ತನುಜೆಯ ಬೀಡು
ಕವನ
ಚೆಲು ಕನ್ನಡ ಚೆಲು ಕನ್ನಡ ಚೆಲುವಿನ ನಾಡು
ಭಾರತಾಂಬೆ ನಮ್ಮ ತಾಯ ತನುಜೆಯ ಬೀಡು
ಎತ್ತರಗಳ ಕರಿಮಣ್ಣಿನ ಸೊಬಗಿನ ನಾಡು
ಶ್ರೀಗಂಧದ ನದಿವನಗಳ ಸುಂದರ ಬೀಡು
ತರುಲತೆಗಳ ಶಾಸನಗಳ ಹೆಮ್ಮೆಯ ನಾಡು
ಸ್ವಾಭಿಮಾನ ಹಿರಿಮೆಗಳ ಸಾಧನೆ ಬೀಡು
ಶೂರ ಧೀರ ರಾಜರುಗಳ ಚರಿತೆಯ ನಾಡು
ದೇಶ ಪ್ರೇಮಿ ಬಂಧುಗಳ ಐಕ್ಯತೆ ಬೀಡು
ಸದ್ಗುಣಿಗಳ ಭಕ್ತರ ಬದುಕಿನ ನಾಡು
ಸಂತ ಋಷಿ ಪಾಮರರ ಕವಿಗಳ ಬೀಡು
ಕಲೆಗಾರರ ಪಂಡಿತರ ವೈಭವ ನಾಡು
ವಿಜ್ಞಾನ ಚಿಗುರುಗಳ ಸಾಧನೆ ಬೀಡು
ನೀತಿ ಧರ್ಮ ದುಡಿಮೆಗಳ ಸೇವೆಯ ನಾಡು
ಪರಮ ಜ್ಯೋತಿ ಸತ್ಯತೆಯ ಸಾರಿದ ಬೀಡು
***
ಹನಿಗಳು
ನವಿಲು
ಗರಿಯಂತೆ
ನೀ
ಹೆಣ್ಣೇ
ನಕ್ಕಾಗ
ಮಧುಚಂದ್ರ
ಬಾನಲ್ಲಿ
ಅರಳಿದ !
ತಿರುಗಿಸಿ
ಸೊಂಟ
ಬಳುಕಿಸಿ
ನಡೆವಾಗ
ಹೆಣ್ಣೇ
ನೀ
ಥೇಟ್
ಮೇನಕೆ
ತರಹ
ನನಗೋ
ವಿರಹ !
ಪ್ರೀತಿಯೆಂದ
ಕೂಡಲೇ
ಪ್ರೇಮ
ಪಿಸು
ಪಿಸುಗುಟ್ಟುತ್ತದೆ !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್