ತಬ್ಬಲಿತಾಯಿ….
ಕವನ
ನಿಂತಿಹಳು ನೋಡಲ್ಲಿ ಒಬ್ಬ ತಾಯಿ
ಯಾಕಾದಳಾಕೆ, ತಬ್ಬಲಿ ತಾಯಿ….
ತಾ ಹಡೆದ ಎಲೆಗಳು
ತನ್ನನಗಲಿ
ಹಾರಿ ದೂರ ದೂರ......
ಬರ-ಬರಲು
ಆಕೆ ಒಡಲಾಗುತಿರಲು
ಬರಬಾರದೇನೋ ಪೋರ....
ಎಲೆ ಇರದೇ ಆಕೆ
ನಿಂತಿಹಳು ಯಾಕೆ
ಎಂದು, ನಿನ್ನ ನೀನು ಕೇಳು.....
ನಿನ್ನ ಹಡೆದ ಪಾಪ
ಆಕೆಯದ ಪಾಪ
ಎಂದು, ನೀನು ಹೇಳು.....
ತಾಯಿ ಬೇರು ನೋಡಿ
ಎಲ್ಲೆಲ್ಲಿ ಹರಡಿ
ಸಾರ ಸತ್ತ್ವ ಹೀರಿ.....
ಅದ ಉಂಡ ನೀನು
ಹಿಂಗಾದೆಯೇನು
ತಾಯಿಗೇನೆ ಆದೆ ಮಾರಿ....
ಎಷ್ಟು ಎತ್ತರೆತ್ತರಕೆ
ನೀನು ಬೆಳೆದರೂಆಗಲಿಲ್ಲ ಸೂರ....
ನೀ ನೆನೆಯದಿರಲು
ಒಳಗೆ ಹೂತು ಹೋದ
ತಾಯಿ ಬೇರ ಸಾರ....
Comments
ಉ: ತಬ್ಬಲಿತಾಯಿ….
In reply to ಉ: ತಬ್ಬಲಿತಾಯಿ…. by ಭಾಗ್ವತ
ಉ: ತಬ್ಬಲಿತಾಯಿ….
In reply to ಉ: ತಬ್ಬಲಿತಾಯಿ…. by Gonchalu
ಉ: ತಬ್ಬಲಿತಾಯಿ….
In reply to ಉ: ತಬ್ಬಲಿತಾಯಿ…. by ಭಾಗ್ವತ
ಉ: ತಬ್ಬಲಿತಾಯಿ….
In reply to ಉ: ತಬ್ಬಲಿತಾಯಿ…. by Gonchalu
ಉ: ತಬ್ಬಲಿತಾಯಿ….