ತಾಯಿ ಬೇಕು ಇಲ್ಲವೆ ಬಾಯಿ ಬೇಕು.
ಬರಹ
ಕಂಡ ಕಂಡ ದೇವರಿಗೆಲ್ಲ ಕೈ ಮುಗಿದರೂ ಗಂಡನಿಲ್ಲದೆ ಮಕ್ಕಳಾಗವು.
ಏಟು ಬೀಳದ ಹೊರತು ದೆವ್ವ ಬಿಡುವದಿಲ್ಲ ;
ಎಲ್ಲ ಬಲ್ಲಪ್ಪ ಕೇಳಿದರೆ ಕಲ್ಲಪ್ಪ
ಎಲೆ ತುದಿಗೆ ಪಲ್ಯ ಇರಬೇಕು ; ಹಾಸಿಗೆ ತುದಿಗೆ ಹೆಂಡತಿ ಇರಬೇಕು.
ಎಮ್ಮೆಯ ಉಚ್ಚೆ ಇರುವೆಗೆ ಜಲಪ್ರಳಯ
ಎತ್ತು ಮಾರಿದವನಿಗೆ ಹಗ್ಗದ ಆಸೆಯೇ ?
ಎತ್ತಿಗೆ ಭತ್ತದ ಚಿಂತೆ ಯಾತಕ್ಕೆ?
ಎತ್ತನ್ನು ಕದ್ದ ಕಳ್ಳ ಹಗ್ಗ ಮರೆಯುವನೇ?
ಕದ್ದ ರೊಟ್ಟಿ ಬೇರೆ , ದೇವರ ಪ್ರಸಾದ ಬೇರೆ.
ಕಸ ತಿನ್ನುವದಕ್ಕಿಂತ ತುಸ ತಿನ್ನುವದು ಮೇಲು.
ಕಳ್ಳನನ್ನ ಕಾವಲಿಗಿಟ್ಟ ಹಾಗೆ
'ಕುರಿ ಕಾಯ್ತೀಯ, ತೋಳ?' ಅಂದರೆ 'ಸಂಬಳ ಬೇಡ- ಹಾಗೇ ಕಾಯ್ತೀನಿ ಅಂದ ಹಾಗೆ'
ತಾಯಿ ಬೇಕು ಇಲ್ಲವೆ ಬಾಯಿ ಬೇಕು.