ತರಲೆ ಪ್ರಶ್ನೆಗಳು

ತರಲೆ ಪ್ರಶ್ನೆಗಳು

ಬರಹ
ತುಂಬ ಹಿಂದೆ, ಅಂದರೆ ನಾನು ತೈವಾನಿನಲ್ಲಿದ್ದಾಗ, ನಾನು ಜಾಲಿಗನಾದ ಆರಂಭದ ದಿನಗಳಲ್ಲಿ, soc.culture.indian.karnatakaದಲ್ಲಿ ತರಲೆ ಪ್ರಶ್ನೆಗಳನ್ನು ಆಗಾಗ ಕೇಳುತ್ತಿದ್ದೆ. ಅವು ತುಂಬ ಜನಪ್ರಿಯವೂ ಆಗಿದ್ದವು. ಅದನ್ನೇ ಮತ್ತೆ ನನ್ನ ವಿಶ್ವಕನ್ನಡದಲ್ಲೂ ಮುಂದುವರಿಸಿದೆ. ಅವುಗಳನ್ನು ಓದಿದವರಿಗೆ ತರಲೆ ಪ್ರಶ್ನೆಗಳ ಪರಿಚಯವಿರಬಹುದು. ಒಂದು ಉದಾಹರಣೆ- ಪ್ರ: ಕೋಳಿ ಯಾಕೆ ಮೊಟ್ಟೆ ಇಡುತ್ತದೆ? ಉ: ಯಾಕೆಂದರೆ ಹಾಕಿದರೆ ಒಡೆಯುತ್ತದೆ, ಅದಕ್ಕೆ ಈಗ ಕೆಲವು ಪ್ರಶ್ನೆಗಳು: 1. ಕೋಳಿ ಮೊದಲೋ, ಮೊಟ್ಟೆ ಮೊದಲೋ? 2. ಝಿಬ್ರಾ ಎನ್ನುವುದು ಬಿಳೀ ಪಟ್ಟಿಗಳುಳ್ಳ ಕಪ್ಪು ಪ್ರಾಣಿಯೋ, ಕಪ್ಪು ಪಟ್ಟಿಗಳುಳ್ಳ ಬಿಳಿ ಪ್ರಾಣಿಯೋ? 3. ಸಾವಿರಾರು ಕಿ.ಮೀ. ದೂರದಿಂದ ಹಕ್ಕಿಗಳು ರಂಗನತಿಟ್ಟಿಗೆ ಹಾರಿಕೊಂಡು ಬರುವುದು ಯಾಕೆ? 4. ಮೊಟ್ಟೆಯೊಂದನ್ನು ಕಾಂಕ್ರೀಟ್ ನೆಲಕ್ಕೆ ಅದನ್ನು ಒಟೆಯದಂತೆ ಬೀಳಿಸುವುದು ಹೇಗೆ? 5. ಕೆಂಪು ಸಮುದ್ರಕ್ಕೆ ಹಸಿರು ಕಲ್ಲು ಹಾಕಿದರೆ ಏನಾಗುತ್ತದೆ? ನಿಮ್ಮ ಉತ್ತರಗಳನ್ನು ದಾಖಲಿಸಿ. ಈ ಪ್ರರ್ಶನಗೆಳಿಗೆ ಇವೇ ಸರಿ ಉತ್ತರ ಎಂಬ ಕಾನೂನೇನಿಲ್ಲ. ಸಿಗೋಣ, ಪವನಜ