ತಪ್ಪಾ ? ಪ್ರೀತ್ಸೋದ್ ತಪ್ಪಾ?
ಇಲ್ಲಿವರೆಗೆ ಪ್ರೇಮಿಗಳಿಗೆ ಕೇವಲ ಹೆತ್ತವರ ಪೊಲೀಸರ ಕಾಟ ಮಾತ್ರ ಇತ್ತು
ಇದೀಗ ರಾಮಸೇನೆಯ ಸರದಿ.
ಅಲ್ಲಾ ವ್ಯಾಲೆಂಟೈನ್ಸ್ ಡೇ ದಿನ ಮಾತ್ರ ಪ್ರೇಮಿಗಳು ಜೊತೆಯಾಗಿ ಕಂಡರೆ ಕೂಡಲೇ ಮದುವೆ ಮಾಡಿಸುವ ಪೌರೋಹಿತ್ಯಕ್ಕೆ ಮುಂದಾಗಿರುವುದು ಏಕೆ?
ಇನ್ನಿತರ ದಿನಗಳಲ್ಲಿ ಪ್ರೇಮಿಗಳು ಏನಾದರೂ ಮಾಡಿಕೊಳ್ಳಲಿ ಎಂಬ ಧೋರಣೆಯೇ?
ಅವರ ದ್ವೇಷ ವ್ಯಾಲೆಂಟೈನ್ಸ್ ಡೇ ಕಡೆಗೋ ಅಥವ ಪ್ರೇಮಿಗಳ ಕಡೆಗೋ ಎಂಬುದು
ಖಂಡಿತಾ ಪ್ರೇಮಿಗಳ ಮೇಲಲ್ಲಾ ಎಂಬುದಂತೂ ಖಚಿತ .ಹಾಗಿದ್ದಲ್ಲಿ ವ್ಯಾಲೆಂಟೈನ್ಸ್ ಡೇ ದಿನದ ಮೇಲಾಗಿದ್ದರೆ ಬಡಪಾಯಿ ಪ್ರೇಮಿಗಳನ್ನೇಕೆ ಗುರಿ ಮಾಡಿಕೊಳ್ಳುವುದು?
ಪ್ರೇಮಿಗಳು ಜೊತೆ ಜೊತೆಯಲ್ಲಿ ಸುತ್ತಾಟ ಒಡಾನಾಟ ನಡೆಸುವುದು ಪರಸ್ಪರ ಅರಿಯುವದ್ದಕ್ಕ್ಕಾಗಿ .
ಜೊತೆಯಲ್ಲಿಯೇ ಓಡಾಡಿ ಕೊನೆಗೊಮ್ಮೆ ತಾವು ಒಬ್ಬರಿಗೊಬ್ಬರು ಸರಿಯಾದ ಜೋಡಿ ಅಲ್ಲವೆಂದು ತಿಳಿದು ಮದುವೆ ಆಗದಿರುವ ಉದಾಹರಣೆಗಳು ಜಾಸ್ತಿಯೇ ಇವೆ
ಇವರು ಪ್ರೇಮಿಗಳು ಕಂಡಲ್ಲಿ ಮದುವೆ ಮಾಡಿಸಿಬಿಟ್ಟರೆ ಆ ಜೋಡಿಗಳ ಹೊಂದಾಣಿಕೆಯಾಗುತ್ತದೆಯಾ? ಅವರ ಜೀವನದಲ್ಲಿ ಮುಂದಾಗಬಹುದಾದ ಭಿನ್ನಾಭಿಪ್ರಾಯಗಳಿಗೆ , ಸಮಸ್ಯೆಗಳಿಗೆ ಇವರು ಹೊಣೆಯಾಗುತ್ತಾರೆಯೇ?
ವಿವಾಹ ಪೂರ್ವ ಪ್ರೇಮ ಎನ್ನುವುದು ಮಧುರ ಅನುಭೂತಿ. ಅದನ್ನು ಅನುಭವಿಸಿಯೇ ತಿಳಿಯಬೇಕು . ಅಂತಹ ಅನುಭವಕ್ಕೆ ಎಡೆ ಮಾಡಿಕೊಳ್ಲುವ ಹಕ್ಕನ್ನು ಕಸಿಯುವ ಅಧಿಕಾರ ಯಾರಿಗೂ ಇಲ್ಲಾ.
ಪ್ರೇಮಿಗಳೇ ಅದು ವ್ಯಾಲೆಂಟೈನ್ಸ್ ಡೇ ಆಗಲಿ ಮತ್ತೊಂದು ದಿನವೇ ಆಗಲಿ ನಿಮ್ಮ ಪ್ರೀತಿ ವರ್ಷವಿಡಿ ಹರಿಯುತ್ತಿರಲಿ. ಎಲ್ಲೆ ದಾಟದಿರಲಿ. ಪ್ರೀತಿ ಎಂಬ ಪ್ರಶಾಂತ ನದಿ ಕಾಮವೆಂಬ ಹುಚ್ಚು ಹೊಳೆಯಾಗದೇ ಹರಿಯಲಿ.
ನಿಮ್ಮ ಹೆತ್ತವರಿಗಲ್ಲದೇ ಯಾರಿಗೂ ಹೆದರುವ ಅಗತ್ಯವೇ ಇಲ್ಲ . ಪ್ರೇಮಿಸುವುದು ಪ್ರತಿಯೊಬ್ಬನ ಜನ್ಮ ಸಿದ್ದ ಹಕ್ಕು ಅದನ್ನು ಯಾರೂ ಕಸಿಯಲಾರರು.
ಎಲ್ಲರಿಗೂ ಹ್ಯಾಪ್ಪಿ ವ್ಯಾಲೆಂಟೈನ್ಸ್ ಡೇ.