ತಾಯಿಯಾಕೆ...!
ಕವನ
ಕೈ ಸುಟ್ಟರೂ ತೋರಿಸದೆ ಕೈತುತ್ತು ನೀಡಿದಾಕೆ
ಕಷ್ಟಗಳ ನಡುವಲ್ಲೂ ಕಾಳಜಿಯ ತೋರಿದಾಕೆ
ವಸುಧೆಗೂ ನಿಲುಕದ ವಾತ್ಸಲ್ಯವ ಎರೆದಾಕೆ
ಕಾರಣವೊಂದೇ... ತಾಯಿಯಾಕೆ!!..
ಜನನಕೂ ಜರೆದರು ಅವಳನ್ನು ಹೆಣ್ಣೆಂದು,
ಶಕುನಗಳ ಬಂಧನದಿ ಸವೆಸಿದಳು ಬದುಕನ್ನು
ನೋಟಿನಲಿ ಲಕ್ಷ್ಮಿಯನು ಪ್ರೀತಿಸುವ ಮನುಜರಿಗೆ
ಗೃಹಲಕ್ಷ್ಮಿ ಸಿಂಗಾರ ಬೇಡದಾಯಿತು...
ಕಂಬನಿಯ ಕಣ್ಣೊರೆಸಿ ಕರುಣೆಯನು ಕಲಿಸಿದಳು
ಅಳುವೆಂಬ ಸಮಯದಲಿ ಆಲಿಂಗನ ಬಯಸಿದಳು
ಕಾಲೆಳೆಯುವ ಕಾಲದಲಿ ಕಲೆಯನ್ನು ಬೆಳೆಸಿದಳು
ಕರುಳ ಕುಡಿಗಳ ಕಣ್ಣಿಗೆ ಚಂದಿರನನೇ ತಂದಳು...
ಅಗಣಿತ ಅವಮಾನಗಳನ್ನು ಸಹಿಸಿದಾಕೆ
ಅಪರಿಮಿತ ಆಗಸದಿ ಮಿನುಗುವಾಕೆ
ಅಂಬುಧಿಯ ಗಾತ್ರದಲಿ ಸಲಹುವಾಕೆ
ಕಾರಣವೊಂದೇ.... ತಾಯಿಯಾಕೆ!!..
ಕುರುಡಿಯೋ ಕುಂಟಿಯೋ ಮೂಕಿಯೋ ಮುದುಕಿಯೋ
ತಾಯಲ್ಲವೇ ಅವಳು, ನಮ್ಮ ಹರಸಿದಾಕೆ
ಸ್ವಾರ್ಥದ ನಡುವೆಯೇ ನೈಜ ಪ್ರೀತಿಯ ಪೊರೆದಾಕೆ
ತಾವರೆಯೇ ಅವಳು... ತಾಯಿಯಾಕೆ!!..
-“ಮೌನರಾಗ” ಸನಂ... (ಶಮೀರ್ ನಂದಿಬೆಟ್ಟ)
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್