ತಾತ ಹೇಳಿದ ತೆಲಗು (ಮೂಲದ) ಕಥೆಗಳು

ತಾತ ಹೇಳಿದ ತೆಲಗು (ಮೂಲದ) ಕಥೆಗಳು

[ನಮ್ಮ ತಾತ (ತಾಯಿ ಕಡೆಯ ಅಜ್ಜ) ಆಂಧ್ರದ  ಹಿಂದೂಪುರದ ಬಳಿ ಇರುವ "ಗರಣಿ"ಯವರು. ಬೆಂಗಳೂರಲ್ಲಿ ಬಂದು ನೆಲಸಿ, ತಮ್ಮ ಬಾಲ್ಯದ ಕಥೆಗಳನೆಲ್ಲಾ ತೆಲುಗಿನ ಲವ-ಲೇಶವೂ ಬರದ ನಮಗೆ ಕನ್ನಡದಲ್ಲಿ ಹೇಳುತ್ತಿದ್ದರು. ಅಂತಹ ಕಥೆಗಳಲ್ಲಿ ಮೊದಲನೆಯದು ನಿಮಗಾಗಿ]

ಒಂದು ಊರಿನಲ್ಲಿ ಒಬ್ಬಳು ಸೊಸೆ ಇದ್ದಳಂತೆ. ಪಾಯಸ ಮಾಡಿ ಗಂಡನಿಗೆ ಬಡಿಸಬೇಕೆಂಬ ಆಸೆ, ಆದರೆ ಹೇಗೆ ಮಾಡುವುದು ಅನ್ನೋದು ಗೊತ್ತಿಲ್ಲ. ಮದುವೆಗೆ ಮುಂಚೆ ನನಗೆಲ್ಲ ಬರುತ್ತೆ ಅಂತ ಹೇಳಿದ ಮಾತು ನೆನಪಾಗಿತ್ತು. ಬೇರೆಯವರಲ್ಲಿ ಕೇಳಲು ಅಹಂಕಾರ /ನಾಚಿಕೆ ಅಡ್ಡ ಬಂತು.  ಹಾಗೂ ಹೀಗೂ ಮಾಡಿ ಪಕ್ಕದ ಮನೆ ಅಜ್ಜಿಯನ್ನು ಪಾಯಸ ಮಾಡುವುದು ಹೇಗೆ ಅಂತ ಕೇಳಿಯೇಬಿಟ್ಟಳು.
ಅಜ್ಜಿ :  ಮೊದಲಿಗೆ ಸ್ವಲ್ಪ ಬೆಲ್ಲ ತೊಗೋ 
ಸೊಸೆ: ಓ ಗೊತ್ತು ಗೊತ್ತು ಗೊತ್ತು. ಮುಂದೆ?
ಅಜ್ಜಿ :  ಬೆಲ್ಲ ಕಾಯಿಸ್ಕೋ
ಸೊಸೆ: ಓ ಬೆಲ್ಲ ಕರಗಿಸ್ಕೊದಿದ್ರೆ ಹೆಂಗೆ? ಅದೆಲ್ಲಾ ಗೊತ್ತು. ಮುಂದೆ?
ಅಜ್ಜಿ(ಸ್ವಲ್ಪ ಅಸಹನೆಯಿಂದ) : ಗಸಗಸೆ ಹುರ್ಕೋ
ಸೊಸೆ: ಓ ಗಸಗಸೆ ಹುರ್ಕೊಳ್ದೆ ಆಗುತ್ಯೇ? ನನಗೇನೂ ಅಷ್ಟೇನೂ ಗೊತ್ತಿಲ್ವೆ? ಮುಂದೇನು ಹೇಳಿ
ಅಜ್ಜಿ(ಸಿಟ್ಟು ಏರ್ತಿದ್ರೂ): ತೆಂಗಿನಕಾಯಿ ರುಬ್ಕೋ 
ಸೊಸೆ: ಸರಿ ಹೋಯ್ತು ರುಬ್ದೆ ಪಾಯಸ ಹೆಂಗ್ ಮಾಡ್ಲಿ? ಆಮೇಲೆ?
ಅಜ್ಜಿ : ಎಲ್ಲ ಒಂದು ಪಾತ್ರೆಗೆ ಹಾಕಿ ಕುದುಸ್ಕೋ
ಸೊಸೆ: ಅಯ್ಯೋ. ಇದೆಲ್ಲಾ ನಂಗೂ ಗೊತ್ತಿತ್ತು. ಅಷ್ಟೇ ತಾನೇ?
ಅಜ್ಜಿ : ಅಂದಹಾಗೆ ಮರ್ತಿದ್ದೆ. ಎಲ್ಲಾ ಆದ ಮೇಲೆ ಒಂದು ಸಣ್ಣ ಪಿಡಿಚೆ (ಉಂಡೆ) ಸಗಣಿ ಹಾಕು
ಸೊಸೆ: ಮತ್ತೆ ಹಾಕದೆ ಇರ್ತಾರ? ನೀವು ಹೇಳದಿದ್ರೂ ಹಾಕ್ತಿದ್ದೆ!

ಇವಳ ಕೈ ಪಾಯಸ ತಿನ್ನಬೇಕಾದವನ ಕರ್ಮ ನೆನೆದು ಅಜ್ಜಿ ಒಮ್ಮೆ ರಾಮಾ ಕೃಷ್ಣಾ ಅಂದ್ಲು

Comments