ತಮ್ಮನ ಸಾವು

ತಮ್ಮನ ಸಾವು

ಕವನ

ಇದ್ದಕಿದ್ದ ಹಾಗೆ ಹೊರಟುಹೋಗುವೆ ಎಂದು ಅರಿವಾಗಲಿಲ್ಲ

ನಿದ್ದೆಯಿಂದ ಎದ್ದು ಹೋದಂತೆ

ಇದೇ ನಿನ್ನ ಅಂತಿಮ ದಿನವಾಯಿತ್ತಲ್ಲಾ

ಆಯಸ್ಸಿಗೆ ಗ್ರಹಣ ಬಡಿದಂತೆ.

ಇಂದಿನವರೆಗೂ ನಿನ್ನ ದ್ವೇಷಿಸುವವರು

ಕೂಡ ಹಿಡಿದು ಬಂದರು ಹೂವಿನ ಹಾರ

ಇದ್ದಾಗ ತೋರದ ಪ್ರೀತಿ ಮಮತೆ

ಸಾವಿನಲಿ ಮೂಡಿ ಬಂದಂತೆ.

ಎಲ್ಲಿಯೋ ನೀ ಸುಖವಾಗಿರುವೆ

ತವರಿನ ದೀಪವ ಬೆಳಗಲು

ಎಂದು ನೆಮ್ಮದಿಯಿಂದ ಇದ್ದ ಮನಸ್ಸಿಗೆ

ಹಚ್ಚಿ ಹೋದೆಯಲ್ಲ ನೋವಿನ ಕಿಚ್ಚು.

ಅತ್ತರೆನು ಬೊಬ್ಬಿರಿದರೇನು

ಎದೆ ಮೇಲೆ ಬಿದ್ದು ಕಂಬನಿಗೆರೆದರೇನು

ತಿರುಗಿ ಬಾರದ ಲೋಕವ ನೀ ಸೇರಿದ ಮೇಲೆ.

ಚಿತ್ರ್