ತನುವ ರೂಪದ
ಕವನ
ತನುವ ರೂಪದ
ಮೋಹ ರಾಶಿಗೆ
ಒಲಿದು ಬಂದಿಹೆ ಚೆಲುವೆಯೆ
ಬಯಸಿ ಮನದಲಿ
ಪ್ರೀತಿ ಅರಳುತ
ಸವಿಯ ತಂದಿಹೆ ಚೆಲುವೆಯೆ
ಕರುಣೆ ಇಡುತಲಿ
ಬಳಿಗೆ ಬರುತಲಿ
ಸುಖವ ನೀಡೆಯ ಚೆಲುವೆಯೆ
ಮನದ ಒಳಗಡೆ
ನಿನದೆ ನೆನಪಿದೆ
ಬಾಹು ಬಂಧನ ಚೆಲುವೆಯೆ
ಮಧುರ ಗೀತೆಯ
ನುಡಿಸಿ ನಿಂದೆನು
ಸನಿಹ ನಿಂತೆಯ ಚೆಲುವೆಯೆ
ಇರಲಿ ಹೀಗೆಯೆ
ಬೆಸುಗೆ ಹೊಸತನ
ಬದುಕ ಬಾಳಲಿ ಚೆಲುವೆಯೆ
ಮತ್ತೆ ಬಲವದು
ಸೇರಿ ಹೊರಳಲು
ನವ್ಯ ಜೀವವು ಚೆಲುವೆಯೆ
ಕೈಯ ಹಿಡಿಯುತ
ನಡೆಸಿ ಸಾಗಲು
ಪ್ರೇಮ ಅಮರವು ಚೆಲುವೆಯೆ
-ಹಾ ಮ ಸತೀಶ
ಚಿತ್ರ್
