ತನುಮನದಲಿ ಕನ್ನಡ ಹೊಮ್ಮಲಿ
ಕವನ
ತಾಯಿ ಭಾಷೆ ಕೋಟಿ ಹೊನ್ನಿಗಿಂತಲೂ ಮಿಗಿಲು
ಎಲ್ಲೆಡೆಯು ಪಸರಿಸುವ ಶ್ರೀ ಗಂಧದ ಘಮಲು
ತನುಮನದಲಿ ಕನ್ನಡ ಹೊಮ್ಮಲಿ ಚಿಮ್ಮಲಿ
ಕಂದನ ನಾಲಗೆಯಲಿ ಹೊರಳಾಡಲಿ
ನಮ್ಮ ನೆಲ ತೆಂಗು ಕಂಗು ತಾಳೆಬಾಳೆಗಳ ನಾಡು
ಬನವಾಸಿ ಕೆಳದಿ ಉಳ್ಳಾಲ ನಡುಗಲ್ಲಿನ ಬೀಡು
ತುಂಗೆ ನೇತ್ರೆ ಕುಮಾರಧಾರಾ ಸೀರೆಹೊಳೆ ಕಡಲು
ಸದಾ ಹರಿಯುವ ಪವಿತ್ರ ಜಲರಾಶಿಗಳು
ಹಳೆ ನಡು ನವ್ಯ ನುಡಿಗಳ ಭದ್ರ ತಳಪಾಯ
ಕವಿಪುಂಗವರು ಮಾತೃಭಾಷೆಗೆ ದುಡಿದ ಕಾಯ
ಸಂತರು ದಾಸರು ಹಾಡಿ ಹೊಗಳಿದ ಚೆನ್ನುಡಿ
ಮುದ್ದಣ್ಣ ಬೇಂದ್ರೆ ಪುಟ್ಟಪ್ಪ ಅಡಿಗರ ಒಳ್ನುಡಿ
ಗತ ಇತಿಹಾಸಗಳಲಿ ಮೆರೆದ ವೀರ ಶೂರರ ಬಲ
ಶಿಲ್ಪ ಕಲೆಗಳ ತೊಟ್ಟಿಲ ಅಂದ ಚಂದಗಳ ನೆಲ
ತಾಯಿ ಭಾಷೆಯ ಸೊಗಡಿನ ಲಾಸ್ಯದ ಕಂಪು
ಸಾಂಸ್ಕೃತಿಕ ಕಾರಂಜಿಯು ಚಿಮ್ಮುವ
ಚೆಲು ತಂಪು
ಹೊತ್ತ ಬುವಿಯ ನಾವು ಮರೆಯದಿರೋಣ
ತನುವ ಕಣಕಣದಲಿ ಕನ್ನಡವ ಹರಿಸೋಣ
ತಾಯ ಸೇವೆಯೇ ಬಾಳ ಗುರಿಯೆನ್ನೋಣ
ಉಸಿರು ಹಸಿರು ಅನ್ನದ ಋಣ ತೀರಿಸೋಣ
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
