ತರಣಿ

ತರಣಿ

ಕವನ

(ತಲ ಷಟ್ಪದಿಯಲ್ಲಿ)

ಸುಗ್ಗಿಗಿಂದು

ಹಿಗ್ಗ ತಂದು

ನುಗ್ಗಿ ನಿಂದ ನೇಸರ

ಕಗ್ಗಗೊಂದು

ಹಗ್ಗ ಬಿಗಿದು

ಜಗ್ಗಿ ಎಳೆದೆ ಪದಗಳ

 

ಜಗದ ಚಕ್ಷು

ಮೊಗದ ದಕ್ಷ

ಬಗಲ ತಾನು ಕದಲಿಸಿ

ತಗುಸಿ ಬಿಸಿಯ

ದಗದಗಿಸಲು

ದಗದ ಹೊರಟ ಬದಲಿಸಿ

 

ದಣಿದು ನಿಂತ

ಧರಣಿ ಪತಿಯ

ತರಣಿ ತಾನು ನೋಡುತ

ಕುಣಿತಗೊಂದು

ದಣಿಯನಿತ್ತ

ನಣಪು ತೋರಿ ಹೊಂದುತ

 

ಸಂಜನಿವನೆ

ಸಂಜೆ ವರೆಗೆ

ಪಂಜಿನಂತೆ ಉರಿವನು

ಹಂಜರದೊಳು

ನಂಜು ಹೀರಿ

ಸಂಜನಿಸುವ ಉರಿಯನು

-ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ

ಪದ ಅರ್ಥ: ಕಗ್ಗ. --ಕವನ,  ಚಕ್ಷು -ಕಣ್ಣು,  ತಗುಸಿ-ಕಡಿಮೆ, ದಗದ-ಕಾರ್ಯ, ದಣಿ-ದನಿ, ನಣಪು-ಪ್ರೀತಿ, ಸಂಜ-ಶಿವ, ಹಂಜರ -ಗೂಡು(ಮನೆ), ಸಂಜ -ಉತ್ಪಾದಿಸುವ 

 

ಚಿತ್ರ್