ತಾಯಿ ಬೇರು

ತಾಯಿ ಬೇರು

ಕವನ

ನೀನು ತಾಯಿ ಬೇರು ಆಗೆ

ನಾವು ಅದರ ಜೊತೆಗಳು

ತಿದ್ದಿ ತೀಡ್ವಾ ಕೈಗಳಿರಲು

ಬದುಕಿನೊಳಗೆ ಚಂದವು

 

ಮನಸ್ಸೊ ಇಚ್ಛೆ ನಿನ್ನ ಜೊತೆಗೆ

ಆಟವಾಡಿ ನಲಿಯಲು

ರಾತ್ರಿಯಾಗೆ ಕತೆಯ ಹೇಳಿ

ನಮ್ಮ ಕೂಡೆ ಮಲಗಲು

 

ಮಾತೆಯೊಡಲ ಮಡಿಲ ಪ್ರೇಮ

ನಮ್ಮೊಳೆಂದು ಕಾಣಲಿ

ಅವಳ ನಡೆಯ ನುಡಿಯನರಿತು 

ಬಾಳಬೇಕು ದಿಟದಲಿ

***

ಗಝಲ್

ವಿಮರ್ಶೆಗಳು ಹುಟ್ಟುತ್ತಲೆ ಸಾಯಬಾರದು 

ಬರಹಗಳು ಅರಳುತ್ತಲೆ ಬಾಡಬಾರದು 

 

ಗೀತೆಗಳು ಮೊಳಗುತ್ತಲೆ ಸಾರಬಾರದು 

ನಡತೆಗಳು ಕಾಣುತ್ತಲೆ ಓಡಬಾರದು 

 

ನೀತಿಗಳು ಸೇರುತ್ತಲೆ ಕಾರಬಾರದು 

ದೇಹಗಳು ದಣಿಯುತ್ತಲೆ ದೂರಬಾರದು 

 

ಮುತ್ತುಗಳು ಬೆಸೆಯುತ್ತಲೆ ಜಾರಬಾರದು 

ದೀಪಗಳು ಬೆಳಗುತ್ತಲೆ ಚೀರಬಾರದು 

 

ಮೌನಗಳು ಮಿನುಗುತ್ತಲೆ ಹೂಳಬಾರದು 

ಬಂಧಗಳು ಸೆಳೆಯುತ್ತಲೆ ತೂರಬಾರದು 

 

-ಹಾ ಮ ಸತೀಶ ಬೆಂಗಳೂರು

ಚಿತ್ರ್