ತಾತ , ಅರ್ಥವಾಗದೆ ಉಳಿದು ಬಿಟ್ಟೆ..!
ಕವನ
ಹಿಂಸೆಯೇ ಬೇಡ ಎಂದು ಸಾರಿ ಹೇಳಿ
ತ್ರಿರತ್ನದ ವಿಷಯದಲ್ಲಿ ಬಾಯಿ ಮುಚ್ಚಿ
ಒಂದೂ ಮಾತನಾಡದೆ ಮೌನಿಯಾದೆ
ಯುವಕರಿಗೆ ಅರ್ಥವಾಗದೆ ಉಳಿದು ಬಿಟ್ಟೆ...!
ನಗು ನಗುತಲೇ ಎಲ್ಲವ ಸಹಿಸಿದ ತಾತ
ಅರೆಬೆತ್ತಲೆ ಫಕೀರನಾಗಿ ಚರಕ ಹಿಡಿದೆ
ಸರಳ ಜೀವನವ ಅಳವಡಿಸಿಕೊಳ್ಳುತ
ಯುವಕರಿಗೆ ಅರ್ಥವಾಗದೆ ಉಳಿದು ಬಿಟ್ಟೆ...!
ಸತ್ಯದ ಗೆಳೆತನ ಮಾಡಿದ ರಾಷ್ಟ್ರಪಿತ
ಬದಲಿಸದೆ ಇರುತ ಉಪವಾಸದ ಹಠ
ಮುಂಚೂಣಿಯಲ್ಲಿ ಉಳಿದಿರುವೆ ತಾತ
ಯಾಕೋ ಯುವಕರು ಅರ್ಥೈಸಿಕೊಳ್ಳುತ್ತಿಲ್ಲ..!
ತಾತನ ಅರಿತರೆ ಅರಿವು ಮೂಡುವುದು
ನೆಮ್ಮದಿ ಇರುವ ಬದುಕು ಸಾಗುವುದು
ಬಿಸಿಯಾದ ರಕ್ತದ ಒತ್ತಡ ತಗ್ಗಿಸುವುದು
ಅನುಭವದ ಮುಂದೆ ಯೌವ್ವನ ಬಾಗುವುದು..!
ಮಹಾತ್ಮ ಗಾಂಧೀಜಿ ಜಯಂತಿಯ ಶುಭಾಶಯಗಳು
-ದ್ಯಾವಪ್ಪ ಎಂ.(ದ್ಯಾಮು)
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
