸಂಸ್ಕಾರ ಸಂಸ್ಕೃತಿಯ ಆಗರವೇ ಭಾರತವು
ಪೂಜೆ ಪುನಸ್ಕಾರದ ಆಡೊಂಬಲ ಬುವಿಯು
ಎರೆದಂಥ ಅಭಿಷೇಕ ಅವನಿಯಲಿ ಇಂಗುತಲಿ
ನೊರೆಹಾಲ ತೆರದಲ್ಲಿ ಮಳೆಬೆಳೆ ನೀಡುತಲಿ
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್