ತಲೆಯೆತ್ತಿ ಬಾಳು
ಕವನ
ಅವರಿವರ ನೋವಿಗೆ
ಸ್ಪಂದಿಸುವ ಗೆಳೆಯನೇ
ನಿನ್ನ ನೋವಿಗೆ ಓಡಿ ಬರುವರಾರಿಹರು
ಬೇಡಿ ಕಾಡಿದರೂ
ಓಡಿ ಬರಲಾರರು
ಅವರಿಗವರಾ ಕೆಲಸ ಇಹುದಂತೆ ಇಹರು
ಕಹಿ ಬೇವು ತಿನುವವಗೆ
ಸಿಹಿಯ ಪರಿಚಯವೆಲ್ಲಿ
ಬಾಳಿನೊಳು ಸವಿಮಾತ ಹೇಳುವನೇ ಅವನು
ಡಂಬಚಾರದ ಸುಳಿಗೆ
ಸಿಲುಕದೆಲೆ ಸಾಗುತಿರು
ಸಿಲುಕಿದರೆ ಕಣ್ಣೀರಾ ಮುಗಿಲ ಬಾನು
ಮನಸನ್ನು ಅರಿಯದೆಲೆ
ದ್ವೇಷವನು ಕಾರಿದರೆ
ಪ್ರೀತಿಯದು ದೊರಕುವುದೆ ನನಗೆ ನಿನಗೆ
ತತ್ವ ಪದಗಳೆ ಬೇಡ
ನೀತಿ ನಿಯಮಗಳಿಲ್ಲ
ಮತಿಗೆಟ್ಟ ನಡವಳಿಕೆ ಸುತ್ತ ಬೇಗೆ
ಬೇಕೆ ಕತ್ತಲ ಗೂಡು
ಸರಿಯಾದ ಬದುಕಿನಲಿ
ಯಾರು ಬರದೇ ಇರಲು ಕಾದು ನೋಡು
ಇಂದು ಮರೆಯುತ ನಾಳೆ
ಇರುವ ದಿನವನು ನೋಡಿ
ತಲೆಯೆತ್ತಿ ಬಾಳುವುದೇ ಜಗದ ಹಾಡು
-ಹಾ. ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
